
ಬೆಂಗಳೂರು(ಆ. 07) ಬಿಗ್ ಬಾಸ್ ಮನೆ ಫಿನಾಲೆ ಹಂತದಲ್ಲಿ ಇದೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದಾರೆ. ಐದನೆಯವರಾಗಿ ಪ್ರಶಾಂತ್ ಮನೆಯಿಂದ ಹೊರಗೆ ಬಂದಿದ್ದಾರೆ.
ಫಿನಾಲೆಯಲ್ಲಿ ಅರವಿಂದ್ ಕೆಪಿ, ಮಂಜು ಪಾವಗಡ ಮತ್ತು ದಿವ್ಯಾ ಯು. ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅನೇಕ ವಿಚಾರಗಳನ್ನು ಸುದೀಪ್ ಹೊರಗೆ ತೆಗೆದರು. ಕೈಯಲ್ಲಿ ಟ್ರೋಫಿ ಒಂದು ಇಲ್ಲ..ಫಿನಾಲೆಗೆ ತಲುಪಿದ ಎಲ್ಲರೂ ವಿನ್ನರ್ ಗಳೆ ಎಂದು ಪ್ರಶಾಂತ್ ಬಣ್ಣಿಸಿದರು.
ಅರೆ ಬರೆ ಬಟ್ಟೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು!
ಪ್ರಶಾಂತ್ ಅಂದರೆ ಯಾರು ಎಂಬುದನ್ನು ಇಡೀ ಕರ್ನಾಟಕ್ಕೆ ಬಿಗ್ ಬಾಸ್ ಪರಿಚಯ ಮಾಡಿಕೊಟ್ಟಿತು. ನಾನು ಹೋರಾಟದಿಂಲೇ ಬಂದವನು ಅದನ್ನು ಮುಂದುವರಿಸಿಕೊಂಡೇ ಹೋಗುತ್ತೇನೆ ಎಂದು ಪ್ರಶಾಂತ್ ತಿಳಿಸಿದರು.
ಮನೆಯ ಒಳಗೆ ಇದ್ದವರು ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಬಂದವರ ಕುರಿತು ಪ್ರ ಬರೆದರು. ವೈಷ್ಣವಿ ಗೌಡ ರಘು ಅವರಿಗೆ ಬರೆದ ಪತ್ರ ನಗೆ ಉಕ್ಕಿಸಿತು. ಇನ್ನೊಂದು ಕಡೆ ನಿಧಿ ಸುಬ್ಬಯ್ಯಗೆ ಪತ್ರ ಬರೆದ ಅರವಿಂದ್ ಹಳೆಯ ಘಟನೆಗೆ ಕ್ಷಮೆ ಕೇಳಿದರು. ಮಂಜು ತುಂಬಾ ಆಲಸಿ ಎಂದು ಅರವಿಂದ್ ಹೇಳಿದರು.
ಬಿಗ್ ಬಾಸ್ ಮನೆಯಲ್ಲಿ ಕೊರೋನಾ ಕಾರಣಕ್ಕೆ ಶೂಟಿಂಗ್ ಬಂದ್ ಮಾಡಲಾಗಿತ್ತು. ಎರಡನೇ ಇನಿಂಗ್ಸ್ ಮೂಲಕ ಕನ್ನಡದ ಬಿಗ್ ಬಾಸ್ ಗೆ ತೆರ ಬೀಳುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.