ಬಿಗ್ ಬಾಸ್ ನಮ್ರತಾ- ಕಾರ್ತಿಕ್‌ ಗುಸುಗುಸು; ಕೈ ಕೊಟ್ಟಳು ಎಂದವರಿಗೆ ಬಿಸಿ ಮುಟ್ಟಿಸಿದ ಸ್ನೇಹಿತ್!

By Vaishnavi Chandrashekar  |  First Published Jan 13, 2024, 2:01 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಮ್ರತಾ ಕಾರ್ತಿಕ್ ಫ್ರೆಂಡ್‌ಶಿಪ್‌ ಗಾಸಿಪ್. ವಿಡಿಯೋ ಮೂಲಕ ಸಲಹೆ ಕೊಟ್ಟ ಸ್ನೇಹಿತ್......


ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10 ಫಿನಾಲೆ ವಾರಕ್ಕೆ ಹತ್ತಿರವಾಗುತ್ತಿದೆ. ಟಿಕೆಟ್‌ ಟು ಫಿನಾಲೆ ವಾರದಲ್ಲಿ ಸಂಗೀತಾ ಶೃಂಗೇರಿ,ಪ್ರತಾಪ್, ವರ್ತೂರ್ ಸಂತೋಷ್ ಮತ್ತು ವಿನಯ್ ಗೌಡ ಟಫ್‌ ಫೈಟ್‌ ಕೊಟ್ಟು ಟಿಕೆಟ್‌ ಪಡೆಯಲಿದ್ದಾರೆ. ಅಲ್ಲದೆ ಈ ವಾರ ಪ್ರತಾಪ್ ಉತ್ತಮ ಪಡೆದು, ತುಕಾಲಿ ಸಂತೋಷ್ ಕಳಪೆ ಪಡೆದಿದ್ದಾರೆ. ಹೀಗಾಗಿ ಈ ವಾರ ಕಾಂಪಿಟೇಷನ್‌ ಹೆಚ್ಚಾಗಿದೆ. ಈ ಜಟಾಪಟಿ ನಡುವೆ ನಮ್ರತಾ ಮತ್ತು ಕಾರ್ತಿಕ್ ಸ್ನೇಹ ಅಪಾರ್ಥವಾಗಲಿದೆ.  

ಸ್ನೇಹಿತ್ ಮತ್ತು ನಮ್ರತಾ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಕ್ಲೋಸ್ ಆಗಿದ್ದರು. ಸ್ನೇಹಿತ್ ಎಲಿಮಿನೇಟ್ ಆದ ಮೇಲೆ ನಮ್ರತಾರ ಜೊತೆ ಕಾರ್ತಿಕ್ ಕೊಂಚ ಕ್ಲೋಸ್ ಆದರು. ಕಾರ್ತಿಕ್ ಇದ್ದಕ್ಕಿದ್ದಂತೆ ಯಾಕೆ ಕ್ಲೋಸ್ ಆದ್ರು? ಕಾರಣ ಇಷ್ಟೆ...ಸಂಗೀತಾ ಜೊತೆ ಜಗಳ ಮಾಡಿಕೊಂಡು ದೂರ ಆದಮೇಲೆ ನಮ್ರತಾ, ವಿನಯ್, ತುಕಾಲಿ ಮತ್ತು ತನಿಷಾ ಗುಂಪು ಸೇರಿಕೊಂಡು. ಹೀಗಾಗಿ ಯಾವುದೇ ಟಾಸ್ಕ್‌ ಇರಲಿ ಯಾವುದೇ ಕೆಲಸ ಇರಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಒಮ್ಮೆ ಇಬ್ಬರು ಚೇರ್ ಮೇಲೆ ತುಳಿತುಕೊಂಡು ಕೈ ಕೈ ಹಿಡಿದು ಆಟವಾಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ತೋರಿಸಲಾಗಿದೆ. ನಮ್ರತಾ ಸ್ನೇಹಿತ್‌ಗೆ ಕೈ ಕೊಟ್ಟರು, ನಮ್ರತಾ ಸ್ನೇಹಿತ್ ಬ್ರೇಕಪ್ ಅಂತ ಸುದ್ದಿಯಾಗುತ್ತಿದೆ. 

Tap to resize

Latest Videos

ಬಿಗ್ ಬಾಸ್ ನಮ್ರತಾ ಉದ್ದ ಕೂದಲು ವಿಗ್?; ನೆಟ್ಟಿಗರ ಕಿರಿಕಿರಿ ಪ್ರಶ್ನೆಗೆ ಉತ್ತರ ಕೊಟ್ಟ ನಟಿ!

'ನಿಮ್ಮಲ್ಲರಲೂ ಒಂದು ವಿನಂತಿ. ನಮ್ರತಾ ನನಗೆ ಮೋಸ ಮಾಡಿದ್ದಾರೆ ಅಂತ ಹೇಳುತ್ತಿರುವುದನ್ನು ದಯವಿಟ್ಟು ನಿಲ್ಲಿಸಿ. ನನ್ನ ಮೇಲೆ ಫೀಲಿಂಗ್ಸ್‌ ಇದೆ ಎಂದು ನಮ್ರತಾ ಯಾವತ್ತೂ ಹೇಳಿರಲಿಲ್ಲ. ಏನೇ ಫಿಲಿಂಗ್ಸ್‌ ಇದ್ದರೂ ಅದು ಒಂದು ಸೈಡ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಟ್ರೋಲ್‌ ಮೀಮ್ಸ್‌ಗಳಿಂದ ನಮ್ರತಾರ ಕುಟುಂಬ ಮತ್ತು ನನಗೆ ಬೇಸರವಾಗುತ್ತಿದೆ. ಇಲ್ಲಿ ಒಬ್ಬರ ವ್ಯಕ್ತಿತ್ವ ಹಾಳಾಗುತ್ತಿದೆ, ಹಾಗೆ ಮಾಡಬೇಡಿ. ನಮ್ಮಿಬ್ಬರ ನಡುವೆ ಏನೇ ಆಗಿದ್ದರೂ...ಅದನ್ನು ಹೊರತು ಪಡಿಸಿ ನೋಡಿದೆ ನಮತ್ರಾ ನನಗೆ ಸಿಕ್ಕ ಫಸ್ಟ್‌ ಫ್ರೆಂಡ್. ಸದಾ ಸಹಾಯ ಮಾಡುತ್ತಿದ್ದರು. ಪ್ರೂಟಿನ್‌ ಇಲ್ಲದೆ ಸಮಯದಲ್ಲಿ ಪ್ರೋಟಿನ್ ಕೊಟ್ಟರು, ಊಟ ಕಡಿಮೆ ಆಯ್ತು ಅಂತ ಹೇಳಿದಾಗ ತಮ್ಮ ಊಟ ನನಗೆ ಕೊಟ್ಟರು. ನಮ್ರತಾ ಮತ್ತು ವಿಜಯ್ ಹೊರ ಬಂದ ಮೇಲೂ ನಮ್ಮ ಬಾಂಡ್ ಹಾಗೆ ಇರುತ್ತದೆ' ಎಂದು ವಿಡಿಯೋ ಮೂಲಕ ಸ್ನೇಹಿತ್ ಸ್ಪಷ್ಟನೆ ಕೊಟ್ಟಿದ್ದಾರೆ. 

click me!