
ಬಿಗ್ ಬಾಸ್ ಮನೆಯಲ್ಲಿ ಶನಿವಾರ ವಾರದ ಕತೆ ಕಿಚ್ಚನ ಕತೆ. ರಣಾಂಗಣ ಟಾಸ್ಕ್ ನ ಇಂಚಿಂಚನ್ನು ತರೆದಿರಿಸಿದ ಕಿಚ್ಚ ಸುದೀಪ್ ಎಲ್ಲರನ್ನು ಜಾಲಾಡಿದರು. ರಣಾಂಗಣ ಟಾಸ್ಕ್ ನಲ್ಲಿ ಜೈಜಗದೀಶ್ ತೆಂಗಿನ ಕಾಯಿ ಹೊಡೆದ ವಿಚಾರವನ್ನು ಸುದೀಪ್ ಎತ್ತುಕೊಂಡರು. ಅದು ನನ್ನಿಂದ ಆದ ತಪ್ಪು ಎಂದು ಜೈಜಗದೀಶ್ ಒಪ್ಪುಇಕೊಂಡರು. ಎಲ್ಲರೂ ಅತ್ಯಂತ ಚೆನ್ನಾಗಿ ಆಡಿದಿರಿ ಎಂಬ ಮೆಚ್ಚುಗೆಯನ್ನು ನೀಡಿದರು.
ಆದರೆ ಎಲ್ಲಕ್ಕಿಂತ ವಿಶೇಷ ಗಮನ ಸೆಳೆದಿದ್ದು ಅಡ್ಡ ಹೆಸರು. ಮನೆ ಮಂದಿಗೆಲ್ಲ ವಾರ ಇಡೀ ಅಡ್ಡ ಹೆಸರು ಇಡಲಾಯಿತು. ಈಗ ಎರಡು ತಂಡದ ಸದಸ್ಯರು ಸೇರಿ ಹರೀಶ್ ರಾಜ್ ಗೆ ಹೆಸರಿಡಿ ಎಂದಾಗ ಮನೆಯವರೆಲ್ಲ ಸೇರಿ ಸ್ತ್ರೀಲೋಲ ಎಂಬ ಬಿರುದು ನೀಡಿದರು. ಹರೀಶ್ ರಾಜ್ ಹೆಣ್ಣು ಮಕ್ಕಳನ್ನು ಸದಾ ಇಂಪ್ರೆಸ್ ಮಾಡಲು ಪ್ರಯತ್ನ ಮಾಡುತ್ತಾರೆ ಎಂಬ ಸಂಗತಿ ಹೆಣ್ಣು ಮಕ್ಕಳಿಂದಲೇ ಬಯಲಾಯಿತು.
ಎಲ್ಲರೆದುರೆ ಮಹಿಳಾ ಮಣಿಗಳ ಲಿಪ್ ಲಾಕ್, ದಂಗಾದ ಮನೆ
ಕುರಿ ಪ್ರತಾಪ್ ಗೆ ವಾರದ ಟಾಸ್ಕೊಂದನ್ನು ನೀಡಿದ ಸುದೀಪ್, ಕಳಪೆ ಬೋರ್ಡಿನ ಕುರಿತಾಗಿ, ಹರೀಶ್ ರಾಜ್ ನಾಯಕತ್ವ ನಿಒರ್ವಹಿಸಿದ ಕುರಿತಾಗಿಯೂ ಮಾತನಾಡಿದರು. ಕಳಪೆ ಬೋರ್ಡ್ ನ್ನು ಕಳಪೆಯವರೇ ಹಾಕೊಕೊಳ್ಳಬೇಕು. ಅದನ್ನು ಬಿಟ್ಟು ಕಳಪೆ ಬೋರ್ಡ್ ನ್ನು ರಕ್ಷಾ ಕವಚವಾಗಿ ಬಳಸುವುದು ತಪ್ಪು ಎಂದು ತಿಳಿಸಿದರು.
ವಾರದ ಚಪ್ಪಾಳೆಯನ್ನು ಸಪ್ತಾಶ್ವ ತಂಡವನ್ನು ಮುನ್ನಡೆಸಿದ ದೀಪಿಕಾ ದಾಸ್ ಅವರಿಗೆ ನೀಡಿದರು. ನಾಮಿನೇಶನ್ ವಿಚಾರವನ್ನು ಇಟ್ಟುಕೊಂಡು ಮಾತನಾಡಿದ ಸುದೀಪ್ ಮತ್ತೆ ಕುತೂಹಲ ಕಾಯ್ದುಕೊಂಡರು.
ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದ ದೀಪಿಕಾ ದಾಸ್ ಮೊದಲನೆಯವರಾಗಿ ಸೇಫ್ ಆದರು. ಇದಾದ ನಂತರ ಕಿರಿಕ್ ಪಾರ್ಟಿ ಚಂದನ್ ಆಚಾರ್ ಸಹ ಸೇಫ್ ಆದರು. ಮೂರನೇಯವರಾಗಿ ಭೂಮಿ ಮತ್ತು ಶೈನ್ ಸೇಫ್ ಆದರು. ಕೊನೆಯದಾಗಿ ಮತ್ತೆ ರಾಜು ತಾಳಿಕೋಟೆ, ಚೈತ್ರಾ ಕೊಟ್ಟೂರು ಮತ್ತು ಪ್ರಿಯಾಂಕಾ ಉಳಿದುಕೊಂಡರು. ಮನೆಯಿಂದ ಹೊರಗೆ ಬರುವವರು ಯಾರು ಎಂದು ಕುತೂಹಲ ಇಟ್ಟುಕೊಂಡು ಸುದೀಪ್ ವಾರದ ಕತೆಗೆ ತೆರೆ ಎಳೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.