ಇದು ಟಾಸ್ಕಾ? ರಿವೆಂಜಾ? ಗೊತ್ತಿಲ್ಲ. ಆದರೆ ಸ್ಪರ್ಧಿಗಳ ಮನಸ್ಸಿನಲ್ಲಿರುವ ನೋವನ್ನು ಹೊರ ಹಾಕಲು ಬಿಗ್‌ಬಾಸ್ ಮಾಡಿರುವ ಪ್ಲ್ಯಾನ್ ಸೂಪರ್. ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಅವತ್ತು ಅಗಿದ್ದೇನು?
ದಿನೆ ದಿನೇ ವಿಭಿನ್ನ ಚಟುವಟಿಕೆಗಳ ಮೂಲಕ ಪ್ರೇಕ್ಷಕರನ್ನು ಮನೋರಂಜಿಸುತ್ತಿರುವ ಬಿಗ್‌ಬಾಸ್ ಸಿಕ್ರೇಟ್ ಹಾರಿಬಲ್ ಟಾಸ್ಕ್ ಕೊಡುವುದರಲ್ಲಿ ಎತ್ತಿದ ಕೈ. ಯಾರಿಗೆ ಯಾವಾಗ ಸಿಕ್ರೇಟ್ ಟಾಸ್ಕ್ ಕೊಡುತ್ತಾರೆ? ಯಾರು ಹೇಗೆ ವರ್ತಿಸುತ್ತಾರೆಂದು ಕಂಡು ಹಿಡಿಯುವಷ್ಟರಲ್ಲಿ ಟಾಸ್ಕೇ ಮುಗಿದು ಹೋಗಿರುತ್ತದೆ.
ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್ ಕಲಾಕಾರ್ ಹರೀಶ್ ರಾಜ್‌ರನ್ನು ಕನ್ಫೆಷನ್ ರೂಮಿಗೆ ಕರೆದು ಸಿಕ್ರೇಟ್ ಟಾಸ್ಕ್ ನೀಡಿದ್ದರು ಬಿಗ್‌ಬಾಸ್. 'ಮನೆಯವರ ಮೇಲೆ ಪ್ರ್ಯಾಂಕ್ ಮಾಡಬೇಕು ಹಾಗೂ ಇದರಿಂದ ಮನೆಯ ವಾತಾವರಣ ಬದಲಾಗಬೇಕು' ಎಂದು ಆದೇಶಿಸಲಾಗಿತ್ತು. ಕೆಲವು ನಿಮಿಷಗಳ ಕಾಲ ಯೋಚಿಸಿದ ಹರೀಶ್, ಈ ಟಾಸ್ಕನ್ನು ಬಿಗ್‌ಬಾಸ್ ಮನೆಯ ಮಾಸ್ಟರ್ ಶೆಫ್ ಸಿತಾರಾ ಅಲಿಯಾಸ್ ಸುಜಾತಾ ಮೇಲೆ ಪ್ರಯೋಗಿಸುತ್ತಾರೆ.
ಕೆಲವು ದಿನಗಳಿಂದ ಮನೆಯವರು ಸುಜಾತ ಮಾತನಾಡುವ ಶೈಲಿ ಬಗ್ಗೆ ಮನಸ್ತಾಪ ವ್ಯಕ್ತ ಪಡಿಸುತ್ತಿದ್ದರು. ಅವರಲ್ಲಿ ಯಾವ ಬದಲಾವಣೆಯೂ ಕಾಣದ ಕಾರಣ ಹರೀಶ್ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ ಅವರೊಂದಿಗೆ ಜಗಳ ಮಾಡಲು ಆರಂಭಿಸುತ್ತಾರೆ. ಅಮೇಜಾನ್ ಪದ ಬಳಕೆ ಬಗ್ಗೆ ಎಲ್ಲರನ್ನೂ ಹಾಗೆ ಹೇಳಬೇಕು... ಹೀಗೇ ಹೇಳಬೇಕು ಎಂದು ಉಚ್ಛಾರಣೆ ಸರಿಪಡಿಸುತ್ತಿದ್ದರು ಸುಜಾತ. ಸರಿ ಇದೇ ಸಮಯವೆಂದು ಲೆಕ್ಕ ಹಾಕಿದ ಹರೀಶ್, ಕಾಲ್ಕೆರೆಡು ಜಗಳಕ್ಕೆ ನಿಲ್ಲುತ್ತಾರೆ. ಸುಜಾತಾ-ಹರೀಶ್ ಜಗಳದಲ್ಲಿ ಬಿಗ್‌ಬಾಸ್ ಇತರೆ ಸ್ಪರ್ಧಿಗಳೂ ಪಾಲ್ಗೊಳ್ಳುತ್ತಾರೆ. ಆದರೆ, ಯಾರೂ ಮಾತನಾಡುವುದಿಲ್ಲ. ಎಲ್ಲರೂ ಈ ಇಬ್ಬರ ಜಗಳ ನೋಡುತ್ತಾ ನಿಲ್ಲುತ್ತಾರೆ. ದೊಡ್ಡ ಮಟ್ಟದಲ್ಲಾದ ಜಗಳ ಇಡೀ ಮನೆಯ ವಾರಾವರಣವನ್ನೇ ಬದಲಾಯಿಸುತ್ತದೆ. ಆ ಮೂಲಕ ಹರೀಶ್‌ಗೆ ಬಿಗ್‌ಬಾಸ್ ನೀಡಿದ್ದ ಸೀಕ್ರೆಟ್ ಟಾಸ್ಕ್ ಯಶಸ್ವಿಯಾಗಿತ್ತು. ಸುಜಾತ ಮಾಡುತ್ತಿದ್ದ ಕಿರಿಕಿರಿಗೆ ಬಿಗ್ ಬ್ರೇಕ್ ಹಾಕುವಲ್ಲಿ ಹರೀಶ್ ಅವರಿಗೆ ನೀಡಿದ್ದ ಈ ಟಾಸ್ಕ್ ಯಶಸ್ವಿಯಾಯಿತು..
BB7: ಕಣ್ಣಲ್ಲೇ ಬುಸುಗುಡುವ ನಾಗಿಣಿ ಬಗ್ಗೆ ವಾಸುಕಿ ಹೇಳಿದ್ದೇನು?
ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕ ಪ್ರತೀ ಸ್ಪರ್ಧಿಯ ಮೇಲೂ ವಿಭಿನ್ನ ಅಬಿಪ್ರಾಯಗಳನ್ನು ಹೊಂದಿರುತ್ತಾನೆ. ಕೆಲವು ವಿಚಾರಗಳು ಟ್ರೋಲ್ ಅಗುತ್ತವೆ. ಕೆಲವು ಗಾಳಿಯಲ್ಲಿ ಹಾರಿ ಹೋಗುತ್ತವೆ. ಆದರೆ ಟಾಸ್ಕ್ ಮೂಲಕ ಹರೀಶ್ ಮನೆಯವರ ಪರ ಮಾತನಾಡಿ, ಕೊಂಚ ಬದಲಾವಣೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತುಗಳೂ ಕೇಳಿ ಬರುತ್ತಿವೆ.
'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?
ಖ್ಯಾತ ಪತ್ರಕರ್ತ ರವಿ ಬೆಳಗೆರೆಯೂ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ತಮ್ಮ ಅನುಭವ, ಅಭಿಪ್ರಾಯಗಳನ್ನು ಸ್ವಾರಸ್ಯಕರವಾಗಿ ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಲೈವ್ಲಿಯಾಗಿರುವಂತೆ ಮಾಡುತ್ತಿದ್ದರು. ಅವರು ಮನೆಯಿಂದ ಹೊರ ಬಂದ ನಂತರ ಬಿಗ್‌ಬಾಸ್ ಮನೆಯಲ್ಲಿ ಅಂಥ ವಿಶೇಷ ಘಟನೆಗಳೇನೂ ನಡೆಯುತ್ತಿಲ್ಲ.
ನವೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: