BB7: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ನಾಗಿಣಿ!

By Web Desk  |  First Published Nov 10, 2019, 1:00 PM IST

ನೋಡೋಕೆ ಸೈಲೆಂಟ್ ಆದ್ರೆ ಟಾಸ್ಕ್‌ ಬಂದ್ರೆ ವೈಲೆಂಟ್. ಟೀಮ್‌ನ ಲೀಡ್‌ ಮಾಡುತ್ತಾ ಹಿಂದೆ ಉಳಿದ ತಂಡವನ್ನು ಮುಂದೆ ತರಲು ಅತಿ ಹೆಚ್ಚು ಪಾಯಿಂಟ್ಸ್‌ ಗಿಟ್ಟಿಸಿಕೊಂಡ ದೀಪಿಕಾ ದಾಸ್‌ಗೆ ಸಿಗ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ.


 

ಏನಪ್ಪಾ ನಾಗಿಣಿ, ಯಾರೊಂದಿಗೂ ಮಾತನಾಡುವುದಿಲ್ಲ. ಗಾಸಿಪ್ ಮಾಡೋಲ್ಲ, ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಹಿಂಗೆ ಮಾಡಿದ್ರೆ ಮನೆಯಿಂದ ಹೊರಗೆ ಹೋಗ್ತಾರೆ ಅಂತ ಮಾತನಾಡಿಕೊಳ್ಳುತ್ತಿದ್ದ ವೀಕ್ಷಕರಿಗೆ ತಮ್ಮ ಶಕ್ತಿ ತೋರಿಸಿ ಕಿಚ್ಚನ ಸುದೀಪ್‌ನಿಂದ ಭೇಷ್ ಎಂದು ಹೇಳಿಸಿಕೊಂಡಿದ್ದಾರೆ.

Tap to resize

Latest Videos

undefined

 

ಈ ವಾರದ ಸೂಪರ್ ಲಕ್ಷುರಿ ಬಜೆಟ್‌ ಟಾಸ್ಕ್‌ನಲ್ಲಿ ಕ್ಯಾಪ್ಟನ್ ಆಗಿ 'ಸಪ್ತಾಶ್ವ' ತಂಡವನ್ನು ರಚಿಸುತ್ತಾರೆ. ಪ್ರತಿ ಟಾಸ್ಕಲ್ಲಿ ಪ್ರಾಮಾಣಿಕವಾಗಿ ಚಟುವಟಿಕೆಗಳಲ್ಲಿ ಭಾಗವಹಿಸಿ ಅತೀ ಹೆಚ್ಚು ಅಂಕ ಗಿಟ್ಟಿಸಿ ಬೆಸ್ಟ್‌ ಕ್ಯಾಪ್ಟನ್‌ ಎಂದು ಕರೆಸಿಕೊಂಡಿದ್ದಾರೆ ದೀಪಿಕಾ.

BB7: ಕಿರಿಕ್ ಮಾಡಿದವರಿಗೆ ಸಿಗ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ!

 

ತಾನಾಯ್ತು, ತನ್ನ ಕೆಲಸವಾಯ್ತು, ಎಂದು ಮನೆಯಲ್ಲಿ ಓಡಾಡಿಕೊಂಡಿದ್ದ ದೀಪಿಕಾಳಿಗೆ ಈ ವಾರ ದೊಡ್ಡ ಜವಾಬ್ದಾರಿ ಸಿಕ್ಕಿತ್ತು. ಈ ಕಾರಣಕ್ಕೆ ಮನೆಯ ಎಲ್ಲಾ ಕ್ಯಾಮೆರಾಗಳು ಆಕೆಯ ಮೇಲೆ ಕಣ್ಣಿಟ್ಟಿತ್ತು. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ವಾರದ ಕೊನೆಯಲ್ಲಿ ಅದ್ಭುತವಾಗಿ ಸ್ಪರ್ಧಿಸಿದ ವ್ಯಕ್ತಿಗೆ ಕೈ ತಟ್ಟುತ್ತಾರೆ. ಈ ವಾರ ಅದನ್ನು ನಾಗಿಣಿ ಅಲಿಯಾಸ್ ದೀಪಿಕಾ ದಾಸ್ ಗಿಟ್ಟಿಸಿಕೊಂಡಿದ್ದಾರೆ.

'ಮೊದಲು ಸಪ್ತಾಶ್ವ ತಂಡವು ಸ್ಕೋರ್‌ ಲೈನ್‌ನಲ್ಲಿ ತುಂಬಾ ಹಿಂದೆ ಇತ್ತು. ಆದರೆ ಕೊನೆಯವರೆಗೂ ಹೋರಾಡಿದ ಕ್ಯಾಪ್ಟನ್ ದೀಪಿಕಾ ದಾಸ್‌ ವೆಲ್ ಡನ್‌' ಎಂದು ಹೇಳಿ ಚಪ್ಪಾಳೆ ತಟ್ಟಿದ್ದಾರೆ.

ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!