ಮೊದಲ ಇನ್ಸ್ಟಾ ಲೈವ್‌ನಲ್ಲೇ ದಾಖಲೆ ಬರೆದ ಬಿಗ್ ಬಾಸ್ ವಿನ್ನರ್ ಎಂಸಿ ಸ್ಟಾನ್; ಶಾರುಖ್ ದಾಖಲೆಯೂ ಪುಡಿ ಪುಡಿ

Published : Feb 17, 2023, 04:15 PM IST
ಮೊದಲ ಇನ್ಸ್ಟಾ ಲೈವ್‌ನಲ್ಲೇ ದಾಖಲೆ ಬರೆದ ಬಿಗ್ ಬಾಸ್ ವಿನ್ನರ್ ಎಂಸಿ ಸ್ಟಾನ್; ಶಾರುಖ್ ದಾಖಲೆಯೂ ಪುಡಿ ಪುಡಿ

ಸಾರಾಂಶ

ಬಿಗಿ ಬಾಸ್ ಹಿಂದಿ ಸೀಸನ್ 16 ವಿನ್ನರ್ ಎಂಸಿ ಸ್ಟಾನ್ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಶಾರುಖ್ ಖಾನ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 

ಹಿಂದಿ ಬಿಗ್ ಬಾಸ್ ಸೀಸನ್ 16ಗೆ ಅದ್ದೂರಿ ತೆರೆಬಿದಿದ್ದು ರ್ಯಾಪರ್ ಎಂಸಿ ಸ್ಟಾನ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಸ್ಟಾನ್ ಬಿಗ್ ಬಳಿಕವೂ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ ಅದ್ದೂರಿ ಫಿನಾಲೆಯಲ್ಲಿ ಎಂಸಿ ಸ್ಟಾನ್ ಅವರನ್ನು ವಿನ್ನರ್ ಎಂದು ಘೋಷಿಸಲಾಯಿತು. ಖ್ಯಾತ ರಾಪರ್ ಎಂಸಿ ಸ್ಟಾನ್ ಸಹ ಸ್ಪರ್ಧಿಗಳನ್ನು ಸೋಲಿಸಿ ಗೆದ್ದು ಬೀಗಿದರು. 

ಎಂಸಿ ಸ್ಟಾನ್ ಮೂಲ ಹೆಸರು ಅಲ್ತಾಫ್ ಶೇಖ್. ಪುಣೆ ಮೂಲದ ಎಂಸಿ ಸ್ಟಾನ್ ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದ್ದಾರೆ. ಬಿಗ್ ಬಾಸ್ ಬಳಿಕ ಎಂಸಿ ಸ್ಟಾನ್ ಇನ್ಸ್ಟಾಲೈವ್ ನಲ್ಲಿ ದಾಖಲೆ ಬರೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಒಬ್ಬರಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಬಿಗ್ ಬಾಸ್ ವಿನ್ ಆದ ಬಳಿಕ ರ್ಯಾಪರ್ ಗುರುವಾರ ಸಂಜೆ ಇನ್ಸಸ್ಟಾಗ್ರಾಮ್ ಲೈವ್ ಬಂದಿದ್ದರು.  ಮೊದಲ ಬಾರಿಗೆ ಲೈವ್ ಬಂದಿದ್ದ ಸ್ಟಾನ್ ಸಂವಾದದಲ್ಲಿ 541 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಒಮ್ಮೆಗೆ ಲೈವ್ ವೀಕ್ಷಿಸಿದರು. ಈ ಮೂಲಕ ಸ್ಟಾನ್ ಹೊಸ ದಾಖಲೆ ಬರೆದರು. ಈ ಮೂಲಕ ಸ್ಟಾರ್ ಇನ್ಸ್ಟಾದಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಸೆಲೆಬ್ರಿಟಿ ಆಗಿದ್ದಾರೆ. 

ಬಿಗ್ ಬಾಸ್ ವಿನ್ನರ್ ಸ್ಟಾನ್, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ದಾಖಲೆಯನ್ನು ಬ್ರೇಕ್ ಮಾಡಿದರು. ಶಾರುಖ್ ಅವರ 255k ದಾಖಲೆಯನ್ನು ಮುರಿದರು. ಈ ಬಗ್ಗೆ ಎಂಸಿ ಸ್ಟಾನ್ ಪ್ರತಿಕ್ರಿಯೆ ನೀಡಿದ್ದು, 'ನೀವು ಹಾಡುಗಳನ್ನು ಮಾಡಿ, ನಾನು ಹಿಸ್ಟರಿ ಮಾಡ್ತೇನೆ. ಇದೆಲ್ಲವೂ ನಿಮ್ಮ ಆಶೀರ್ವಾದ.. ಅಲ್‌ಹಮ್‌ದುಲಿಲ್ಲಾ ಧನ್ಯವಾದಗಳು' ಎಂದು ಹೇಳಿದ್ದಾರೆ. 

ಬಿಗ್ ಬಾಸ್ ನಲ್ಲಿ 31 ಲಕ್ಷ ರೂ. ಮತ್ತು ಕಾರು ಗೆದ್ದ ಸ್ಟಾನ್ 

ಬಿಗ್ ಬಾಸ್ ಸೀಸನ್ 16 ಪಟ್ಟ ಗೆದ್ದ ಎಂಸಿ ಸ್ಟಾನ್ ಟ್ರೋಫಿ ಜೊತೆಗೆ ನಗದು ಮತ್ತು ಕಾರನ್ನು ಬಹುಮಾನ ಪಡೆಡಿದ್ದಾರೆ. ಬರೋಬ್ಬರಿ 31 ಲಕ್ಷ ನಗದು ಮತ್ತು ಕಾರನ್ನು ಎಂಸಿ ಸ್ಟಾನ್ ಗೆದ್ದುಕೊಂಡಿದ್ದಾರೆ. ವಿನ್ನರ್ ಆಗಿ ಹೊರ ಹೊಮ್ಮಿದ ಎಂಸಿ ಸ್ಟಾನ್ ವೇದಿಕೆ ಮೇಲೆ ಸಂಭ್ರಮದಿಂದ ಕುಣಿದರು. ಗೆದ್ದು ಮಾತನಾಡಿದ ಸ್ಟಾನ್, 'ಸರ್, ನೀವು ನನಗೆ ಕಲಿಸಿದ ಪ್ರತಿಯೊಂದಕ್ಕೂ ನಿಮಗೆ ಕೃತಜ್ಞನಾಗಿದ್ದೇನೆ. ನೀವು ಅತ್ಯಂತನಿಜವಾದ ವ್ಯಕ್ತಿ. ನನ್ನ ಪೋಷಕರು ತುಂಬಾ ಹೆಮ್ಮೆ ಪಡುತ್ತಾರೆ ಎಂದು ಗೊತ್ತಿದೆ. ಎಲ್ಲರಿಗೂ ನನ್ನ ಪ್ರೀತಿ' ಎಂದು ಹೇಳಿದರು. 

Bigg Boss 16; ಹಿಂದಿ ಬಿಗ್ ಬಾಸ್ ಗೆದ್ದ ಎಂಸಿ ಸ್ಟಾನ್‌ ಯಾರು, ಸಿಕ್ಕ ಬಹುಮಾನದ ಮೊತ್ತವೆಷ್ಟು?

ಸ್ಟಾನ್ ಬಿಗ್ ಬಾಸ್ ಪಯಣ 

ಬಿಗ್ ಬಾಸ್ ಮನೆಯಲ್ಲಿ ಖ್ಯಾತ ರ್ಯಾಪರ್ ಎಂಸಿ ಸ್ಟಾನ್ ಪಯಣ ರೋಚಕವಾಗಿತ್ತು, ಗೆಲುವು ಅಷ್ಟು ಸುಲಭವಾಗಿರಲಿಲ್ಲ, ಕಷ್ಟದ ಹಾದಿಯಾಗಿತ್ತು. ಆಗಾಗ ಬಿಗ್ ಮನೆಯಿಂದ ಹೊರಹೋಗುವುದಾಗಿ ಹೇಳುತ್ತಿದ್ದರು. ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದರು. ತಾಳ್ಮೆಯ ಪ್ರತೀಕವಾಗಿದ್ದ ಸ್ಟಾನ್ ಯಾರೊಂದಿಗೂ ಅನಗತ್ಯ ಜಗಳವಾಡಿಲ್ಲ. ಈ ಗುಣ ಅಭಿಮಾನಿಗಳ ಹೃದಯ ಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸ್ಟಾನ್ ಹೆಸರು ಟ್ರೆಂಡಿಂಗ್ ನಲ್ಲಿದೆ. ಸ್ಟಾನ್ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.  ಎಂಸಿ ಸ್ಟಾನ್ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಮೇಲೆ ಸ್ಟಾನ್ ಫಾಲೋವರ್ಸ್ ಗಳ ಸಂಖ್ಯೆ ದುಪ್ಪಟ್ಟಾಗಿದೆ. ಬಿಗ್ ಬಾಸ್‌ಗೆ ಹೋಗುವ ಮೊದಲು ಎಂಸಿ ಸ್ಟಾನ್ 1.6 ಮಿಲಿಯನ್ ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿ ಹೊಂದಿದ್ದರು. ಆದರೆ ಈಗ 7.5ಗೆ ಏರಿಕೆಯಾಗುದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?