ನಾಲ್ಕು ಜನ ಹೆಣ್ಣುಮಕ್ಕಳು ಪ್ರತಿನಿತ್ಯ ಕೆಟ್ಟ ಕಾಮೆಂಟ್, ಅವಮಾನ ಮತ್ತು ಟ್ರೋಲ್ ಎದುರಿಸಿದ್ದೀವಿ; ಕಣ್ಣೀರಿಟ್ಟ 'ಗೀತಾ' ಭವ್ಯಾ ಗೌಡ

Published : Feb 20, 2023, 03:29 PM ISTUpdated : Feb 20, 2023, 03:34 PM IST
ನಾಲ್ಕು ಜನ ಹೆಣ್ಣುಮಕ್ಕಳು ಪ್ರತಿನಿತ್ಯ ಕೆಟ್ಟ ಕಾಮೆಂಟ್, ಅವಮಾನ ಮತ್ತು ಟ್ರೋಲ್ ಎದುರಿಸಿದ್ದೀವಿ; ಕಣ್ಣೀರಿಟ್ಟ 'ಗೀತಾ' ಭವ್ಯಾ ಗೌಡ

ಸಾರಾಂಶ

ರಿಯಲ್ ಲೈಫ್‌ ಅಮ್ಮನ ಜೊತೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಕಾಣಿಸಿಕೊಂಡ ಗೀತಾ. ಬಹಿರಂಗವಾಗಿ ಕ್ಷಮೆ ಕೇಳಲು ಕಾರಣವೇನು?

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರಿಯಾಲಿಟಿ ಶೋ ಫಿನಾಲೆ ಕಾರ್ಯಕ್ರಮದಲ್ಲಿ ಗೀತಾ ಧಾರಾವಾಹಿಯ ಭವ್ಯಾ ಗೌಡ ಮತ್ತು ಅವರ ರಿಯಲ್ ಅಮ್ಮ ಆಗಮಿಸಿದ್ದರು. ತಮ್ಮ ಜೀವನದಲ್ಲಿ ಯಾರು ಸೂಪರ್ ಸ್ಟಾರ್ ಎಂದು ಗೀತಾ ಮಾತನಾಡಿದ್ದಾರೆ.

ಭವ್ಯಾ ಗೌಡ ಕೈ ಹಿಡಿಯಲಿರುವ ಹುಡುಗ ಹೇಗಿರಬೇಕು ಎಂದು ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಜಾನವಿ ಕೇಳಿದ್ದಾರೆ. ನಾಚಿಕೊಳ್ಳುತ್ತಲೇ' ಈಗಿನ ಕಾಲದ ಮಕ್ಕಳು ನಾವು ಇಷ್ಟ ಪಟ್ಟ ರೀತಿ ಏನೂ ಇಲ್ಲ ಅವರು ಆಯ್ಕೆ ಮಾಡುವುದನ್ನು ನಾವು ಒಪ್ಪಿಕೊಳ್ಳಬೇಕು ಖಂಡಿತ ಒಪ್ಪಿಕೊಳ್ಳುವೆ. ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾಕು' ಎಂದು ಗೀತಾ ತಾಯಿ ಹೇಳಿದ್ದಾರೆ. 'ಅರೇಂಜ್ಡ್‌ ಮ್ಯಾರೇಜ್ ಆಗಬೇಕು ಅನ್ನೋ ಆಸೆ ತುಂಬಾ ಇದೆ' ಎಂದು ಗೀತಾ ಹೇಳಿದ್ದಾರೆ.

'ಪ್ರತಿಯೊಬ್ಬರ ಜೀವನದಲ್ಲೂ ಅವರ ತಾಯಿನೇ ಸೂಪರ್ ಸ್ಟಾರ್. ನನ್ನ ಲೈಫಲ್ಲಿ ಅಮ್ಮ ಯಾಕೆ ಸ್ಟಾರ್ ಅಂದ್ರೆ ಎಲ್ಲನೂ ತ್ಯಾಗ ಮಾಡಿದ್ದಾರೆ. ನಾವು ನಾಲ್ಕು ಜನ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಿಂದ ಕಷ್ಟ ನೋಡಿಕೊಂಡರು ಬರುತ್ತಿದ್ದೀವಿ. ನಾವು ನಾಲ್ಕು ಜನರನ್ನು ಬೆಳೆಸುವಾಗ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ನಿಮ್ಮ ಹೆಣ್ಣು ಮಕ್ಕಳು ಬೀದಿಗೆ ತರುತ್ತಾರೆ ಬಿಡು ಅಂತ ಮಾತನಾಡಿದ್ದಾರೆ. ಆ ನೋವನ್ನು ಬಚ್ಚಿಟ್ಟುಕೊಂಡು ಕಷ್ಟ ಪಟ್ಟು ಇಷ್ಟ ಪಟ್ಟು ಬೆಳೆಸಿದ್ದಾರೆ. ನಾನು ಸ್ಕ್ರೀನ್ ಮೇಲೆ ಬರಬೇಕು ಅನ್ನೋದು ನನ್ನ ತಾಯಿ ಆಸೆ ಆಗಿತ್ತು. ಸುಮ್ಮನೆ ಪ್ರಯತ್ನ ಪಟ್ಟೆ ಅವಕಾಶ ಸಿಗ್ತು. ಅವಕಾಶ ಸಿಕ್ಕಿದ ಮೇಲೆ ತುಂಬಾ ಅವಮಾನ ಎದುರಿಸಿದೆ ದಿನ ಟ್ರೋಲ್ ಮಾಡುತ್ತಿದ್ದರು ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು ಆಗ ಅಮ್ಮ ಒಂದು ಮಾತು ಹೇಳಿದ್ದರು ನೀನು ಏನೆಂದು ನಿನಗೆ ಗೊತ್ತು ನನಗೆ ನಿನ್ನ ಬಗ್ಗೆ ಗೊತ್ತು ಎಂದು ಹೇಳಿ ಧೈರ್ಯ ತುಂಬಿದರು. ನನ್ನ ತಾಯಿ ಆಶೀರ್ವಾದದಿಂದ ಇಷ್ಟು ವರ್ಷ ಜರ್ನಿ ನಡೆದಿದೆ' ಎಂದು ಗೀತಾ ಮಾತನಾಡಿದ್ದಾರೆ.

Stylish Actress Bhavya Gowda: ಗೌರಮ್ಮ 'ಗೀತಾ' ಬಟ್ಟೆ ಇಷ್ಟು ತುಂಡ್ಯಾಕಮ್ಮ ಎಂದ ನೆಟ್ಟಿಗರು!

'ಅಮ್ಮ ಮೊದಲು ನಿನಗೆ ಕ್ಷಮೆ ಕೇಳುವೆ. ಶೂಟಿಂಗ್ ಕೆಲಸ ಪ್ರೆಶರ್‌ ಕೋಪ ಎಲ್ಲವೂ ನಿನ್ನ ಮೇಲೆ ತೋರಿಸಿರುವೆ. ದಿನ ಬೆಳಗ್ಗೆ 4 ಗಂಟೆಗೆ ಎದ್ದು ಬಾಕ್ಸ್ ಪ್ಯಾಕ್ ಮಾಡುವೆ. ನೀನು ನನ್ನ ಮೇಲೆ ತುಂಬಾ ಪ್ರೀತಿ ತೋರಿಸುವೆ ನಾನು ತುಂಬಾ ಕಿರಿಕಿರಿ ಮಾಡಿದ್ದರೂ ಅದೇ ಪ್ರೀತಿ ನನಗೆ ಕೊಡುತ್ತಿರುವೆ. ನಿನ್ನ ಜೊತೆ ಸಮಯ ಕಳೆಯುಲು ಆಗುತ್ತಿಲ್ಲ ಸಮಯ ಕೊಡುವೆ. ಹೈದರಾಬಾದ್‌ಗೆ ಹೋದಾಗ ಹುಷಾರಿ ಇಲ್ಲ ಅನ್ನೋ ವಿಚಾರ ನಿನ್ನಿಂದ ಮುಚ್ಚಿಟಾಗ ನೀನು ಫೋನ್‌ ಮಾಡಿ ಅತ್ತಿರುವೆ. ಇದಕ್ಕೆಲ್ಲಾ ಕ್ಷಮೆ ಕೇಳುವೆ. ನನ್ನ ಇರಿಟೇಷನ್‌ ನಾನೇ ಅನುಭವಿಸುವೆ ನಿನ್ನ ಮೇಲೆ ತೋರಿಸುವುದಿಲ್ಲ' ಎಂದಿದ್ದಾರೆ ಗೀತಾ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?