'ರಾಮಾ ರಾಮಾ ರೇ' ಕಡೂರು ಕುವರನ ಕಲಾ ಜರ್ನಿ.. ಎಲ್ಲದಕ್ಕೂ ಸೈ!

Published : Mar 03, 2022, 08:46 PM ISTUpdated : Mar 03, 2022, 08:53 PM IST
'ರಾಮಾ ರಾಮಾ ರೇ'  ಕಡೂರು ಕುವರನ ಕಲಾ ಜರ್ನಿ.. ಎಲ್ಲದಕ್ಕೂ ಸೈ!

ಸಾರಾಂಶ

* ಕಲೆಯ ಕರೆಗೆ ಓಗೊಟ್ಟ ರಾಮ ರಾಮ ರೇ ಚಿತ್ರದ ಖ್ಯಾತಿಯ ನಟ ನಟರಾಜ್ * ಕಲೆ ಪ್ರತಿಯೊಬ್ಬ ಕಲಾವಿದನ ಜೀವನಾಡಿ. * ಪ್ರತಿಭೆಗೆ ತಕ್ಕ ಅವಕಾಶ  ಸಿಕ್ಕಿದ್ದರೆ  ಕಲಾವಿದನ ಬದುಕು ಬದಲಾಗಿ ಬಿಡುತ್ತದೆ * ಉದಯೋನ್ಮುಖ ಕಲಾವಿದ ಚಿಕ್ಕಮಗಳೂರಿನ ನಟರಾಜ್

ಸುಕನ್ಯಾ ಎನ್. ಆರ್., ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ, ಆಳ್ವಾಸ್ ಕಾಲೇಜು ಮೂಡುಬಿದಿರೆ

ಚಿಕ್ಕಮಗಳೂರು(ಮೇ 03)  ಸಿಕ್ಕ ಅವಕಾಶವನ್ನು  ಸದುಪಯೋಗಪಡಿಸಿಕೊಂಡು ಸಾಧನೆಯ ಶಿಖರವೇರಿದರೆ  ಯಶಸ್ಸು  ಸಿಗುವುದು ಖಚಿತ. ಇದಕ್ಕೆ ಸೂಕ್ತವಾದ ಉದಾಹರಣೆ  ಪ್ರಯತ್ನದ ಬೆನ್ನು ಬಿಡದೆ ಸಾಗುತ್ತಿರುವ ಉದಯೋನ್ಮುಖ ಕಲಾವಿದ ನಟರಾಜ್.

ಇವರು ಮೂಲತಃ ಚಿಕ್ಕಮಗಳೂರು (Chikkamagaluru) ಜಿಲ್ಲೆಯ, ಕಡೂರು ತಾಲೂಕಿನವರು. ಸುಬ್ರಮಣ್ಯ ಭಟ್ ಮತ್ತು ಸರಸ್ವತಿ ದಂಪತಿಯ ಪುತ್ರ. ತಮ್ಮ ಎಲ್ಎಲ್ ಬಿ ಮತ್ತು ಡಿಪ್ಲೊಮಾ ಶಿಕ್ಷಣವನ್ನು ಕುವೆಂಪು (Kuvempu University) ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದರು. ಕಿರುತೆರೆ (Small Screen) ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟರಾಜ್ ,ನಾನಾ ಕನಸುಗಳೊಂದಿಗೆ ಬಣ್ಣ ಹಚ್ಚಿ ಪಾತ್ರಕ್ಕೆ ಜೀವ ತುಂಬಿ ಕಲೆಯನ್ನು ತನೊಳ್ಳಗೆ ಕರಗತ ಮಾಡಿಕೊಂಡವರು. ಬಾಲ್ಯದಿಂದಲೂ ಅಭಿನಯದ ಕಡೆಗೆ ಒಲವನ್ನು ಬೆಳೆಸಿಕೊಂಡು ಕನ್ನಡ ಸಿನಿಮಾ ರಂಗದಲ್ಲಿ ಮಿಂಚಬೇಕೆಂದು ಕನಸು ಕಂಡಂತಹ ವ್ಯಕ್ತಿ ನಟರಾಜ್.

ರಂಗ ಕ್ಷೇತ್ರದ ರಂಗಿನ ಬದುಕು: ವಿದ್ಯಾರ್ಥಿ ಜೀವನದಿಂದಲೂ  ಕಲೆಯೆಡೆಗೆ ಆಸಕ್ತಿ ತೋರಿದ ನಟರಾಜ್ ಅವರದು ಹುಟ್ಟು ಪ್ರತಿಭೆ.ಶಾಲಾ ಕಾಲೇಜುಗಳಲ್ಲಿ ಆಯೋಜಿಸುತ್ತಿದಂತಹ  ಪ್ರತಿಭಾಕಾರಂಜಿಗಳಲ್ಲಿ ಬಹಳ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ ಇವರು,ನಾಟಕಡೆದೆಗೆ ಆಸಕ್ತರಾದರು. ಶಾಲಾ ದಿನಗಗಳಲ್ಲಿ ಹಚ್ಚಿದ  ಬಣ್ಣದ ಬದುಕು,ಅವರನ್ನು ಇನ್ನಷ್ಟು ಸೆಳೆಯಿತು.

ಕನ್ನಡದ ಹಿರಿಯ ಕಲಾವಿದರ  ಧ್ವನಿಯನ್ನು ಅನುಕರಿಸುವಂತದ್ದು ಅವರಿಗೆ ಒಲಿದು ಬಂದಂತಹ ಇನ್ನೊಂದು ಕಲೆ. ತನ್ನ ಪದವಿ ಹಂತದಲ್ಲಿ ಕನ್ನಡದ ಹೆಸರಾಂತ ಕಲಾವಿದ ಮಿಮಿಕ್ರಿ ದಯಾನಂದ್ ಅವರನ್ನು ಆದರ್ಶವಾಗಿರಿಸಿಕೊಂಡು ಮುನ್ನಡೆದರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ಹಿರಿಯ ಕಲಾವಿದರ ಧ್ವನಿಯನ್ನು ಅನುಕರಿಸುವ ಮೂಲಕ ಅವರ ನೆನಪುಗಳನ್ನು ಅಮರವಾಗಿಸಿರುವುದು ಶ್ಲಾಘನೀಯ.  

ಅವಕಾಶದ ಹಾದಿಯ ಪಯಣ:  ಕಾಲೇಜು ದಿನಗಳಲ್ಲಿ ತಮ್ಮ ಉಪನ್ಯಾಸಕರಾದ ರಮೇಶ್ ಚಂದ್ರ ದತ್ತ ಮತ್ತು ವಸಂತ್ ಅವರ ಪ್ರೋತ್ಸಾಹದಿಂದ, ನಾಟಕದಲ್ಲಿಗಳಲ್ಲಿ ಅಭಿನಯಿಸಲು  ಪ್ರಾರಂಭಿಸಿದರು.

ರಮೇಶ್ ಚಂದ್ರ ದತ್ತ ಅವರು  ಪಿ ಲಂಕೇಶ್ ರವರ 'ತೆರೆಗಳು' ಎಂಬ ನಾಟಕವನ್ನು  ಆಧಾರವಾಗಿಟ್ಟುಕೊಂಡು ನಿರ್ದೇಶಿಸಿದ ನಾಟಕದಲ್ಲಿ ನಟರಾಜ್ ಅವರು ಕೂಡ ನಟಿಸಿದರು. ಆ ನಾಟಕ ಇವರಿಗೆ ತಿರುವನ್ನು ನೀಡಿತ್ತು, ಇವರ ತಂಡ ಸಿಂಗನಲ್ಲೂರು ಪುಟ್ಟ ಸ್ವಾಮಯ್ಯ ಪ್ರಶಸ್ತಿಗೆ  ಭಜನರಾದರು. "ಜನರ ಪ್ರೋತ್ಸಾಹದ ಚಪ್ಪಾಳೆ ಧ್ವನಿ ನನ್ನನ್ನು ಇನ್ನಷ್ಟು ನಾಟಕ ಕ್ಷೇತ್ರದತ್ತ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿದೆ" ಎನ್ನುತ್ತಾರೆ ನಟರಾಜ್.

ಅನಿರೀಕ್ಷಿತ ತಿರುವು  : "ನನಗೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಆಸೆ, ಆದರೆ ಮನೆಯ ಪರಿಸ್ಥಿತಿಗೆ ತಲೆ ಬಾಗಬೇಕಾದ ಅನಿವಾರ್ಯತೆಯ ಕಾರಣದಿಂದ ಶಿವಮೊಗ್ಗದಲ್ಲಿ ಕಾನೂನು ವಿದ್ಯಾರ್ಥಿಯಾಗಿ ಸೇರಿಕೊಂಡೆ." ಓದಿನ ನಡುವೆ ನಾಟಕದ ಕಡೆಗಿನ ಆಸಕ್ತಿ ಕಿಂಚಿತ್ತು ಕಡಿಮೆಯಾಗಿರಲಿಲ್ಲ. ಕಲಿಯುವುದರ ಜೊತೆ ಹಲವಾರು ಆಡಿಷನ್ ಗಳಲ್ಲಿ ಭಾಗವಹಿಸುತ್ತಿದ್ದೆ. ಧಾರಾವಾಹಿಯೊಂದರಲ್ಲಿ ಅವಕಾಶ ಸಿಕ್ಕಿದರೂ ದುರಾದೃಷ್ಟವಶಾತ್ ಚಿತ್ರೀಕರಣ ಸ್ಥಗಿತಗೊಂಡು ಅವಕಾಶ ಕೈ ತಪ್ಪಿತು ಎಂದು ತಮ್ಮ ಪಯಣದ ಕಷ್ಟದ ದಿನಗಳನ್ನು ನೆನಪಿಸುತ್ತಾರೆ ನಟರಾಜ್.

ತಮ್ಮ ಎಲ್ ಎಲ್ ಬಿ ಶಿಕ್ಷಣದ ಬಳಿಕ ಕೆಲ ಕಾಲ ವಕೀಲರಾಗಿ ಕಡೂರು,ಭದ್ರಾವತಿ,ಅರಸೀಕೆರೆ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ವೃತ್ತಿ ಬದುಕಿನ ದಿನಗಳನ್ನು ಕಳೆಯುತ್ತಾರೆ. ಉನ್ನತ ಹುದ್ದೆಯಲ್ಲಿದ್ದರೂ  ನಟನೆ ಬಗೆಗಿನ ಒಲವಿನಿಂದ  ಬೆಂಗಳೂರಿನತ್ತ ಸಾಗುತ್ತಾರೆ.

ವೃತ್ತಿಯ  ಜೊತೆಗೆ ಪ್ರವೃತ್ತಿಯನ್ನು ಬೆಳೆಸಬೇಕೆಂಬ ಆಟ ತೊಟ್ಟ ನಟರಾಜ್ ಅವರು ರವೀಂದ್ರನಾಥ ಕಲಾಕ್ಷೇತ್ರದಲ್ಲಿ  ನಾಟಕ ತರಭೇತಿಯನ್ನು  ಪಡೆದರು. ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಬೇಕೆಂಬ  ಕನಸ್ಸನ್ನು ಹೊತ್ತು ಅವಕಾಶಗಳ ದಾರಿಯನ್ನು ಹುಡುಕುತ್ತಾ, ಸಣ್ಣ ಪುಟ್ಟ ಪಾತ್ರಗಳಲ್ಲಿ  ನಟಿಸಲು ಪ್ರಾರಂಭಿಸಿದರು.

ಕಿರುತೆರೆಯ ಜರ್ನಿ : ನಂತರದ ದಿನಗಳಲ್ಲಿ ಕಿರುತೆರೆಗೂ  ನಟರಾಜ್ ರವರು ಪದಾರ್ಪಣೆ ಮಾಡುತ್ತಾರೆ. ಅವರ ಸ್ನೇಹಿತರೊಬ್ಬರು ಕಾಲ ಗಂಗೋತ್ರಿಯ ಮಂಜು ಅವರಿಗೆ ಪರಿಚಯಿಸಿ 'ಬಂದೆ ಬರ್ತವೇ' ಕಾಲ ಎಂಬ ಧಾರಾವಾಹಿಯಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಲು ಅವಕಾಶ ಕೊಡುತ್ತಾರೆ. ನಂತರ ಜೀ ಕನ್ನಡ,ಈಟಿವಿ,ಉದಯ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ  ಬೆಂಕಿಯಲ್ಲಿ ಅರಳಿದ ಹೂ ಮಹಾನವಮಿ, ಶ್ರಿ ರಾಘವೇಂದ್ರ ಸ್ವಾಮಿ ಮಹಿಮೆ,ಇದೆ ಪ್ರೀತಿ ಪ್ರೇಮ, ಕಾಮಿಡಿ ಕಿಲಾಡಿಗಳು ಮುಂತಾದ ಅನೇಕ  ಧಾರಾವಾಹಿಗಳಲ್ಲಿ ಕಾರ್ಯನಿರ್ವಹಿಸುವಂತಹ ಅವಕಾಶ ಅವರಿಗೆ ಲಭಿಸಿತು.

ಕೈ ಕೈ ಸೇರಿದರೆ ಚಪ್ಪಾಳೆ: ನಟರಾಜ್ ಮತ್ತು ಅವರ ಬಾಲ್ಯದ ಗೆಳೆಯರೆಲ್ಲ ಒಂದು ತಂಡ ಕಟ್ಟಿಕೊಂಡು ಸಿನಿಮಾ ಮಾಡಬೇಕೆಂಬ ಗಟ್ಟಿ ನಿರ್ಧಾರ ತೆಗೆದುಕೊಂಡರು. ನಟರಾಜ್ ಅವರಿಗೆ ಬೆನ್ನೆಲುಬಾಗಿ ಧರ್ಮಣ್ಣ ಕಡೂರು ಮತ್ತು ಸತ್ಯಪ್ರಕಾಶ್ ಸಾತ್ ನೀಡುತ್ತಾರೆ. ಮೊದಲ ಬಾರಿಗೆ ಭಾಗ್ಯರಾಜ್ ಎಂಬ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಂತರ ಜಯನಗರ 4 ಬ್ಲಾಕ್ ಎಂಬ ಕಿರುಚಿತ್ರದಲ್ಲಿ ನಟಿಸುತ್ತಾರೆ.ನಟರಾಜ್ ತಂಡವು ಸತತ  ಎರಡು ವರ್ಷಗಳ ಪ್ರಯತ್ನದಲ್ಲಿ  ಸತ್ಯಪ್ರಕಾಶ್ ನಿರ್ದೇಶನದ 'ರಾಮ ರಾಮ ರೇ' ಚಿತ್ರದಲ್ಲಿ ತಮ್ಮ ಕಲೆಯನ್ನು ತೋರಿಸಿಕೊಟ್ಟು ರಾಜ್ಯ ಪ್ರಶಸ್ತಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತದೆ. ಬೆಸ್ಟ್  ಡೇಬ್ಯುಟ್ ಆಕ್ಟರ್ ಎಂಬ ಪ್ರಶಸ್ತಿಗೂ ಅರ್ಹರಾಗುತ್ತಾರೆ ನಟರಾಜ್.

ಅವಕಾಶಗಳ ಸುರಿಮಳೆ ನಟರಾಜ್ ಪ್ರತಿಭೆಯನ್ನು ಕಂಡು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂತು.ದೀಪಕ್ ಮಧುವನಹಳ್ಳಿ ಅವರ ನಿರ್ದೇಶನದ ' ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಿ ಮಿಂಚಿದ್ದಾರೆ. ಸುಧೀರ್ ಶಾನಭೋಗ್ ನಿರ್ದೇಶನದ ಮಾರೀಚ ಸಿನಿಮಾದಲ್ಲಿ ಸಿಸಿಬಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 

ಡಿಸೆಂಬರ್ 1 ಚಿತ್ರದಲ್ಲಿ ನಟನೆ,ಮಾರೀಚ,ಕುಬುಸ,ಪದವಿ ಪೂರ್ವ,ವಿದಾಯ,ಎಂದೆಂದಿಗೂ, ಜೀರ್ಜಿಂಬೇ,ಒಂದಲ್ಲ ಎರಡಲ್ಲ,ಜಯನಗರ 4 ಬ್ಲಾಕ್,ಹೇಗುನ, ಔಟ್ ಕ್ಯಾಸ್ಟ್, ಆದಿ ಅಂತ್ಯ ರಹಿತ, ಚಕೋರಿ,ಹಾಗೂ  ದಿ ಫಲ್ಲೆನ್ ಎಂಬ ಹಿಂದಿ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡು,ಹಲವಾರು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ರಾಮ ರಾಮ ರೇ ಖ್ಯಾತ ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ಮಾತೊಂದು ಸಿನಿಮಾ ಮ್ಯಾನ್ ಆಫ್ ಡಿ ಮ್ಯಾಚ್ ಅತೀ ಶೀಘ್ರದಲ್ಲಿ OTT ಯಲ್ಲಿ ಕಲಾಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?