ಫ್ಯಾಮಿಲಿ ಮ್ಯಾನ್‌ದಲ್ಲಿ ಮಿಂಚಿದ ಚೆಲ್ಲಂ ಸರ್ ಯಾರು?

Published : Jun 11, 2021, 08:48 PM ISTUpdated : Jun 11, 2021, 08:52 PM IST
ಫ್ಯಾಮಿಲಿ ಮ್ಯಾನ್‌ದಲ್ಲಿ ಮಿಂಚಿದ ಚೆಲ್ಲಂ ಸರ್ ಯಾರು?

ಸಾರಾಂಶ

* ಒಟಿಟಿ ಮಾದರಿಯಲ್ಲಿ ಹವಾ ಎಬ್ಬಿಸಿದ ಫ್ಯಾಮಿಲಿ ಮ್ಯಾನ್ *  ಸೋಶಿಯಲ್ ಮೀಡಿಯಾವನ್ನು ಸೆಲೆದ ಚೆಲ್ಲಂ ಸರ್ ಪಾತ್ರ * ಟ್ರೋಲ್, ಮೆಮೆಗಳಿಗೂ ಕಡಿಮೆ ಇಲ್ಲ * ಎಚ್ಚರಿಕೆ ನೀಡುವ ಐಕಾನ್ ಆಗಿ ಚೆಲ್ಲಂ ಸರ್

ಬೆಂಗಳೂರು(ಜೂ.  11)  ಒಟಿಟಿ  ಮಾದರಿಯಲ್ಲಿ ಬಿಡುಗಡೆಯಾಗಿರುವ ದಿ ಫ್ಯಾಮಿಲಿ ಮ್ಯಾನ್​ ಸೀಸನ್​ 2  ಹವಾ ಎಬ್ಬಿಸಿದೆ.  ಎಲ್ಲದಕ್ಕಿಂತ ಹೆಚ್ಚಿನ ಟಾಕ್ ಗೆ ಒಳಗಾಗಿರುವುದು 
ಚೆಲ್ಲಂ ಸರ್ ಪಾತ್ರ. ಚೆಲ್ಲಂ ಅಂದರೆ ಡಾರ್ಲಿಂಗ್!

ಚೆಲ್ಲಂ ಸರ್ ಪಾತ್ರ ಸೋಶಿಯಲ್ ಮೀಡಿಯಾದ ಡಾರ್ಲಿಂಗ್ ಆಗಿದೆ.  ಚೆಲ್ಲಂ ಆಗಿ ಕಾಣಿಸಿಕೊಂಡಿರುವ 51 ವರ್ಷದ ಉದಯ್​​  ಮಹೇಶ್ 15 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.  ತಮಿಳು ಕಿರುತೆರೆಯಲ್ಲಿಯೂ ದೊಡ್ಡ ಹೆಸರು ಸಂಪಾದನೆ ಮಾಡಿಕೊಂಡಿದ್ದಾರೆ.

ಸಮಂತಾ ಪಡೆದ ಸಂಭಾವನೆ ಮೊತ್ತ

ಮೊದಲ ಸೀಸನ್ ಭಯೋತ್ಪಾನೆ ವಿಷಯವನ್ನು ಒಳಗೊಂಡಿದ್ದರೆ, ಈ ಬಾರಿ ಶ್ರೀಲಂಕಾ ತಮಿಳರ ಹೋರಾಟದ ಹಿನ್ನೆಲೆಯಲ್ಲಿ ಕಥೆ ಸಾಗಿದೆ.   ಹವಾ ಯಾವ ಪ್ರಮಾಣದಲ್ಲಿ ಇದೆ ಎಂದರೆ ಸೀರಿಸ್​ನಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು, ಅವುಗಳ ಡೈಲಾಗ್​ಗಳು ಮಿಮ್ಸ್​, ಟ್ರೋಲ್​ಗಳಿಗೆ ಭರ್ಜರಿ ಆಹಾರವಾಗಿದೆ. ಮನೋಜ್​ ಬಾಜಪೇಯಿ, ಸಮಂತಾ ಸೀರಿಸ್ ನ ಪ್ರಮುಖ ಆಧಾರ ಸ್ತಂಭಗಳು. 

ಯಾವ ಸಮಸ್ಯೆ ಎದುರಾದರೂ ಮಾಹಿತಿ ಬೇಕಾದರೂ ಅಧಿಕಾರಿ ಶ್ರೀಕಾಂತ್ ಚೆಲ್ಲಂ ಸರ್ ಗೆ ಕರೆ ಮಾಡುತ್ತಾರೆ. ಅವರಿಗೆ ಗೊತ್ತಿರದ ವಿಚಾರವೇ ಇಲ್ಲ. ತಕ್ಷಣ ಮಾಹಿತಿ ನೀಡುತ್ತಾರೆ. 15 ನಿಮಿಷ್ ಪಾತ್ರ ಮಹೇಶ್ ಅವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿದೆ.

ಶ್ರೀಕಾಂತ್​ ತಿವಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮನೋಜ್​ ಬಾಜಪೇಯಿ ಯಾವುದೇ ಮಾಹಿತಿ ಬೇಕಿದ್ದರೂ ಚೆಲ್ಲಂ ಸರ್​​ ಎಂಬುವರಿಗೆ ಕರೆ ಮಾಡುತ್ತಾರೆ. ಚೆಲ್ಲಂ ಸರ್​ ಆಗಿ ಅಭಿನಯಿಸಿರುವ ಉದಯ್​​ ಮಹೇಶ್​ ಅವರು ಸೀರಿಸ್​ ಉದ್ದಕ್ಕೂ  ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ.

ಕಾಲೆಳೆದುಕೊಂಡ ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್

ಜೋಕ್‌ಗಳು ಮತ್ತು ಮೇಮೆಗಳು ಒಂದು ಕಡೆಯಾದರೆ ಈ ಪ್ರಖ್ಯಾತ ಪಾತ್ರವನ್ನು ಜಾಗೃತಿ ವಿಚಾರಕ್ಕೂ ಬಳಸಿಕೊಳ್ಳಲಾಗುತ್ತಿದೆ. ಲಸಿಕೆ ಹಾಕಲು ಜನರನ್ನು ಪ್ರೋತ್ಸಾಹಿಸಲು ಆರೋಗ್ಯ ಸಚಿವಾಲಯವು ಇವರ ಪೋಟೋ ಬಳಸಿಕೊಂಡಿದೆ. ಉತ್ತರ ಪ್ರದೇಶ ಪೊಲೀಸರು ಸಹಾಯವಾಣಿ ನೀಡಲು ಚೆಲ್ಲಮ್ ಮೊರೆ ಹೋಗಿದ್ದಾರೆ.

ನನಗೆ ಅಚ್ಚರಿಯಾಗುತ್ತಿದೆ. ಜನ ಈ ಪಾತ್ರದ ಮೇಲೆ ಇಟ್ಟಿರುವ ಪ್ರೀತಿ ಆಶ್ಚರ್ಯ ತಂದಿದೆ.  ದಿ ಫ್ಯಾಮಿಲಿ ಮ್ಯಾನ್‌ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದೆ. ಜನ ಏನನ್ನು ಬಯಸುತ್ತಾರೆ ಎನ್ನುವುದುದನ್ನು ಹೇಳಲು ಅಸಾಧ್ಯ. ಆದರೆ ಕೆಲವೊಂದು ಪಾತ್ರಗಳು ಅಚ್ಚಳಿಯದೇ  ಉಳೀದಿಕೊಂಡು ಬಿಡುತ್ತವೆ ಎಂದು ಮಹೇಶ್ ಹೇಳುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!