ಸಂಗೀತಾ ಸೇಡಿಗೆ ಕಾರ್ತಿಕ್​ ತಲೆಗೂದಲು ಬಲಿ! ಎರಡು ತಲೆ ಹಾವು ಅಂತಿದ್ದಾರೆ ಬಿಗ್​ಬಾಸ್​ ಫ್ಯಾನ್ಸ್​

By Suvarna News  |  First Published Nov 21, 2023, 11:30 AM IST

ಸಂಗೀತಾ ಸೇಡಿಗೆ ಕಾರ್ತಿಕ್​ ತಲೆಗೂದಲು ಬಲಿ! ಎರಡು ತಲೆ ಹಾವು ಅಂತಿದ್ದಾರೆ ಬಿಗ್​ಬಾಸ್​ ಫ್ಯಾನ್ಸ್​
 


ಎರಡನೆಯ ತಿಂಗಳಿಗೆ ಕಾಲಿಟ್ಟಿರುವ ಬಿಗ್​ಬಾಸ್​ ಕನ್ನಡದಲ್ಲಿ ಸಕತ್​ ಫೈಟಿಂಗ್ ಶುರುವಾಗಿದೆ. ದಿನದಿಂದ ದಿನಕ್ಕೆ ಎರಡು ತಂಡಗಳಾಗಿರುವ  ಗಜಕೇಸರಿ ತಂಡ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಫೈಟಿಂಗ್​ ಭರ್ಜರಿಯಾಗಿ ನಡೆಯುತ್ತಿದೆ. ಬಿಗ್​ಬಾಸ್​ ಪ್ರಿಯರಿಗೆ ತಿಳಿದಿರುವಂತೆ, ಗಜಕೇಸರಿ ತಂಡದಲ್ಲಿ ಡ್ರೋನ್ ಪ್ರತಾಪ್​, ಸಿರಿ, ಸಂಗೀತಾ, ವಿನಯ್, ಸ್ನೇಹಿತ್ ಹಾಗೂ ನಮ್ರತಾ ಇದ್ದರೆ, ಇನ್ನೊಂದು ತಂಡವಾಗಿರುವ ಸಂಪತ್ತಿಗೆ ಸವಾಲ್​ನಲ್ಲಿ ವರ್ತೂರು ಸಂತೋಷ್, ಮೈಕಲ್, ತನಿಷಾ,  ತುಕಾಲಿ ಸಂತೋಷ್,  ಕಾರ್ತಿಕ್ ಹಾಗೂ ನೀತು ಇದ್ದಾರೆ. ಇದಾಗಲೇ ಬ್ರಹ್ಮಾಂಡ ಗುರೂಜಿ ಆಗಮನ ಕೂಡ ಆಗಿದೆ. ಇಷ್ಟು ದಿನ ಫ್ರೆಂಡು ಫ್ರೆಂಡು ಅಂದುಕೊಂಡೆ ಕಾರ್ತಿಕ್ ಹಾಗೂ ತನಿಷಾ ಜೊತೆಯಲ್ಲಿದ್ದ ಸಂಗೀತ ಈಗ ವಿನಯ್ ಟೀಂ ಸೇರಿಕೊಂಡಿದ್ದಾರೆ.
 
ತಂಡವು ತಮ್ಮ ಪ್ರತಿ ತಂಡಕ್ಕೆ ಒಂದಾದ ಮೇಲೊಂದರಂತೆ ಸವಾಲು ನೀಡಬೇಕು ಎಂದು ಬಿಗ್​ಬಾಸ್​  ಟಾಸ್ಕ್​ ನೀಡಿದೆ. ಬ್ರಹ್ಮಾಂಡ ಗುರೂಜಿ ಅವರ ನೇತೃತ್ವದಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುತ್ತಿದೆ. ಸಂಗೀತ ಹಾಗೂ ವಿನಯ್ ಬೇರೆ ಬೇರೆ ತಂಡಗಳಾಗಿ ಆಟ ಆಡುತ್ತಿದ್ದರು. ಆದರೆ ಈಗ ಸಂಗೀತ ವಿನಯ್ ಟೀಮ್​ಗೆ ಸೇರಿಕೊಂಡಿದ್ದಾರೆ. ಇದರಿಂದಾಗಿ ಸವಾಲಿನ ಟಾಸ್ಕ್​ ಜೋರಾಗಿ ನಡೆಯುತ್ತಿದೆ. ಸವಾಲು ನೀಡುವಂತೆ ಬಿಗ್​ಬಾಸ್​ ಹೇಳುತ್ತಿದ್ದಂತೆಯೇ, ಸಂಗೀತಾ ಈ ಬಾರಿ ಕಾರ್ತಿಕ್ ಹಾಗೂ ತುಕಾಲಿಯನ್ನೇ ಟಾರ್ಗೆಟ್ ಮಾಡಿದರು. ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸಂಗೀತಾ ಹೇಳಿದರು. ಇದನ್ನು ಕೇಳಿದ  ತನಿಷಾ ಅಸಮಾಧಾನ ಹೊರಹಾಕಿ,   ಒಬ್ಬರಿಗೆ ಮಾತ್ರ ಕೊಡಬಹುದಾಗಿತ್ತು, ಇಬ್ಬರಿಗೂ ಹೇಳಿದ್ದು ಸರಿಯಲ್ಲ ಎಂದರು. 

ಅಮ್ಮ ಚಿಕ್ಕವಳಿದ್ದಾಗ ನಾನ್​ ಹುಟ್ಟಿದ್ರೆ ಈ ಅಪ್ಪನ ಜತೆ ಮದ್ವೆ ಮಾಡ್ತಿರಲಿಲ್ಲ: ಬಿಗ್​ಬಾಸ್​ನಲ್ಲಿ ಸ್ಪರ್ಧಿ ಕಣ್ಣೀರು!
 
ಇಷ್ಟಾಗುತ್ತಿದ್ದಂತೆಯೇ ಇದೇ ವಿಷಯವಾಗಿ  ತನಿಷಾ ಮತ್ತು ಸಂಗೀತಾ  ನಡುವೆ ಕಾದಾಟ ಶುರುವಾಯಿತು.  ಒಬ್ಬರನ್ನು ಆಯ್ಕೆ ಮಾಡಿ ಎಂದು ತನಿಷಾ ಹೇಳುತ್ತಿದ್ದಂತೆಯೇ ಸಂಗೀತಾ ದನಿ ಏರಿಸಿದರು.  ಏನೇನೋ ಮಾತಾಡ್ಬೇಡಿ ಎಂದರು. ಹೀಗೆ ತನಿಷಾ ಹಾಗೂ ಸಂಗೀತಾ ಕಿತ್ತಾಡಿಕೊಂಡರು. ನಮ್ರತಾ ಕೂಡ ಮಧ್ಯೆ ಜಗಳ ಮಾಡಿದರು. ಅವರು ಸಂಗೀತಾ ಪರ ವಹಿಸಿಕೊಂಡರು. ಈ ಮೂವರು ಸ್ಪರ್ಧಿಗಳ ನಡುವೆ ಜಗಳ ತಾರಕಕ್ಕೇರುತ್ತಲೇ  ಕಾರ್ತಿಕ್ ನಾನು ತಂಡಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ಎನ್ನುತ್ತ  ತಲೆ ಬೋಳಿಸಿಕೊಳ್ಳಲು ಸಿದ್ಧ ಎಂದರು.
 
ಅವರು ಹೀಗೆ ಹೇಳುತ್ತಿದ್ದಂತೆಯೇ ಬ್ರಹ್ಮಾಂಡ ಗುರೂಜಿ, "ಕೂದಲು ಎಲ್ಲಿಯೂ ಹೋಗಲ್ಲ, ಮತ್ತೆ ಬರತ್ತೆ ಎಂದರು.  ಕಾರ್ತಿಕ್ ಅವರು ಶೇವ್ ಮಾಡಿಸಿಕೊಂಡಿದ್ದಾರೆ. ನೀತು ಕಾರ್ತಿಕ್ ತಲೆಯನ್ನ ನುಣ್ಣಗೆ ಬೋಳಿಸಿದ್ದಾರೆ. ಸಂತು ಕೂಡ ಶೇವ್ ಮಾಡಿಸಿಕೊಂಡಿದ್ದು ಇದರ ಪ್ರೊಮೋ ರಿಲೀಸ್​ ಆಗಿದೆ.  

Tap to resize

Latest Videos

ಬಿಗ್​ಬಾಸ್​ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?

click me!