ಈ ಸಲದ ಬಿಗ್ ಬಾಸ್ ಮನೆಯ ರೋಮಿಯೋ ಯಾರು ಗೊತ್ತಾ!

Suvarna News   | Asianet News
Published : Mar 20, 2021, 04:39 PM IST
ಈ ಸಲದ ಬಿಗ್ ಬಾಸ್ ಮನೆಯ ರೋಮಿಯೋ ಯಾರು ಗೊತ್ತಾ!

ಸಾರಾಂಶ

ಬಿಗ್‌ಬಾಸ್‌ ಮನೆ ಅಂದ್ರೇ ಸಖತ್ ಕಲರ್ ಫುಲ್. ಸದ್ಯಕ್ಕೆ ಈ ಮನೆಯಲ್ಲಿ ರೋಮಿಯೋ ಒಬ್ರಿದ್ದಾರೆ. ಅವರ್ಯಾರು, ಎಲ್ಲಿಯವ್ರು?  

ಬಿಗ್‌ಬಾಸ್ ಸೀಸನ್ 8 ಶುರುವಾಗಿ ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇಬ್ಬರು ಎಲಿಮಿನೇಶನ್‌ ಆಗಿ ಮನೆಯಿಂದ ಹೊರಬಿದ್ದಿದ್ದಾರೆ. ಸ್ಪರ್ಧಿಗಳು ಕಡಿಮೆಯಾಗ್ತಾ ಹೋದಷ್ಟೂ ಆಟ ರಂಗೇರುತ್ತಾ ಹೋಗುತ್ತಿದೆ. ಎಲ್ಲೆಲ್ಲಿಂದಲೋ ಬಂದು ಈ ದೊಡ್ಡ ಮನೆಯಲ್ಲಿ ಒಟ್ಟಾಗೊ ಬದುಕೋವಾಗ ಸಣ್ಣಪುಟ್ಟ ಕ್ರಶ್ಶು, ಪ್ರೇಮ ಎಲ್ಲ ಮಾಮೂಲಿ. ಈ ಮನೆಯಲ್ಲಿ ಕ್ರಶ್‌ ಆಗಿ ಲವ್‌ ಮಾಡಿ ಮದುವೆಯೂ ಆಗಿ ಸುಖ ಸಂಸಾರ ನಡೆಸುತ್ತಿರುವ ಜೋಡಿಯೂ ಕಣ್ಮುಂದೆ ಇದೆ. ಅದು ಚಂದನ್‌ ಶೆಟ್ಟಿ-ನಿವೇದಿತಾ ಗೌಡ. ಮನೆಯಲ್ಲಿ ಲವರ್ಸ್ ಥರ ಇದ್ದು, ಆಚೆ ಹೋದಮೇಲೆ ಜಸ್ಟ್ ಪರಿಚಿತರಾಗಷ್ಟೇ ಉಳಿದಿರುವವರೂ ಒಂದಿಷ್ಟು ಜನ ಸಿಕ್ತಾರೆ. 
 ಆದರೆ ಈ ಬಾರಿಯ ಬಿಗ್‌ಬಾಸ್ ಸೀಸನ್ ನಲ್ಲಿ ಶುರುವಿಂದಲೇ ಒಂದಿಷ್ಟು ಜನ ರೋಮಿಯೋಗಳಿದ್ರು. ಅವ್ರಲ್ಲೊಬ್ರು ಶಮಂತ್‌ ಗೌಡ. ನಾನು ತುಂಬ ಸ್ಮಾರ್ಟ್, ನಂಗೆ ಬಹಳಷ್ಟು ಜನ ಹುಡುಗೀರು ಬೀಳ್ತಾರೆ ಅಂತ ಡೈಲಾಗ್ ಹೊಡೆದು ಮನೆ ಪ್ರವೇಶಿಸಿದ ಧೀರ. ಬಿಗ್‌ಬಾಸ್ ಮನೇಲಿ ತಾನೇ ರೋಮಿಯೋ ಥರ ಇರ್ತೀನಿ ಅಂತ ಡೈಲಾಗ್ ಹೊಡೆದರು. ಆದರೆ ಯಾವ ಹುಡುಗೀರೂ ಈ ಪುಣ್ಯಾತ್ಮಂಗೆ ಕ್ಯಾರೇ ಅಂದಿಲ್ಲ. ಆದರೂ ಈ ವ್ಯಕ್ತಿ ಇರಿಟೇಟ್ ಮಾಡುವಷ್ಟೂ ಡೈಲಾಗ್ ಹೊಡಿಯೋದು ನೋಡಿ ಶುಭಾ ಪೂಂಜಾ, ನಿಂಗೆ ತಾಕತ್ತಿದ್ರೆ ಈ ಬಿಗ್‌ಬಾಸ್‌ ಮನೇಲಿ ಒಬ್ಳು ಹುಡುಗೀನಾದ್ರೂ ಪಟಾಯ್ಸು ನೋಡೋಣ ಅಂತ ಓಪನ್ ಚಾಲೆಂಜ್ ಮಾಡಿದ್ರು. ಚಾಲೆಂಜ್ ಹಾಕಿ ವಾರ ಕಳೀತಾ ಬಂತು. ಹುಡುಗೀರು ಬೀಳೋದಿರಲಿ, ಈತನ ಬಗ್ಗೆ ಕಂಪ್ಲೇಂಟ್ ಹೇಳೋದೇ ಹೆಚ್ಚಾಗಿದೆ. ಈ ವಾರ ಶಮಂತ್ ಎಲಿಮಿನೇಶನ್ ಆಗೋದು ಬಹುತೇಕ ಖಚಿತವಾಗಿದೆ. 

20 ವರ್ಷದ ನಿಕ್ ಮೆಸೇಜ್ ಮಾಡ್ತಿದ್ದಾಗ ಸೀರಿಯಸ್ ಆಗಿ ತಗೊಂಡಿರ್ಲಿಲ್ಲ ಪ್ರಿಯಾಂಕ ...

ಇನ್ನೊಬ್ಬ ರೋಮಿಯೋ ಲ್ಯಾಗ್ ಮಂಜ. ಬಂದ ದಿನವೇ ಮಂಜನ ಜೊತೆಗೆ ದಿವ್ಯಾ ಸುರೇಶ್ ಆತ್ಮೀಯತೆ ತೋರಿಸಿಕೊಂಡ್ರು. ಸ್ವಲ್ಪ ಟೈಮ್‌ಗೆ ದಿವ್ಯಾ ಉರುಡುಗನೂ ಮಂಜನ ಹಿಂದೆ ಬೀಳೋದಕ್ಕೆ ಟ್ರೈ ಮಾಡಿದ್ರು. ಮಂಜನ ಮಜವಾದ ಮಾತುಗಳು, ಆಟ ಆಡೋ ರೀತಿ, ಒಳ್ಳೆಯ ಬಿಹೇವಿಯರ್ ಹುಡುಗೀರನ್ನು ಇಂಪ್ರೆಸ್ ಮಾಡಿತ್ತು. 

ಆದರೆ ಸದ್ಯಕ್ಕೆ ರಿಯಲ್ ರೋಮಿಯೋ ಅನಿಸಿಕೊಂಡವರು ಟೀಮ್‌ನ ಕ್ಯಾಪ್ಟನ್ ಅರವಿಂದ ಕೆಪಿ. ಇವರು ಟಿವಿಎಸ್‌ ಬೈಕ್ ರೇಸರ್‌. ಬಿಗ್‌ಬಾಸ್ ಮನೆಗೆ ಹೋದಮೇಲೆ ಇವರ ರೇಸ್ ವೀಡಿಯೋಗಳೋಗಳು ಸಖತ್ ಹೈಪ್ ಕ್ರಿಯೇಟ್ ಮಾಡಿವೆ. ಆದರೆ ಬೈಕ್ ಓಡಿಸೋ ಕೈಗಳು ಸದ್ಯಕ್ಕೆ ಹುಡುಗಿಯನ್ನ ಮುದ್ದಾಡೋದಕ್ಕೆ ತವಕದಿಂದಿರುವ ಹಾಗಿವೆ. ದಿವ್ಯಾ ಉರುಡುಗ ಹಾಗೂ ಅರವಿಂದ ಕೆಪಿ ಜೋಡಿ ಬಿಗ್‌ಬಾಸ್ ಮನೆಯ ರೋಮಿಯೋ ಜ್ಯೂಲಿಯೆಟ್ ಆಗಿದ್ದಾರೆ. ಹಾಗೆ ನೋಡಿದ್ರೆ ದಿವ್ಯಾ ಉರುಡುಗ ಜೊತೆಗೆ ಅವರ ಸೆಳೆತ ಹೆಚ್ಚಾಗೋದಕ್ಕೆ ಸುದೀಪ್‌ ಸಹ ಇಂಡರೈರೆಕ್ಟ್‌ ಆಗಿ ಕಾರಣವಾಗಿದ್ದಾರೆ. ಹಿಂದಿನ ವಾರವೇ ಅರವಿಂದ್ ದಿವ್ಯಾ ಈ ವರ್ಷವೇ ಮದುವೆ ಆಗ್ತಾರಾ ಅನ್ನೋದನ್ನು ನೇರವಾಗಿ ಅರವಿಂದ್ ದಿವ್ಯಾ ಬಳಿ ಕೇಳಿದ್ರು. ಸುದೀಪ್ ಕಳೆದ ವಾರ 'ವೀಕೆಂಡ್ ಕಥೆ ಸುದೀಪ್ ಜೊತೆ' ಟೈಮ್ ನಲ್ಲಿ ಈ ವಿಷಯ ಪ್ರಸ್ತಾಪಿಸಿ ಅರವಿಂದ್ ಕಾಲೆಳೆದಿದ್ರು. ಇದಾದ ಮೇಲೆ ತಮ್ಮ ಜೋಡಿಯನ್ನು ಆರಿಸಿಕೊಳ್ಳೋ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ಅರವಿಂದ್ ದಿವ್ಯಾರನ್ನು ಸೂಚಿಸುತ್ತಾರೆ. ಆದರೆ ಉಳಿದಿಬ್ಬರ ಮಾತಿಗೆ ನೋ ಅನ್ನೋ ದಿವ್ಯಾ ಅರವಿಂದ್ ತನ್ನ ಹೆಸರು ಕೂಗಿದ ತಕ್ಷಣ ಕಣ್ಣರಳಿಸಿ ಎಸ್ ಅಂದಿದ್ದಾರೆ. ಅಲ್ಲಿಂದ ಅವರ ಜೋಡಿ ಆಟದೊಳಗೂ ಹೊರಗೂ ಸಖತ್ ರೊಮ್ಯಾಂಟಿಕ್ ಆಗಿದೆ. 

ಸೀತೆ, ಹನುಮಂತ, ಕೃಷ್ಣ, ದ್ರೌಪದಿ ನಂತರ ರಾಮನೂ ಬಿಜೆಪಿಗೆ! ...

ಅವರಿಬ್ಬರ ಬೆಡ್ ಶೀಟ್ ಸೇಮ್ ಇದೆ ಅನ್ನೋದನ್ನು ನಿನ್ನೆ ದಿವ್ಯಾ ಸುರೇಶ್ ರಿವೀಲ್ ಮಾಡಿದ್ದಾರೆ. ಜೊತೆಗೆ ಅರವಿಂದ್ ಬಗ್ಗೆ ದಿವ್ಯಾ ಉರುಡುಗ ಎಂಥಾ ಪೊಸೆಸಿವ್ ಆಗ್ತಿದ್ದಾರೆ ಅನ್ನೋದನ್ನೂದಾಖಲೆ ಹೇಳಿದ್ದಾರೆ. ಮನೆಯಲ್ಲೆಲ್ಲ ಸಖತ್ ರೊಮ್ಯಾಂಟಿಕ್ ಆಗಿರೋ ಈ ಜೋಡಿಗೆ ಮನೆಮಂದಿ ಮೆಚ್ಚುಗೆಯಲ್ಲೂ ಮತ್ಸರದಲ್ಲೂ ಕಾಲೆಳೆಯೋದು, ಹಿಂದಿನಿಂದ ಮಾತಾಡೋದು, ಟಾಂಗ್ ಕೊಡೋದು ಹೆಚ್ಚಾಗುತ್ತಲೇ ಇದೆ. 
 


ಬಹುಶಃ ಬಿಗ್‌ಬಾಸ್ ಮನೆಯಲ್ಲಿ ಇಷ್ಟಪಟ್ಟು ಹೊರಬಂದ ಮೇಲೆ ಮದುವೆಯಾದ ಮೊದಲ ಜೋಡಿ ಚಂದನ್-ನಿವೇದಿತಾ ಆದರೆ ಎರಡನೇ ಜೋಡಿ ಅರವಿಂದ್-ದಿವ್ಯಾ ಆಗ್ತಾರೆ ಅನ್ನೋದು ಸದ್ಯಕ್ಕೆ ಕೇಳಿಬರುತ್ತಿರೋ ಗುಲ್ಲು. 

'ಬಿಗ್‌ಬಾಸ್ ಮನೆಗೆ ಹೋಗಿದ್ದೇ ಹಣಕ್ಕಾಗಿ': 49 ದಿನದ ಗಳಿಕೆ ಕೋಟಿಗಳಲ್ಲಿ ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty
ಕರ್ಣ ಸೀರಿಯಲ್‌ನಿಂದ ಹೊರ ಬಂದ ಟಿಎಸ್ ನಾಗಾಭರಣ; ಹೊಸ ವಿಲನ್ ಆಗಿ ಸ್ಟಾರ್ ನಟನ ಬಿಗ್ ಎಂಟ್ರಿ