ಬಿಗ್ ಬಾಸ್ ಕನ್ನಡ ಸೀಸನ್ 10ನ ಸ್ಪರ್ಧಿ ತನಿಷಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್ಟಿ) ದೌರ್ಜನ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು (ನ.14): ಕಲರ್ಸ್ ಕನ್ನಡ ವಾಹಿನಿಯಿಂದ ನಡೆಸಲಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 10ನ ಸ್ಪರ್ಧಿ ತನಿಷಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್ಟಿ) ದೌರ್ಜನ್ಯ ಕಾಯ್ದೆಯಡಿ ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಹೌದು, ಕನ್ನಡ ಬಿಗ್‌ಬಾಸ್ ಸೀಸನ್ 10 ರಿಯಾಲಿಟಿ ಶೋನ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣದಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅವರನ್ನು ಬಂಧಿಸಿ ಒಂದು ವಾರಗಳ ಕಾಲ ಜೈಲಿಗಟ್ಟಿದ್ದರು. ಈಗ ಪುನಃ ಬಿಗ್‌ಬಾಸ್‌ನ ಇನ್ನೊಬ್ಬ ಕಂಟೆಸ್ಟಂಟ್ ತನಿಷಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಗ ತನಿಷಾ ವಿರುದ್ಧ ಎಸ್‌ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗುದೆ. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರಿಂದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಅವರ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ವರ್ತೂರ್ ಸಂತೋಷ್‌ಗೆ ಸಿಕ್ತು ಅಮ್ಮನ ಕೈತುತ್ತು! ಜನಮತಕ್ಕಲ್ಲದಿದ್ದರೂ ಮಾತೆಯ ಮಾತಿಗೆ ತಲೆ ಬಾಗ್ತಾರಾ?
ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪ ಮಾಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಡಿಗೆ ಬರುವ ಬೋವಿ ಜನಾಂಗಕ್ಕೆ ಧಾರಾವಾಹಿ ನಟಿ ತನಿಷಾ ಅವರು ಅವಮಾನ ಮಾಡಿದ್ದಾರೆಂದು ದೂರು ನೀಡಲಾಗಿದೆ. ಆದ್ದರಿಂದ ನಟಿ ತನಿಷಾ ಕುಪ್ಪುಂಡ ವಿರುದ್ದ ದೂರು ದಾಖಲಿಸಿ ಅವರ ವಿರುದ್ಧ ಕ್ರಮವನ್ನು ಕೈಗೊಂಡು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಲಾಗಿದೆ.
ಪ್ರಕರಣದ ಹಿನ್ನೆಲೆ ಇಲ್ಲಿದೆ ನೋಡಿ: ದಿನಾಂಕ: 08/11/2023ರ ಸೋಮವಾರ ಮತ್ತು ಶುಕ್ರವಾರ ರಾತ್ರಿ 9:306 ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ತನಿವಾ ಕುಪ್ಪಂಡರವರು ಡ್ರೋನ್ ಪ್ರತಾಪ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಭೋವಿ ಜನಾಂಗದ (ವಡ್ಡರ) ಕುರಿತು ಅವಹೇಳಾನಕಾರಿಯಾಗಿ ಮಾತನಾಡಿ 'ಒಡ್ಡನೋ ನೀನು ಒಡ್ಡನ ತರ ಆಕ್ಟ್ ಮಾಡ್ತಿದೀಯಾ' ಎಂಬ ಪದ ಬಳಕೆ ಮಾಡಿದ್ದಾರೆ. ಇವರು ಕರ್ನಾಟಕ ರಾಜ್ಯದ ಎಲ್ಲಾ ಭೋವಿ ಸಮುದಾಯದ ಜನಾಂಗವನ್ನು ಅವಮಾನಕ್ಕೆ ಕಾರಣವಾಗಿದ್ದಾರೆ ತನಿಶಾ ಕುಪ್ಪಂಡರವರಿಗೆ ಭೋವಿ ಜನಾಂಗದ (ವಡ್ಡರ) ಕುರಿತು ಮಾತನಾಡುವ ಯಾವುದೇ ನೈತಿಕತೆಯು ಸಹ ಇಲ್ಲ. ಜಾತಿ ಜಾತಿಗಳನ್ನು ಜನಾಂಗದ ಬಗ್ಗೆ ಮಾತಾಡಿರುವುದು ಖಂಡನೀಯ. ಇವರ ವಿರುದ್ಧ ಇಂದು ರಾಜ್ಯದ ಎಲ್ಲಾ ಜಿಲ್ಲಾ ತಾಲೂಕಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ವಡ್ಡರ ಜನಾಂಗದವರು ಪರಿಶಿಷ್ಟ ಜಾತಿಯವರು ಅಂತಾ ತಿಳಿದು ಉದ್ದೇಶಪೂರ್ವಕವಾಗಿ ಅವಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ರಣರಂಗವಾಯ್ತು ಬಿಗ್ ಬಾಸ್ ಮನೆ, ಡಾಮಿನೇಟ್ ಮಾಡೋಕೆ ಯಾವಳೋ ಅವ್ಳು, ತನಿಶಾ ವಿರುದ್ಧ ಹರಿಹಾಯ್ದ ನಮ್ರತಾ!
ಕನ್ನಡ ಚಿತ್ರರಂಗದಲ್ಲಿ ಮೋಹಕ ನಟಿಯಾಗಿ ದಂಡು ಪಾಳ್ಯ 2ರಲ್ಲಿ ಜನಪ್ರಿಯವಾಗಿರುವ ಇವರು ಪ್ರಸ್ತುತ ನಡೆಯುತ್ತಿರುವ ಬಿಗ್‌ಬಾಸ್‌ನಲ್ಲಿ ಡೋನ್ ಪ್ರತಾಪ್ ಮತ್ತು ತನಿಶಾ ಕುಪ್ಪಂಡಿ ನಡುವೆ ನಡೆಯುವ ಸಂಭಾಷಣೆಯಲ್ಲಿ ಒಂದು ಜನಾಂಗದ ಬಗ್ಗೆ ಅವಹೇಳನ ಮಾಡಿದ್ದಾರೆ. ಇವರನ್ನು ಈ ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಬೇಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ದಾಖಲು ಮಾಡಿ ಈ ಕೂಡಲೇ ಇವರನ್ನು ಬಂದಿಸಿ ಭೋವಿ (ವಡ್ಡರ) ಸಮಾಜದ ಜನಾಂಗದ ಗೌರವವನ್ನು ಕಾಪಾಡಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.