
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ (Doresani) ಧಾರಾವಾಹಿ ಒಂದು ರೀತಿ ತುಂಬಾನೇ ವಿಭಿನ್ನವಾಗಿದೆ. ಆನಂದ್ ಚಿಕ್ಕ ವಯಸ್ಸಿಗೇ ಕೋಟಿಯಲ್ಲಿ ಸಂಪಾದನ ಮಾಡಿರುವ ಹುಡುಗ, ಅಪ್ಪ ಅಮ್ಮ ಯಾರೂ ಇಲ್ಲ. ಆದರೆ ಅವರಷ್ಟೇ ಪ್ರೀತಿ ಕೊಡುತ್ತಿರುವ ಮಿಡಲ್ ಕ್ಲಾಸ್ ಸ್ನೇಹಿತೆ ದೀಪಿಕಾನೇ ನನ್ನ ಪ್ರಾಣ ಎನ್ನುತ್ತಾನೆ. ಆದರೆ ದೀಪಿಕಾ ತಂದೆ ಪುರುಷೋತ್ತಮ್ ಕೆಲಸ ಮಾಡುತ್ತಿರುವುದು ಆನಂದ್ ಕಂಪನಿಯಲ್ಲಿ ಎಂದು ಯಾರಿಗೂ ಗೊತ್ತಿಲ್ಲ. ಏಕೆಂದರೆ ದೀಪಿಕಾ ಸ್ನೇಹ ಉಳಿಸಿಕೊಳ್ಳಲು ಆನಂದ್ ನಾನೊಬ್ಬ ಬಡವ. ನನ್ನ ಬಳಿ ಕೆಲಸವಿಲ್ಲ ಎಂದು ಹೇಳಿಕೊಂಡು ಕಾರ್ ಡ್ರೈವಿಂಗ್ ಮಾಡುತ್ತಿರುತ್ತಾನೆ.
ಪುರುಷೋತ್ತಮ್‌ಗೆ ಮೂರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಈ ನಾಲ್ವರಲ್ಲಿ ಕಿರಿಯವಳೇ ಗೌತಮಿ ಉರ್ಫ ಪ್ರತಿಮಾ (Prathima). ಕಾಲೇಜ್, ಎಕ್ಸಾಂ, ಸಿನಿಮಾ ಆಡಿಷನ್ ಅಂತ ಚಿಕ್ಕ ವಯಸ್ಸಿಗೆ ಸಖತ್ ಬ್ಯುಸಿಯಾಗಿರುವ ಚೆಲುವೆ. ಖಾಸಗಿ ಸಂದರ್ಶನದಲ್ಲಿ ಮೊದಲ ಬಾರಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ.
'ಮಾರ್ಕ್ಸ್ ಮತ್ತು ಎಜುಕೇಷನ್ (Education) ಏನೂ ಸಮಸ್ಯೆ ಇಲ್ಲ. ಆದರೆ ಎಕ್ಸಾಂ ಬರೆಯಲೇ ಬೇಕು ಅಲ್ವಾ? ಫ್ಯಾಮಿಲಿಯಲ್ಲಿ ಇಬ್ಬರು ಅಕ್ಕಂದಿರು, ತಾತ ಅಜ್ಜಿ ಮತ್ತು ಅಪ್ಪ ಅಮ್ಮ ಎಲ್ಲರೂ ಸಂಪೂರ್ಣವಾಗಿ ಸಪೋರ್ಟ್ ಮಾಡುತ್ತಾರೆ. ಅವರಿಗೆ ನಾನು ನಟಿಸಿರುವ ರೀತಿ ಇಷ್ಟ ಆಗಿದೆ. ನನ್ನ ಅಕ್ಕ ದಿವ್ಯಾ ಅಂತ. ಅವರೂ ಕೂಡ ಸಿನಿಮಾ ಮಾಡಿದ್ದಾರೆ, ರಿಲೀಸ್‌ಗೆ ರೆಡಿಯಾಗಿದೆ. ನನ್ನ ಸ್ನೇಹಿತರು ಧಾರಾವಾಹಿ ನೋಡುವುದು ತುಂಬಾನೇ ಕಡಿಮೆ. ಆದರೆ ಅವರು ಪ್ರೋಮೋ ಎಲ್ಲಾ ನೋಡಿ ನೀನು ಚೆನ್ನಾಗಿ ಮಾಡ್ತಿದ್ಯಾ, ಹೀಗೆ ತುಂಬಾ ಪ್ರಾಜೆಕ್ಟ್‌ಗಳಲ್ಲಿ ಮಾಡು ಅಂತ ಹೇಳುತ್ತಾರೆ. ನಾನು ದೊಡ್ಡವಳಾದ ಮೇಲೆ ಹೀರೋಯಿನ್ ಆಗಬೇಕು, ನಟಿಯಾಗಬೇಕು ಅನ್ನುವ ಕನಸಿದೆ. ನೋಡೋಣ,' ಎಂದು ಪ್ರತಿಮಾ ಮಾತನಾಡಿದ್ದಾರೆ.
'ನಾನು ಎಲ್ಲೇ ಹೋದ್ರು ಹೈಟ್ ಪ್ರಾಬ್ಲಂ (Height problem) ಅಂತ ಹೇಳುತ್ತಾರೆ. ತುಂಬಾ ಕುಳ್ಳಿ ಅನ್ನುತ್ತಾರೆ. ನಾನು ಇನ್ನು ಮೊದಲ ವರ್ಷದ ಪಿಯುಸಿ ಅಲ್ವಾ? ಅದಕ್ಕೆ ಸ್ವಿಮಿಂಗ್ ಮತ್ತೆ ಸ್ಕಿಪ್ಪಿಂಗ್ ಮಾಡ್ತಿದ್ದೀನಿ. ನಾನು ಪಿಯುಸಿ ಅಂತ ಹೇಳಿದರೆ ಎಲ್ಲರೂ ನಗುತ್ತಾರೆ. ನೀನು 7ನೇ ತರಗತಿ ಇರಬೇಕು ಅಂತ. ನಮ್ಮ ಸೆಟ್‌ನಲ್ಲಿ ಒಬ್ರು ಹೇಳುತ್ತಾರೆ ನೀನು 7 ಫೇಲ್ ಆಗಿರಬೇಕು. ಇನ್ನೊಂದು ಸಲ ಬರೀ ಅಂತ ಕಾಲೆಳೆಯುತ್ತಾರೆ. ಯಾರೂ ಅಂದ್ರೆ ಯಾರೂ ನಂಬುವುದಿಲ್ಲ. ಹೀಗೆ ಹೇಳಿದರೆ ನಾನು ಯಾರಿಗೂ ಬೈಯೊಲ್ಲಯ. ಪಾಪ ತುಂಬಾ ತಮಾಷೆ ಮಾಡ್ತಿದ್ದಾರೆ ಅಂತ ಸುಮ್ಮನೆ ಇದ್ದೀನಿ. ಇನ್ನೂ ಎರೂರು ಹಾಗೆ ಹೇಳುತ್ತಿರುವುದಕ್ಕೆ ನಾನು ಹೈಟ್ ಆಗಲು ತಯಾರಿ ಮಾಡಿಕೊಳ್ಳುತ್ತಿರುವುದು,' ಎಂದು ಪ್ರತಿಮಾ ಹೇಳಿದ್ದಾರೆ.
'ಇಷ್ಟು ಚಿಕ್ಕ ವಯಸ್ಸಿಗೆ ಕಾಲೇಜ್ ಹೋಗಿ ಸೀರಿಯಲ್ ಮಾಡ್ಕೊಂಡು ಹೇಗೆ ಇದೆಲ್ಲಾ ಮ್ಯಾನೇಜ್ ಮಾಡ್ತೀಯಾ ಅಂತ ಕೇಳ್ತಾರೆ. ಇದಕ್ಕೆಲಾ ಸಾಧ್ಯ ಆಗಿದ್ದು ನನ್ನ ಅಕ್ಕನಿಂದಲೇ. ಇಲ್ಲ ಅಂದ್ರೆ ನಾನು ಬರ್ತಾನೆ ಇರಲಿಲ್ಲ. ಮೊದಲು ಅಯ್ಯೋ ಇವೆಲ್ಲಾ ಬೇಕಾ ಈ ವಯಸ್ಸಿಗೆ ಅನ್ಸುತ್ತೆ. ಅದರೆ ಈಗ ಖುಷಿಯಾಗಿದೆ. ನಾನು ಅಪ್ಪ ಅಮ್ಮ ಅಕ್ಕ ಹತ್ರ ಪಾಕೇಟ್ ಮನಿ ಕೇಳುವುದೇ ಬೇಡ. ಅವರೇ ಎಲ್ಲಾ ಬೇಗ ಕೊಡುತ್ತಾರೆ. ನಾನು ಮರೆಯಲಾಗದ ಕಾಮೆಂಟ್ ಅಂದ್ರೆ ಒಬ್ಬ ಫೋಟೋಗ್ರಾಫ್ ಹೇಳಿದ್ದರು, ನಾನು ಚಿಕ್ಕ ವಯಸ್ಸಿಗೆ ಇದೆಲ್ಲಾ ಆಯ್ಕೆ ಮಾಡಿಕೊಂಡಿರುವುದು ಗ್ರೇಟ್ ಅಂತ. ಎಲ್ಲಾರ ಪ್ರತಿಕ್ರಿಯೆ ಕೇಳಿ ಖುಷಿ ಅಗುತ್ತಿದೆ,' ಎಂದಿದ್ದಾರೆ ಪ್ರತಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.