ನಾಯಕಿಗಿಂತಲೂ ಹೆಚ್ಚು ಬಂಗಾರ ಹಾಕ್ತಾರೆ ಈ ಸೀರಿಯಲ್ ಹೀರೋಗಳು!

Published : Feb 18, 2023, 03:16 PM IST
ನಾಯಕಿಗಿಂತಲೂ ಹೆಚ್ಚು ಬಂಗಾರ ಹಾಕ್ತಾರೆ ಈ ಸೀರಿಯಲ್ ಹೀರೋಗಳು!

ಸಾರಾಂಶ

ಈ ಸೀರಿಯಲ್ ಹೀರೋಗಳ ಮೈಮೇಲಿರೋ ಬಂಗಾರ ನೋಡಿ ಸೀರಿಯಲ್ ಹೀರೋಯಿನ್‌ಗಳೂ ಅಚ್ಚರಿ ಪಡ್ತಾರೆ. ಸೀರಿಯಲ್ ಹೀರೊಗಳಲ್ಲಿ ಬಂಗಾರದ ವ್ಯಾಮೋಹ ಹೆಚ್ಚಾಗ್ತಿರೋ ಹಾಗೆ ಕಾಣ್ತಿದೆ. ಅವರ ಈ ಸ್ಟೈಲ್ ಸ್ಟೇಟ್‌ಮೆಂಟ್‌ ಅವರ ಫ್ಯಾನ್ಸ್‌ಗೂ ಸಖತ್ ಇಷ್ಟ ಆದಂಗಿದೆ.

'ನಂಗೆ ಡೈಮಂಡ್ ನೆಕ್ಲೇಸ್ ಕೊಡಿಸ್ರಿ..' ಅಂತ ಹೆಂಡತಿ ಗಂಡನ ಬಳಿ ಡಿಮ್ಯಾಂಡ್ ಇಡ್ತಾಳೆ ಅನ್ನೋದು ಹಳೇ ಜೋಕ್. ಹೆಣ್ಮಕ್ಕಳು ಯಾರೂ ಆ ಲೆವೆಲ್‌ಗೆ ಡಿಮ್ಯಾಂಡ್ ಇಡದಿದ್ರೂ ಮಾಡಕ್ಕೇನು ಕೆಲಸ ಇಲ್ಲದ ಗಂಡಸರು ಇಂಥಾ ನಾನ್‌ಸೆನ್ಸ್ ಹಳಸಲು ಜೋಕ್ ಕ್ರಿಯೇಟ್ ಮಾಡಿ ತಮ್ಮಷ್ಟಕ್ಕೇ ತಾವು ನಗೋ ಕಾಲ ಒಂದಿತ್ತು. ಆದರೆ ಈಗ ಗಂಡಸರೂ ಕೊಂಚ ಸ್ಮಾರ್ಟ್ ಆಗಿ ಗುರುತಿಸಿಕೊಳ್ಳೋಕೆ ಇಷ್ಟ ಪಡೋ ಕಾರಣ ಅಂಥಾ ಸವಕಲು ಜೋಕ್‌ಗಳೆಲ್ಲ ಸೌಂಡ್‌ ಇಲ್ದಂಗೆ ಮೂಲೆ ಸೇರಿವೆ. ಹೆಣ್ಮಕ್ಕಳ ಬಗ್ಗೆ ಸ್ವಲ್ಪ ಕ್ರಿಯೇಟಿವ್ ಜೋಕ್ ಗಳು ಹೊರಬರ್ತಿವೆ. ಇರಲಿ, ಈಗ ವಿಷ್ಯ ಅದಲ್ಲ. ಹೆಣ್ಣು ಅಂದ್ರೆ ಬಂಗಾರದ ವ್ಯಾಮೋಹ ಅನ್ನೋ ಟ್ರೆಂಡ್ ಹೋಗಿ ಗಂಡುಮಕ್ಕಳೂ ಚಿನ್ನವನ್ನು ಆಸೆಯಿಂದ ತೊಟ್ಟುಕೊಳ್ಳೋ ಟ್ರೆಂಡ್ ಬಂದಿದೆ. ಸಿನಿಮಾ, ಸೀರಿಯಲ್ ಹೀರೋಗಳೆಲ್ಲ ಕೊರಳಿಗೆ ಕೈಬೆರಳ ಗಾತ್ರದ ಚೈನು, ಕೈಗೆ ಕಡಗ, ಉಂಗುರ ತೊಟ್ಟು ಜಬರ್ದಸ್ತಿನಿಂದ ಮಿಂಚುತ್ತಿದ್ದಾರೆ. ಆ ಹೀರೋಗಳ ಜನಪ್ರಿಯತೆಯೂ ಹೆಚ್ಚು. ಇಷ್ಟೂ ಜನ ಟಾಪ್‌ನಲ್ಲಿರೋ ನಾಯಕರು ಅನ್ನೋದು ಮತ್ತೊಂದು ಪ್ಲಸ್ ಪಾಯಿಂಟ್. ಅಂಥ ಹೀರೋಗಳ್ಯಾರು?

ಹೊಂಗನಸು ಸೀರಿಯಲ್‌ನ ರಿಷಿ ಸಾರ್ - ಮುಖೇಶ್ ಗೌಡ
ಮುಖೇಶ್ ಮತ್ತು ರಕ್ಷಾ ನಟನೆಯ 'ಹೊಂಗನಸು' ಸೀರಿಯಲ್ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿದೆ. ಈ ಸೀರಿಯಲ್‌ನಲ್ಲಿ ರಿಷಿ ಅನ್ನೋ ಹ್ಯಾಂಡ್‌ಸಮ್ ಆಂಗ್ರಿ ಮ್ಯಾನ್ ಆಗಿ ಮನ ಗೆದ್ದವರು ಮುಖೇಶ್. ಈ ಸೀರಿಯಲ್‌ನ ತೆಲುಗಿನ 'ಗುಪ್ಪೆಡಂತ ಮನಸು' ಅನ್ನೋ ತೆಲುಗು ಧಾರಾವಾಹಿಯ ಡಬ್ಬಿಂಗ್ ವರ್ಶನ್. ತೆಲುಗಿನಲ್ಲಿದು ನಂ.೧ ಸೀರಿಯಲ್. ಹೀರೋ ಮುಖೇಶ್‌ ಈ ಸೀರಿಯಲ್ ಮೂಲಕ ಕಿರುತೆರೆ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಲೇಜ್ ಎಂಡಿಯಾಗಿ ಮ್ಯಾಥ್ಸ್ ಪ್ರೊಫೆಸರ್ ಆಗಿರೋ ರಿಷಿ ಸಾರ್ ಕೊರಳಲ್ಲಿ ಹಗ್ಗದಷ್ಟು ದಪ್ಪದ ಚೈನ್ ಇದೆ. ಕೈಯಲ್ಲಿ ಚಿನ್ನದ ಬಳೆ ಅಥವಾ ಕಡಗ ಇದೆ. ಕೈ ಬೆರಳಲ್ಲಿ ಉಂಗುರ ಇದೆ. ರಿಷಿ ಸರ್ ಈ ಸ್ಟೈಲ್ ಗೆ ಸಾಕಷ್ಟು ಹುಡುಗೀರೂ ಫಿದಾ ಆಗಿದ್ದಾರೆ. ಅಂದಹಾಗೆ ಇವ್ರು ನಮ್ ಮೈಸೂರಿನ ಪ್ರತಿಭೆ.

ಈ ಸೀರಿಯಲ್ಸ್ ಜೋಡಿ ಪ್ರೀತಿ ನೋಡಿದ್ರೆ ಎಂಥವ್ರಿಗೂ ಹೊಟ್ಟೆಕಿಚ್ಚಾಗುತ್ತೆ!

ಪುಟ್ಟಕ್ಕನ ಮಕ್ಕಳು ಹೀರೋ ಕಂಠಿ - ಧನುಷ್ ಎನ್ ಎಸ್
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಬಡ್ಡಿ ಬಂಗಾರಮ್ಮನ ಮಗನಾಗಿ ಪುಟ್ಟಕ್ಕನ ಮಗಳು ಸ್ನೇಹಾಳ ಹಿಂದೆ ಬಿದ್ದಿರೋ ಕ್ಯೂಟ್ ಹುಡ್ಗ ಕಂಠಿ. ಈ ಪಾತ್ರದಲ್ಲಿ ನಟಿಸ್ತಿರೋದು ಧನುಷ್‌ ಎನ್ ಎಸ್. ಮೂಲತಃ ಕೋಲಾರದವರಾದ ಧನುಷ್ ಅವರಿಗೆ ಸಖತ್ ಪಾಪ್ಯುಲಾರಿಟಿ(Popularity) ತಂದುಕೊಟ್ಟ ಸೀರಿಯಲ್ ಪುಟ್ಟಕ್ಕನ ಮಕ್ಕಳು. ಹೇಳಿ ಕೇಳಿ ಬಡ್ಡಿ ಬಂಗಾರಮ್ಮನ ಮಗನಾದ ಕಾರಣ ಕೈ ತುಂಬ ಮೈ ತುಂಬ ಚಿನ್ನದ ಆಭರಣ ಧರಿಸಿಕೊಂಡೇ ಓಡಾಡ್ತಾರೆ. ಬಾಯ್ಬಿಟ್ರೆ 'ಯೋನ್ ಮಿಸ್ಸು..' ಅನ್ನುತ್ತಾ ಸ್ನೇಹಾ ಹಿಂದಿಂದೆ ಸುತ್ತೋ ಈ ಪಾತ್ರ ಜನರಿಗೂ ಇಷ್ಟ. ಜೊತೆಗೆ ಬಂಗಾರದ ಆಭರಣಗಳು ಈ ಹುಡುಗನ ಕ್ಯೂಟ್‌ನೆಸ್(Cuteness) ಹೆಚ್ಚಿಸಿದೆ.

ಕನ್ನಡತಿಯ ಹರ್ಷ - ಕಿರಣ್‌ ರಾಜ್
ಇತ್ತೀಚೆಗೆ ತಾನೇ ಮುಕ್ತಾಯ ಕಂಡ ಸೀರಿಯಲ್ 'ಕನ್ನಡತಿ'. ಈ ಸೀರಿಯಲ್‌ ಹೀರೋ ಕಿರಣ್‌ ರಾಜ್ ಅವರೂ ಬಂಗಾರ ಪ್ರಿಯರು. ಗೋಲ್ಡ್ ಚೈನ್, ಉಂಗುರ ಅಂತ ಸಾಕಷ್ಟು ಗೋಲ್ಡ್ ಜ್ಯುವೆಲ್ಲರಿ ಮೈ ಮೇಲೆ ಹಾಕ್ಕೊಳ್ತಿದ್ರು. ಒಮ್ಮೆ ಕೋವಿಡ್ ಟೈಮಲ್ಲಿ ಹೈದಾರಾಬಾದ್‌ನಲ್ಲಿ ಶೂಟ್(Shoot) ನಡೆಯುತ್ತಿದ್ದಾಗ ರಾತ್ರಿ ಯಾರೋ ಅಪರಿಚಿತರ ಟೆಂಪೋವನ್ನ ಏರಬೇಕಾಗಿ ಬಂತು. ಹೀರೋಯಿನ್ ಭುವಿ ಅಂದರೆ ರಂಜನಿ ಜೊತೆಗಿದ್ದರು. ಈ ವೇಳೆ ರಂಜನಿ ಮೈಯಲ್ಲಿ ಆಭರಣಗಳೇನೂ ಇರಲಿಲ್ಲ. ಆದರೆ ಕಿರಣ್‌ ರಾಜ್ ಮೈಮೇಲೆ ಸಾಕಷ್ಟು ಚಿನ್ನ(Gold) ಇದ್ದ ಕಾರಣ ಎಲ್ಲಿ ನಮ್ಮನ್ನು ಅಪರಿಹರಿಸಿ ಬಿಡ್ತಾರೋ ಅಂತ ರಂಜನಿ ಅವರಿಗೆ ಭಯ ಆಗಿತ್ತಂತೆ.

'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮಾಧವ್ ಯಾರು ಗೊತ್ತು? ರಿಯಲ್ ಫ್ಯಾಮಿಲಿ ಫೋಟೋಗಳಿದು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?