
ಸ್ಯಾಂಡಲ್‌ವುಡ್ ಗೋಲ್ಡನ್ ಕ್ಷೀನ್ ಅಮೂಲ್ಯ ಅವರಿಗೆ ಸಹೋದರಿ ಇದ್ದಾರಾ? ಇವರು ಯಾವ ಧಾರಾವಾಹಿ ಬಗ್ಗೆ ಹೇಳುತ್ತಿದ್ದಾರೆ ಎಂದು ನೀವು ಯೋಚನೆ ಮಾಡುತ್ತಿದ್ದರೇ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗೀತಾ' ಈಗಾಗಲೇ 100ಕ್ಕೂ ಹೆಚ್ಚು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ನಟಿ ಅಮೂಲ್ಯ ಮಾತನಾಡುವ ಮೂಲಕ ಯಾರಿಗೂ ತಿಳಿಯದ ವಿಚಾರವೊಂದನ್ನು ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಹೌದು! ಗೀತಾ ಧಾರಾವಾಹಿಯ ಪಾತ್ರಧಾರಿ ಗೀತಾ ಅಲಿಯಾಸ್ ಭವ್ಯಾಗೌಡ ನಟಿ ಅಮೂಲ್ಯ ಸಹೋದರಿ ಅಂತೆ. ಈ ಹಿಂದೆ ಅಮೂಲ್ಯ ಆಪ್ತ ಸ್ನೇಹಿತೆ ವೈಷ್ಣವಿ ಅಭಿನಯದ ಧಾರಾವಾಹಿ ಅಗ್ನಿಸಾಕ್ಷಿ' ಪ್ರಸಾರವಾಗುತ್ತಿದ್ದ ಸಮಯದಲ್ಲೇ ಈಗ ಗೀತಾ ಬರ್ತಿದೆ. ಇದು ಒಂದು ಬೆಸ್ಟ್ ಧಾರಾವಾಹಿ. ಗೀತಾನಲ್ಲಿ ಗೀತಾ ಅಗಿರುವವಳು ನನ್ನ ಕಸಿನ್ ತಂಗಿ. ಆಕೆ ಅದ್ಭುತ ಕೆಲಸ ಮಾಡುತ್ತಿದ್ದಾಳೆ. ನಾವೆಲ್ಲ ಕುಟುಂಬದವರೂ 8 ಗಂಟೆ ಆದ್ರೆ ಸಾಕು ಸೀರಿಯಲ್ ನೋಡೋಕೆ ಶುರು ಮಾಡುತ್ತೇವೆ. ಪ್ರತಿ ದಿನವೂ ವಿಭಿನ್ನ ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಿದೆ' ಎಂದು ಅಮೂಲ್ಯ ಮಾತನಾಡಿದ್ದಾರೆ.
ಕೆ ಎಸ್ ರಾಮ್‌ಜಿ ಗೀತಾ ಧಾರಾವಾಹಿಯನ್ನು ನಿರ್ದೇಶಿಸಿದ್ದರೆ ಶೀರ್ಷಿಕೆ ಗೀತೆಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಧ್ವನಿ ನೀಡಿದ್ದಾರೆ. ಧನುಶ್ ಗೌಡ್ ಮತ್ತು ಭವ್ಯಾ ಗೌಡ ಜೋಡಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಿರಿವಂತ ಹುಡುಗ ಮತ್ತು ಹೂ ಮಾರುವ ಸ್ವಾಭಿಮಾನಿ ಹುಡುಗಿ ನಡುವೆ ಬೆಳೆಯುವ ಸಂಘರ್ಷದ ಸಂಬಂಧದ ಬಗ್ಗೆ ಈ ಕತೆ ಅದ್ಬುತವಾಗಿ ಮೂಡಿಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.