
ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಶುರುವಾಗಿದೆ. ಟಾಪ್ 5 ಸ್ಥಾನದಲ್ಲಿ ಪ್ರಶಾಂತ್ ಸಂಬರಗಿ, ಅರವಿಂದ್, ವೈಷ್ಣವಿ, ದಿವ್ಯಾ ಉರುಡುಗ ಹಾಗೂ ಮಂಜು ಪಾವಗಡ ಇದ್ದಾರೆ. ಶನಿವಾರ ನಡೆದ ಎಲಿಮಿನೇಷನ್‌ನಲ್ಲಿ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ.
5ನೇ ಸ್ಥಾನ ಪಡೆದುಕೊಂಡ ಪ್ರಶಾಂತ್ ಸಂಬರಗಿ ಹೊರ ಬಂದಿದ್ದಾರೆ. 4ನೇ ಸ್ಥಾನ ಪಡೆದುಕೊಂಡ ಅಗ್ನಿಸಾಕ್ಷಿ ವೈಷ್ಣವಿ ಎಲಿಮಿನೇಟ್ ಆಗಿದ್ದಾರೆ. ಇಂದು ಯಾರು ಎಲಿಮಿನೇಟ್ ಆಗಲಿದ್ದಾರೆ, ಕಿಚ್ಚ ಸುದೀಪ್ ಎಡ ಮತ್ತ ಬಲಗಡೆ ಯಾರಿಬ್ಬರು ಇರಲಿದ್ದಾರೆ ಕಾದು ನೋಡಬೇಕಿದೆ. ಆದರೆ ಈ ಸೀಸನ್‌ನಲ್ಲಿ ವಿಜೇತರು ಪಡೆಯುತ್ತಿರುವ ಮೊತ್ತದಲ್ಲಿ ಬದಲಾವಣೆಯಿದೆ.
ಮೊದಲ ಸ್ಥಾನ ಪಡೆಯುವ ಸ್ಪರ್ಧಿ 53 ಲಕ್ಷ ರೂ, ಎರಡನೇ ಸ್ಥಾನಕ್ಕೆ 11 ಲಕ್ಷ ರೂ, ಮೂರನೇ ಸ್ಥಾನಕ್ಕೆ 6 ಲಕ್ಷ ರೂ, ನಾಲ್ಕನೇ ಸ್ಥಾನಕ್ಕೆ 3.5 ಲಕ್ಷ ರೂ ಹಾಗೂ ಐದನೇ ಸ್ಥಾನಕ್ಕೆ 2.5 ಲಕ್ಷ ರೂ. ಇದರ ಜೊತೆ ಈ ವಾರ ಎರಡು ಲಕ್ಷ ಸಂಪಾದಿಸಲು ಸ್ಪೆಷಲ್ ಟಾಸ್ಕ್ ನೀಡಲಾಗಿತ್ತು. ಈ ವಾರದ ಟಾಸ್ಕ್‌ನಲ್ಲಿ ಅರವಿಂದ ವಿಜೇತರಾಗಿ ಎರಡು ಲಕ್ಷ ಪಡೆದುಕೊಂಡಿದ್ದಾರೆ.
'ನಾನು 10-15 ವರ್ಷಗಳಿಂದ ಒಂದು ರೂಪಾಯಿ ಕೂಡ ಮನೆಗೆ ನೀಡಿಲ್ಲ. ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ಆ ಹಣದಿಂದ ಅವರನ್ನು ಇನ್ಮೇಲೆ ಚೆನ್ನಾಗಿ ನೋಡಿಕೊಳ್ಳಬೇಕು' ಎಂದು ಮಂಜು ಪಾವಗಡ ಹೇಳಿದ್ದಾರೆ. 'ನಾನು ಬ್ಯುಸಿಸೆನ್ ಶುರು ಮಾಡಬೇಕು ಅಂತಿದ್ದೀನಿ. ನನ್ನ ಅಪ್ಪಾಜಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ' ಎಂದು ದಿವ್ಯಾ ಹೇಳಿದ್ದಾರೆ. 'ನಾನಿಲ್ಲಿ ಗೆದ್ದೆ ಇಡೀ ಕರ್ನಾಟಕವೇ ಮೆಚ್ಚಿದೆ ಅಂತ ಅರ್ಥ. ನನ್ನ ಸ್ಪೋರ್ಟ್ಸ್‌ಗೆ ಇದರಿಂದ ಜಾಸ್ತಿ ಸ್ಕೋಪ್ ಸಿಗುತ್ತದೆ' ಎಂದು ಅರವಿಂದ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.