
ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಕೊರೋನಾ ಲಾಕ್‌ಡೌನ್ ಕಾರಣದಿಂದ ಅರ್ಧಕ್ಕೇ ನಿಲ್ಲಿಸುವಂತ ಪರಿಸ್ಥಿತಿ ಎದುರಾಗಿತ್ತು. 72 ದಿನ ಬಿಗ್ ಬಾಸ್ ಜರ್ನಿ ಮಾಡಿದ್ದ ಸ್ಪರ್ಧಿಗಳು ರಿಯಾಲಿಟಿ ಶೋ ಮನೆಯಿಂದ ಹೊರ ಬಂದು, ತಮ್ಮಮ್ಮ ಮನೆ ಸೇರಿ ಕೊಂಡಿದ್ದರು.
ನಾನೇ ಟ್ರೋಲ್ ಆಗಿದ್ದಕ್ಕೆ ಬೇಸರವಾಗಿದೆ: ಮಂಜು ಪಾವಗಡ
ಹೊರ ಬಂದ ಸ್ಪರ್ಧಿಗಳು ಈಗಾಗಲೇ ಸಾಕಷ್ಟು ಖಾಸಗಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮತ್ತೆ ಶುರುವಾಗುತ್ತಾ? ಎಂದು ಯಾರೇ ಪ್ರಶ್ನೆ ಮಾಡಿದ್ದರೂ ಇರಬಹುದು, ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ ಕಾರ್ಯಕ್ರಮದ ಆಯೋಜಕರು ಇದೀಗ ಮತ್ತೆ ಶೋ ಆರಂಭಿಸುವುದಾಗಿ ಸುಳಿವು ನೀಡುತ್ತಿದ್ದಾರೆ.
ಹೌದು! ಜೂನ್ ಕೊನೆಯ ವಾರ ಅಥವಾ ಜುಲೈನ ಮೊದಲ ವಾರದಿಂದ ಬಿಗ್ ಬಾಸ್ ಮತ್ತೆ ಶುರುವಾಗುವ ಸಾಧ್ಯತೆಗಳಿವೆ. ಸ್ಪರ್ಧಿಗಳು ಯಾರೂ ಮನೆಯಿಂದ ಹೊರ ಹೋಗದಂತೆ ಆಯೋಜಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲಾ ಸುಳಿವು ಸಿಕ್ಕಿದೆ ಅಂದ್ರೆ ಬಿಗ್ ಬಾಸ್ ಮತ್ತೆ ಶುರುವಾಗುತ್ತೆ ಎಂದೇ ಅರ್ಥ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.
ಶೇ.5 ವೋಟ್, ದಿವ್ಯಾ ನನ್ನ ಲಕ್ಕಿ ಚಾರ್ಮ್; ಎಲ್ಲಿ ನೋಡಿದರೂ ಅರವಿಂದ್ ವಿಡಿಯೋ!
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅರವಿಂದ್, ಶಮಂತ್, ದಿವ್ಯಾ ಉರುಡುಗ, ವೈಷ್ಣವಿ ಹಾಗೂ ರಘು ಗೌಡ ಜನಪ್ರಿಯತೆ ಹೆಚ್ಚಾಗಿದೆ. ಪ್ರಶಾಂತ್ ಸಂಬರಗಿ ಸಂದರ್ಶನಗಳು ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.