ಬೆದರು ಬೊಂಬೆ ದಿವ್ಯಾ ಸುರೇಶ್; ಲ್ಯಾಗ್ ಮಂಜು ಕಾಮಿಡಿ ಅತಿಯಾಗಿ ಕಣ್ಣೀರಿಟ್ಟ ಸ್ನೇಹಿತೆ!

Suvarna News   | Asianet News
Published : Mar 21, 2021, 11:25 AM ISTUpdated : Mar 21, 2021, 11:38 AM IST
ಬೆದರು ಬೊಂಬೆ ದಿವ್ಯಾ ಸುರೇಶ್; ಲ್ಯಾಗ್ ಮಂಜು ಕಾಮಿಡಿ ಅತಿಯಾಗಿ ಕಣ್ಣೀರಿಟ್ಟ ಸ್ನೇಹಿತೆ!

ಸಾರಾಂಶ

ವೀಕೆಂಡ್ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ದಿವ್ಯಾ ಸುರೇಶ್ ಮಂಜು ಪಾವಗಡ ಮಾಡಿದ ಹಾಸ್ಯ ಕೆಲವೊಮ್ಮೆ ನೋವಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ಲ್ಯಾಗ್ ಮಾಡುತ್ತಿರುವುದು ಸರಿಯೇ?  

ಬಿಬಿ ಸೀಸನ್ 8 ನಾಲ್ಕನೇ ವಾರಕ್ಕೆ ಕಾಲಿಡಲು ಸ್ಪರ್ಧಿಗಳು ಸಜ್ಜಾಗಿದ್ದಾರೆ. ಪ್ರತಿ ವಾರದ ಕೊನೆಯಲ್ಲಿ ಸುದೀಪ್‌ ಜೊತೆ ಮಾತುಕತೆ ಮಾಡುವ ಸದಸ್ಯರು ಇಷ್ಟ ಕಷ್ಟಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಮಂಜು ಪಾವಗಡ ಅಲಿಯಾಸ್ ಲ್ಯಾಗ್‌ಗೆ ಆತ್ಮೀಯ ಗೆಳತಿಯಾಗಿರುವ ದಿವ್ಯಾ ಇದೀಗ ಮಂಜು ಕಾಮಿಡಿಗೆ ಕಣ್ಣೀರಿಟ್ಟಿದ್ದಾರೆ.

ಬಾಡಿ ಶೇಮಿಂಗ್ ಮಾಡಿದೋರ ಮುಂದೆಯೇ ಮಿಸ್ ಸೌತ್ ಬೆಂಗಳೂರು ಎನಿಸಿಕೊಂಡ ಕ್ಷಣ 

ಕಣ್ಣೀರು ಹಾಕಿದ ದಿವ್ಯಾ:

ರಂಗಭೂಮಿ ಕಲಾವಿದನಾಗಿರುವ ಮಂಜು ಪಾವಗಡ ತುಂಬಾನೇ ಕಾನ್ಫಿಡೆಂಟ್ ವ್ಯಕ್ತಿ. ಯಾರು ಎಷ್ಟೇ ದುಖಃದಲ್ಲಿದ್ದರು ಅವರನ್ನು ಹೊಟ್ಟೆ ನೋವು ಬರುವಂತೆ ನಗಿಸುವ ಶಕ್ತಿ ಹೊಂದಿರುವ ಕಲಾವಿದ. ಯಾವುದೇ ಸನ್ನಿವೇಷ ಕೊಟ್ಟರು ಅದ್ಭುತವಾಗಿ ಅಭಿನಯಿಸುವ ನಟ. ಸಾಧಾರಣ ವ್ಯಕ್ತಿ ಸೆಲೆಬ್ರಿಟಿಗಳ ಜೊತೆ ಹೊಂದಿಕೊಂಡು ಹೋಗಲು ಸಾಧ್ಯವೇ ಎಂದು ಚಿಂತಿಸುತ್ತಿರುವಾಗ ಬಿಗ್ ಬಾಸ್‌ ಸೀಸನ್‌8 ಮಂಜು ಅವರನ್ನು ಬಾ ಬಾ ರಂದು ಕರೆಯಲು ಆರಂಭಿಸಿತ್ತು. 

ಆರಂಭದಿಂದಲೂ ಮಂಜು ಜೊತೆ ಆತ್ಮೀಯಾಗಿರುವ ವ್ಯಕ್ತಿ ದಿವ್ಯಾ ಸುರೇಶ್. ಒಬ್ಬರನ್ನೊಬ್ಬರು ಕಾಲು ಎಳೆದುಕೊಂಡು, ಸಲಹೆ ನೀಡುತ್ತಾ ಬೆಸ್ಟ್‌ ಫ್ರೆಂಡ್ಸ್ ರೀತಿ ಇರುತ್ತಾರೆ. ಅಲ್ಲದೆ ಮೈಕ್ ಬದಲಾಯಿಸಿಕೊಂಡು ನಮಗೆ ಮದುವೆಯಾಗಿದೆ ಎಂದೆಲ್ಲಾ ಹೇಳಿಕೊಂಡಿದ್ದರು. ಆದರೆ ಒಂದು ದಿನ ಲ್ಯಾಗ್ ಮಾಡಿದ ಕಾಮಿಡಿಗೆ ದಿವ್ಯಾ ರಾತ್ರಿಯಲ್ಲಿ ಕಣ್ಣೀರಿಟ್ಟಿದ್ದಾರೆ.

ರಘು ಬಗ್ಗೆ ಲ್ಯಾಗ್‌ ಮಂಜಾ ಇಂಥಾ ಮಾತಾ ಆಡೋದು? ಕಾರಂತ್ ಬೇಸರ 

ಲ್ಯಾಗ್ ಮಂಜು ಕಾಮಿಡಿ ಮಾಡುವಾಗ ದಿವ್ಯಾ ಉರುಡುಗ ಹಾಗೂ ಅರವಿಂದ್ ಎದುರು ಬೆದರು ಬೊಂಬೆ ಅಂತ ದಿವ್ಯಾ ಸುರೇಶ್‌ಗೆ  ಕರೆದಿದ್ದಾರೆ. ಬೇಸರ ಮಾಡಿಕೊಂಡ ದಿವ್ಯಾ ಸುರೇಶ್ ಎಲ್ಲರೆದುರು ಮಂಜು ಬೈಯ್ದಿದ್ದಾರೆ. ಮಧ್ಯರಾತ್ರಿ ಒಬ್ಬರೇ ಒಂದೆ ಕಡೆ ಕೂತಿದ್ದು ಕಣ್ಣೀರಿಟ್ಟಿದ್ದಾರೆ.  

ರಘು ಗೌಡ ಬಗ್ಗೆ ಹಾಸ್ಯ ಮಾಡುವಾಗ ಲ್ಯಾಗ್ ಮಂಜು ನೀಡಿದ ಕೇಳಿದ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. 'ನಿನಗೂ ಈ ಕರೆ ಬೊಂಬೆಗೂ ಏನು ಡಿಫರೆನ್ಸ್ ಇಲ್ಲ'ಎಂದು ಹೇಳಿದ್ದು ತಪ್ಪು  ಇದು ಬಾಡಿ ಶೇಮಿಂಗ್ ಆಗುವುದಿಲ್ಲವೆ? ರಘು ಗೌಡ ಇಂಥ ಶಬ್ದ ಕೇಳಿಯೂ ಕೂಲ್ ಆಗಿ ಹೇಗೆ ಇದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್' ಮುಗಿದ ಬಳಿಕ ಬರಲಿರೋ ಸೀರಿಯಲ್ ಯಾವುದು? ಉತ್ತರ ಇಲ್ಲಿದೆ..
ಎಲ್ಲರನ್ನು ನಗಿಸೋ ಗಿಲ್ಲಿ ನಟನ ಮನಸ್ಸಿನಲ್ಲೂ ಹೇಳಲಾಗದಷ್ಟು ನೋವಿದೆ! ದುರಂತ ಪ್ರೇಮಕಥೆ ಯಾರಿಗೂ ಗೊತ್ತಿಲ್ಲ