BB ಮನೆಯಲ್ಲಿ ಮಿಂಗಲ್ ಆಗೋಕೆ ಬಂದಿದ್ದಾರೆ ಇವರು; ಯಾರೀಕೆ ಚೈತ್ರಾ ಕುಟ್ಟೂರ್?

Published : Oct 14, 2019, 04:10 PM ISTUpdated : Oct 20, 2019, 04:04 PM IST
BB ಮನೆಯಲ್ಲಿ ಮಿಂಗಲ್ ಆಗೋಕೆ ಬಂದಿದ್ದಾರೆ ಇವರು; ಯಾರೀಕೆ ಚೈತ್ರಾ ಕುಟ್ಟೂರ್?

ಸಾರಾಂಶ

  ನಟಿ, ಬರಹಗಾರ್ತಿ ಹಾಗೂ ಸಹಾಯಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೈತ್ರಾ ಕುಟ್ಟೂರ್‌ ಬಿಗ್‌ ಬಾಸ್‌ ಮನೆಯಲ್ಲಿ ಆಗುವ ಜಗಳವನ್ನು ಎಂಜಾಯ್‌ ಮಾಡಲು ರೆಡಿಯಾಗಿದ್ದಾರಂತೆ ಅಷ್ಟೇ ಅಲ್ಲ ನಾನು ಸಿಂಗಲ್ಲಾಗಿದೀನಿ. ಮಿಂಗಲ್ ಅಗೋಕೆ ರೆಡಿ ಇದೀನಿ ಅಂತನೂ ಹೇಳಿದ್ದಾರೆ.

 

'ಸೂಜಿದಾರಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಚೈತ್ರಾ ಈ ಹಿಂದೆ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸೂಜಿದಾರಾ ಚಿತ್ರಕ್ಕೆ ಸಂಭಾಷಣೆ ಹಾಗೂ ಹಾಡೊಂದನ್ನು ಬರೆದಿದ್ದಾರೆ.

BB7:ಕಾಗೆ ಹಾರಿಸೋ ಕಿನ್ನರಿಗ್ಯಾಕೆ 'Royal Shetty'ಪಟ್ಟ, ಬೀಡಿ ತಿನ್ನೋ ಚಟ?

 

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್‌ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಬಿಗ್‌ ಬಾಸ್‌ ಮನೆಗೆ ಪ್ರವೇಶಿಸುತ್ತಿರುವುದು ಕರ್ನಾಟಕದ ಜನರ ನಡುವೆ ಜನಪ್ರಿಯತೆ ಪಡೆಯುವುದಕ್ಕೆ ಎಂದು ಬಹಿರಂಗಪಡಿಸಿದ್ದಾರೆ.

BB7: 'ಅಗ್ನಿಸಾಕ್ಷಿ' ಮಾಸ್ಟರ್‌ಮೈಂಡ್‌ ಚಂದ್ರಿಕಾಗೆ ಹುಡುಗನನ್ನು ಹುಡುಕೋದೆ ಬೇಡ್ವಂತೆ!

ಬಿಗ್‌ ಬಾಸ್‌ ಮನೆಗೆ ಪ್ರವೇಶಿಸುವ ಮುನ್ನ ಚೈತ್ರಾ ಕೊನೆಯದಾಗಿ ಮೆಸೇಜ್ ಮಾಡಿದ್ದು ತನ್ನ ಆಪ್ತ ಸ್ನೇಹಿತೆಗೆ. ಹಾಗೂ ಸಿಂಗಲ್ ಇರುವ ಕಾರಣ ಮನೆಯಲ್ಲಿ ಮಿಂಗಲ್ ಆಗಲು ಸಜ್ಜಾಗಿದ್ದಾರೆ ಅಷ್ಟೇ ಅಲ್ಲದೆ ತನ್ನ ನೆಚ್ಚಿನ ಹುಡುಗ ಸಂಬಂಧಗಳನ್ನು ಗೌರವಿಸಬೇಕು ಎಂದು ಹೇಳಿಕೊಂಡಿದ್ದಾರೆ. ಚೈತ್ರಾಗೆ ಬಿಗ್ ಬಾಸ್ ಮನೆಯಲ್ಲಿ ಸಿಗ್ತಾರಾ ಜೋಡಿ ಕಾದು ನೋಡಬೇಕಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ