ಬಿಗ್ ಬಾಸ್ ಮನೆಯಿಂದ 8ನೇ ವಾರದ ಎಲಿಮಿನೇಶನ್/ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಕ್ಷಾ ಮನೆಯಿಂದ ಹೊರಕ್ಕೆ/ ಎರಡೇ ವಾರಕ್ಕೆ ಪ್ರಯಾಣ ಮುಗಿಸಿದ ರಕ್ಷಾ
ಬಿಗ್ ಬಾಸ್ ಮನೆಯಿಂದ ರಕ್ಷಾ ಸೋಮಶೇಖರ್ ಹೊರ ಬಂದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಮೂಲಕ ಎಂಟ್ರಿ ಪಡೆದುಕೊಂಡಿದ್ದ ರಕ್ಷಾ ಪ್ರಯಾಣ ಕೊನೆಯಾಗಿದೆ. ಮನೆಯಲ್ಲಿ 13 ಮಂದಿಯಿದ್ದು, 8ನೇ ವಾರದಲ್ಲಿ 12 ಮಂದಿ ನಾಮಿನೇಟ್ ಆಗಿದ್ದರು.
ಸುಪರ್ ಸಂಡೇ ಸುದೀಪ ದಲ್ಲಿ ಅನೇಕ ವಿಚಾರಗಳು ಹೊರಬಂದವು. ಶೈನ್ ಶೆಟ್ಟಿ ಕಾರಣಕ್ಕೆ ದೀಪಿಕಾ ಅವರ ನಿದ್ದೆ ಭಂಗವಾಗುತ್ತಿದೆ ಎಂಬ ಯೆಸ್ ಆರ್ ನೋ ಕ್ವಶ್ಚನ್ ಸಖತ್ ಮಜಾ ಕೊಡ್ತು.
ಮನೆಯ ಮೂಲ ನಿಯಮಗಳನ್ನು ಸ್ಪರ್ಧಿಗಳು ಮುರಿದಿದ್ದಾರೆ ಎಂಬುದನ್ನು ಸುದೀಪ್ ವಿವರಿಸಿದರು. ಕಣ್ಣು ಸನ್ನೆ, ಕೈ ಸನ್ನೆ ಮೂಲಕ ಕ್ಯಾಮರಾಕ್ಕೆ ಗೊತ್ತಾಗದಂತೆ ಕಮ್ಯೂನಿಕೇಶನ್ ಮಾಡಲಾಗುತ್ತಿದೆ ಎಂದು ಸುದೀಪ್ ಎಳೆಎಳೆಯಾಗಿ ಬಿಚ್ಚಿಟ್ಟರು.
ಬಾತ್ ಟಬ್ ಫೋಟೋ ಹಾಕಿ ಬಿಸಿ ಹೆಚ್ಚಿಸಿದ ಬಿಗ್ ಬಾಸ್ ಬ್ಯೂಟಿ
ಮನೆಗೆ ಪ್ರವೇಶ ಪಡೆದ 12 ದಿನದಲ್ಲಿಯೇ ರಕ್ಷಾ ಮನೆಯಿಂದ ಹೊರಗೆ ಬಂದರು. ಅಲ್ಲಿಗೆ 8 ನೇ ವಾರದ ಎಲಿಮಿನೇಶನ್ ಪ್ರಕ್ರಿಯೆ ಮುಕ್ತಾಯ ಆಯಿತು.
ಕೊನೆಯ ಸುತ್ತಿನಲ್ಲಿ ಚೈತ್ರಾ ಕೊಟ್ಟೂರು ಮತ್ತು ರಕ್ಷಾ ಉಳಿದುಕೊಂಡಿದ್ದರು. ಮನೆಯಿಂದ ಹೊರಬರುವಾಗ ರಕ್ಷಾ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿ ಹೊರಬಂದರು.
ಮನೆಯಿಂದ ಹೊರಬರುವಾಗಲೂ ಕಿಶನ್ ರಕ್ಷಾಅವರನ್ನು ಎರಡೆರಡು ಸಾರಿ ಅಪ್ಪಿಕೊಂಡಿದ್ದು ಅಲ್ಲದೇ ಸೆಲ್ಫಿ ವೇಳೆ ನೀಡಿದ ಕಿಸ್ ಒಂದಿಷ್ಟು ಚರ್ಚೆಗೆ ಕಾರಣವಾಯಿತು.