
ಬಿಗ್ ಬಾಸ್ ಮನೆಯಲ್ಲಿ ಯಾರದ್ದೇ ಬರ್ತಡೇ ಆದರೂ ಸ್ಪೆಷಲ್ ಆಗಿ ವಿಶ್ ಮಾಡಲಾಗುತ್ತದೆ. ಬಿಗ್ ಬಾಸ್ ಮನೆಯ ಕ್ರಶ್ ವಾಸುಕಿ ವೈಭವ್ ಬರ್ತಡೇ ಭಾರೀ ಗಮನ ಸೆಳೆದಿದೆ.
ವಾಸುಕಿ ವೈಭವ್ ಅವರ 'ಮನ್ಸಿಂದ ಯಾರೂ ಕೆಟ್ಟೋರಲ್ಲ.....' ಎಂಬ ಹಾಡು ಸಿಕ್ಕಾಪಟ್ಟೆ ಫೇಮಸ್ ಆಯ್ತು. ಎಲ್ಲಾ ಕಡೆ ಈ ಹಾಡು ಟ್ರೆಂಡ್ ಆಯ್ತು. ವಾಸುಕಿ ಬರ್ತಡೇಗೆ ಕಿಚ್ಚ ಸುದೀಪ್ ಈ ಹಾಡನ್ನು ಹೇಳಿ ಸರ್ಪ್ರೈಸ್ ಕೊಟ್ಟರು.
ಕಣ್ ಸನ್ನೆ ತಂದ ಪಜೀತಿ, ಹುಲಿಗಳು ಈ ಬಾರಿ ನಾಮಿನೇಶನ್ ಬಲೆಗೆ!
ಕಿಚ್ಚ ಸುದೀಪ್ ವಾಯ್ಸಲ್ಲಿ ಈ ಹಾಡನ್ನು ಕೇಳಿ ವಾಸುಕಿ ಭಾವುಕರಾದರು. ವಾಸುಕಿಯ ಈ ಬರ್ತಡೇಯನ್ನು ಸುದೀಪ್ ಇನ್ನಷ್ಟು ಚಂದಗಾಣಿಸಿದರು. ಮೈ ಆಟೋಗ್ರಾಫ್ ಸಿನಿಮಾದ 'ಅರಳುವ ಹೂವುಗಳೇ..' ಮುಸ್ಸಂಜೆ ಮಾತು ಸಿನಿಮಾದ 'ಏನಾಗಲಿ ಮುಂದೆ ಸಾಗು ನೀ' ಸಾಂಗ್ ನನಗೆ ಸಿಕ್ಕಾಪಟ್ಟೆ ಇಷ್ಟ. ಅದೇ ರೀತಿ 'ಮನ್ಸಿಂದ ಯಾರೂ..' ಹಾಡು ಇಷ್ಟವಾಯ್ತು. ಹಾಗಾಗಿ ಹಾಡಿದೆ ಎಂದು 'ವಾರದ ಜೊತೆ ಕಿಚ್ಚನ ಜೊತೆ' ಯಲ್ಲಿ ಹೇಳಿದರು.
ಸುದೀಪ್ ವಾಯ್ಸಲ್ಲಿ ಈ ಹಾಡು ಕೇಳುವುದಕ್ಕೆ ಬಹಳ ಚೆನ್ನಾಗಿದೆ. ಸಾಹಿತ್ಯ ಕೂಡಾ ಅರ್ಥಗರ್ಭಿತವಾಗಿದ್ದು ಎಲ್ಲಾ ಕಡೆ ಟ್ರೆಂಡ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.