ಈ ವಾರದ 'ವೀಕೆಂಡ್‌ ವಿತ್ ರಮೇಶ್‌'ನಲ್ಲಿ ಇಬ್ಬರು ಸಾಧಕರು; ಒಬ್ಬರು ವೈದ್ಯರಾದ್ರೆ ಮತ್ತೊಬ್ಬರು ಹಿರಿಯ ನಟ

Published : Apr 05, 2023, 11:09 AM ISTUpdated : Apr 05, 2023, 03:39 PM IST
ಈ ವಾರದ 'ವೀಕೆಂಡ್‌ ವಿತ್ ರಮೇಶ್‌'ನಲ್ಲಿ ಇಬ್ಬರು ಸಾಧಕರು; ಒಬ್ಬರು ವೈದ್ಯರಾದ್ರೆ ಮತ್ತೊಬ್ಬರು ಹಿರಿಯ ನಟ

ಸಾರಾಂಶ

ವೀಕೆಂಡ್ ವಿತ್ ರಮೇಶ್ ಸೀಸನ್ 5, 3ನೇ ವಾರ ಮತ್ತಷ್ಟು ಇಂಟ್ರಸ್ಟಿಂಗ್ ಆಗಿದೆ. ಯಾಕೆಂದರೆ ಈ ಬಾರಿ ವೀಕೆಂಡ್ ಕಾರ್ಯಕ್ರಮಕ್ಕೆ ಇಬ್ಬರೂ ಸಾಧಕರು ಬರುತ್ತಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸೀಸನ್ 5, 3ನೇ ವಾರ ಮತ್ತಷ್ಟು ಇಂಟ್ರಸ್ಟಿಂಗ್ ಆಗಿದೆ. ಯಾಕೆಂದರೆ ಈ ಬಾರಿ ವೀಕೆಂಡ್ ಕಾರ್ಯಕ್ರಮಕ್ಕೆ ಇಬ್ಬರೂ ಸಾಧಕರು ಬರುತ್ತಿದ್ದಾರೆ. ಈ ಬಾರಿಯ ಅತಿಥಿ ಯಾರು ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಾಣಿಸಿಕೊಂಡಿದ್ದರು. ಎರಡನೇ ಅತಿಥಿ ಖ್ಯಾತ ಡಾನ್ಸರ್, ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಪ್ರಭುದೇವ ಕಾಣಿಸಿಕೊಂಡಿದ್ದರು. 3ನೇ ವಾರದ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಬಹಿರಂಗವಾಗಿದೆ. ಈ ಮೊದಲ ಸಾಧಕರ ಕುರ್ಚಿಯಲ್ಲಿ ಖ್ಯಾತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ವೀಕೆಂಡ್ ಕುರ್ಚಿಯಲ್ಲಿ ಡಾ. ಸಿ ಎನ್ ಮಂಜುನಾಥ್ ಅವರನ್ನು ನೋಡಿ ಪ್ರೇಕ್ಷಕರು ಪುಲ್ ಖುಷ್ ಆಗಿದ್ದಾರೆ. ಇವರ ಜೊತೆಗೆ ಈ ಬಾರಿ ಮತ್ತೋರ್ವ ಅತಿಥಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಮತ್ಯಾರು ಖ್ಯಾತ ನಟ ದತ್ತಣ್ಣ. 

ಈ ವಾರದ ಅತಿಥಿಗಳನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಇಬ್ಬರೂ ಸೂಪರ್ ಗೆಸ್ಟ್ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಕಿರೀಟ ದತ್ತಣ್ಣ ಸರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಈ ವಾರದ ಶನಿವಾರ ಮತ್ತು ಭಾನುವಾರ ಒಬ್ಬರು ಅತಿಥಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಜೀ ವಾಹಿನಿ ದತ್ತಣ್ಣ ಮತ್ತು ಮಂಜುನಾಥ್ ಅವರ ಫೋಟೋವನ್ನು ಬ್ಲರ್ ಮಾಡಿ ಶೇರ್ ಮಾಡಿದ್ದಾರೆ. ಯಾರೆಂದು ಗೆಸ್ ಮಾಡಿ ಅಂತ ಪ್ರೇಕ್ಷಕರಿಗೆ ಹೇಳಿದ್ದಾರೆ. ಪೋಸ್ಟರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

80 ವರ್ಷದ ನಟ ದತ್ತಣ್ಣ ಸಿನಿಮಾ ನಟರಾಗುವ ಮೊದಲು ಏರ್ ಫೋರ್ಸ್‌ನಲ್ಲಿ ಕೆಲಸ ಮಾಡಿದ್ದರು. ಆರಂಭಿಕ ದಿನಗಳಿಂದನೂ ನಟನೆಯಲ್ಲಿ ಆಪರ ಆಸಕ್ತಿ ಹೊಂದಿದ್ದ ದತ್ತಣ್ಣ ಅನೇಕ ನಾಟಕಗಳಲ್ಲಿ ಅಭಿನಂಟಿಸಿದ್ದಾರೆ. 1988ರಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಮಿಂಚಿದರು. ಟಿಎಸ್ ನಾಗಾಭರಣ ಅವರ ಆಸ್ಪೋಟ ಸಿನಿಮಾದಲ್ಲಿ ಕಾಣಿಸಿಕೊಂಡಿದರು. ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ ಗೆದ್ದುಕೊಂಡರು. ಅಲ್ಲಿಂದ ಪ್ರಾರಂಭವಾದ ಸಿನಿಮಾ ಜರ್ನಿ ಇಂದಿಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಕನ್ನಡದ ಜೊತೆಗೆ ದತ್ತಣ್ಣ ಹಿಂದಿಯಲ್ಲೂ ನಟಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿರುವ ದತ್ತಣ್ಣ ಅವರನ್ನು ಸಾಧಕರ ಕುರ್ಚಿಯಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಪುಣ್ಯಾತ್ಮ, ಕನ್ನಡಿಗರ ಹೆಮ್ಮೆ, ಸೂಪರ್ ಗೆಸ್ಟ್: ವೀಕೆಂಡ್ ಕುರ್ಚಿಯಲ್ಲಿ ಡಾ. ಸಿ ಎನ್ ಮಂಜುನಾಥ್

ಖ್ಯಾತ ವೈದ್ಯ ಡಾ.ಸಿ ಎನ್ ಮಂಜುನಾಥ್ 

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಮಾಜಿ ಪ್ರಧಾನಿ ದೇವೇಗೌಡರ ಅಳಿಯ.  ಇವರು ತಮ್ಮ ವ್ಯಕ್ತಿತ್ವ, ಕೆಲಸ, ಶಿಸ್ತು, ಸೂಕ್ತ ನಿರ್ದೇಶನ, ಮಾರ್ಗದರ್ಶನ ಸೇರಿದಂತೆ ಉತ್ತಮ ಗುಣಗಳಿಂದ ಗುರುತಿಸಿಕೊಂಡಿರುವ ನೆಚ್ಚಿನ ನಿರ್ದೇಶಕರು. ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ಕೇವಲ ಸಿನಿಮಾ ಸಾಧಕರನ್ನು ಮಾತ್ರ ಕರೆತಾರುತ್ತಾರೆ, ಕನ್ನಡ ಮಾತಾಡೋಕ್ಕೆ ಬರದೇ ಇರುವವರನ್ನು ಕರೆತರುತ್ತೀರಾ ಎಂದು ಪ್ರೇಕ್ಷಕರು ಬೇಸರ ಹೊರಹಾಕುತ್ತಿದ್ದರು. ಆದರೆ ಈಗ ವೀಕೆಂಡ್ ಕುರ್ಚಿಯಲ್ಲಿ ಡಾ.ಸಿ ಎನ್ ಮಂಜುನಾಥ್ ಮತ್ತು ದತ್ತಣ್ಣ ಅವರನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!