ಅಪ್ಪ ಕಣ್ಣೀರು ತಡೆದುಕೊಂಡರೂ ನಾನು ಭಾವುಕಳಾದೆ: ಆಶಿತಾ ಚಂದ್ರಪ್ಪ

Published : Jun 11, 2021, 01:01 PM IST
ಅಪ್ಪ ಕಣ್ಣೀರು ತಡೆದುಕೊಂಡರೂ ನಾನು ಭಾವುಕಳಾದೆ: ಆಶಿತಾ ಚಂದ್ರಪ್ಪ

ಸಾರಾಂಶ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಶಿತಾ ಚಂದ್ರಪ್ಪ ತಂದೆ ಕನ್ಯಾದಾನ ಮಾಡಿ ಕೊಡುತ್ತಿರುವ ಸಣ್ಣ ವಿಡಿಯೋ ಹಂಚಿಕೊಂಡಿದ್ದಾರೆ. 

ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಹಾಗೂ ಉದ್ಯಮಿ ರೋಹನ್ ಮಾರ್ಚ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಲಾಕ್‌ಡೌನ್‌ ಅಗಿದ್ದ ಕಾರಣ ಕೇವಲ ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.  ಇದೀಗ ತಂದೆ ಕನ್ಯಾದಾನ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ ಸ್ಪರ್ಧಿ ಆಶಿತಾ ಈಗ ಬ್ಯುಸಿನೆಸ್‌ ಐಕಾನ್ ; ಆನ್‌ಲೈನಲ್ಲಿ ಸಿಗುತ್ತೆ ಟ್ರೆಂಡಿ ಬಟ್ಟೆಗಳು

'ಅಪ್ಪ ಕಣ್ಣೀರು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದರು, ಆದರೆ ನಾನು ಕಂಟ್ರೋಲ್ ಮಾಡಲಾಗದೆ ಭಾವುಕಳಾದೆ,' ಎಂದು ಆಶಿತಾ ಬರೆದಿಕೊಂಡಿದ್ದಾರೆ. 'ಹೋ ಆಶಿ ಇದು ನಿನ್ನ ಮುದ್ದು ಮುಖ' ಎಂದು ಕಿರುತೆರೆ ನಟಿ ತೇಜಸ್ವಿನಿ ಕಾಮೆಂಟ್ ಮಾಡಿದ್ದಾರೆ. ಆಶಿತಾ ಶೇರ್ ಮಾಡಿರುವ ಈ ವಿಡಿಯೋ ನೋಡಿ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ.

ಆಶಿಕಾಗೆ ಮದುವೆಗೂ ಕೆಲವು ದಿನಗಳ ಮುನ್ನ ಕೊರೋನಾ ಸೋಂಕು ತಗುಲಿತ್ತು. ಈ ಕಾರಣಕ್ಕೆ ಅನೇಕರು ಮದುವೆಯಲ್ಲಿ ಭಾಗಿಯಾಗುವುದಕ್ಕೆ ಹಿಂಜರಿದಿಗ್ಗರು, ಆದರೆ ಒಂದು ನಿಮಿಷವೂ ಯೋಚಿಸದೇ ಪುನೀತ್ ರಾಜ್‌ಕುಮಾರ್ ದಂಪತಿ ಮದುವೆಗೆ ಆಗಮಿಸಿ ನವ ದಂಪತಿಗೆ, ಆಶೀರ್ವಾದ ಮಾಡಿದ್ದರು. 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಆಶಿತಾ ಚಂದ್ರಪ್ಪ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯೂ ಆಗಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2006 ರಿಂದ 2026 ರವರೆಗೆ! ಕಾದಂಬರಿಯಿಂದ… ಲಕ್ಷ್ಮೀ ನಿವಾಸ… ನಟಿ ಅನಿಕಾ ನಟನಾ ಜರ್ನಿಗೆ 20 ವರ್ಷ
Amruthadhaare: ಯಾರೀ ದೀಪಿಕಾ? ಹುಟ್ಟಿನ ಗುಟ್ಟು ರಟ್ಟಾಯ್ತು- ಅಮ್ಮನ ಮಡಿಲು ಸೇರೊ ಕಾಲ ಬಂದಾಯ್ತು