'ಭಾನುವಾರದ ಕಥೆ ಕಿಚ್ಚನ ಜೊತೆ' ಯಲ್ಲಿ ದೀಪಿಕಾ ದಾಸ್ ಮಾತನಾಡುವ ರೀತಿಯ ಬಗ್ಗೆ ಚರ್ಚಿಸುವಾಗ ವಾಸುಕಿ ವೈಭವ್ ಅದನ್ನು ಇಮಿಟೇಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಬೇಕಾದ ಮೊದಲ ಅರ್ಹತೆಯೇ ಜನರೊಂದಿಗೆ ಮಿಂಗಲ್ ಆಗುವುದು ಹಾಗೂ ಮನೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು.
ವಾರಕ್ಕೊಮ್ಮೆ ಸ್ಪರ್ಧಿಗಳನ್ನು ಭೇಟಿ ಮಾಡಿ ನಡೆದ ಘಟನೆಗಳ ಬಗ್ಗೆ ಚರ್ಚೆ ಮಾಡುವಾಗ ಕಿಚ್ಚ ಸುದೀಪ್, Yes or No ಬೋರ್ಡ್ ಮಾಡುತ್ತಾರೆ. ಈ ವೇಳೆ ಸುದೀಪ್ ಮನೆ ಮಂದಿಗೆಲ್ಲಾ 'ದೀಪಿಕಾ ದಾಸ್ ಯಾರೊಂದಿಗೂ ಹೆಚ್ಚಾಗಿ ಮಾತನಾಡುವುದಿಲ್ಲ' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಎಲ್ಲ ಸ್ಪರ್ಧಿಗಳು Yes ಎಂಬ ಬೋರ್ಡ್ ತೋರಿಸುತ್ತಾರೆ. ಯಾಕೀ ಉತ್ತರ ಕೊಟ್ರೀ ಎಂದು ವಾಸುಕಿ ವೈಭವ್ ರನ್ನು ಕಿಚ್ಚ ಕೇಳಿದ್ದಕ್ಕೆ 'ಕಣ್ಣಲ್ಲೇ ಮಾತನಾಡುತ್ತಾರೆ' ಎಂದು ಇಮಿಟೇಟ್ ಮಾಡಿ ತೋರಿಸಿದ್ದರು. ವಾಸುಕಿಯ ಇನೋಸೆನ್ಸ್ ಮೆಚ್ಚಿದ ನೆಟ್ಟಿಗರು ಅವರು ಹೇಳಿದ ರೀತಿಗೆ ಫಿದಾ ಆಗಿದ್ದಾರೆ.
'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?
ಮನೆಯಲ್ಲಿ ಕಪ್ಪು ಚುಕ್ಕಿ ಆಟದ ಟಾಸ್ಕ್ ನಡೆಯುತ್ತಿದ್ದು ಆ ಸಂದರ್ಭಕ್ಕೆ ವಾಸುಕಿ ಹಾಡೊಂದನ್ನು ಬರೆದರು. ಅದಕ್ಕೆ ಚಂದನ್ ಧ್ವನಿ ನೀಡಿ ಸೂಪರ್ ಹಿಟ್ ಸಾಂಗ್ ಮಾಡಿದ್ದಾರೆ. ದೀಪಿಕಾ ದಾಸ್ ಮನೆಯಲ್ಲಿ ತಮ್ಮ ಕೆಲಸ ಮಾಡಿಕೊಂಡು ಬಿಡುವಿನ ಸಮಯದಲ್ಲಿ ಜನರೊಂದಿಗೆ ಮಾತನಾಡುತ್ತಾರೆ ಅದಕ್ಕೆ ಮನೆಯ ಇನ್ನಿತರ ಸ್ಪರ್ಧಿಗಳು ದೀಪಿಕಾ 'ಸೊಂಬೇರಿ' ಎಂಬ ಪಟ್ಟ ನೀಡುತ್ತಾರೆ.
ಒಂದು ಕಾಲದಲ್ಲಿ BB ಮನೆ ರೂಲ್ ಮಾಡಿದ ಲಾಸ್ಯ ನಾಗ್ ಈಗೇನು ಮಾಡ್ತಿದ್ದಾರೆ ಗೊತ್ತಾ?
ಮೂರನೇ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವುದಕ್ಕೆ ವಾಸುಕಿ ವೈಭವ್ ರನ್ನು ಚೈತ್ರಾ ವಾಸುದೇವನ್ ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: