ಕಿಚ್ಚನ ಮೆಚ್ಚುಗೆ ಗಿಟ್ಟಿಸಿಕೊಂಡ ರಾಯಲ್ ಶೆಟ್ಟಿ!

By Web Desk  |  First Published Oct 27, 2019, 2:42 PM IST

ಬಿಗ್ ಬಾಸ್ 7 ನಲ್ಲಿ ಪ್ರತಿವಾರವೂ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಮನೆಯ ಒಬ್ಬ ಸ್ಪರ್ಧಿಗೆ ಸೇರುತ್ತದೆ. ಈ ವಾರ ಅದನ್ನು ಭೂಮಿ ಶೆಟ್ಟಿ ಗಿಟ್ಟಿಸಿಕೊಂಡಿದ್ದಾರೆ.


 

ದಿನೇದಿನೇ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ ಬಿಗ್ ಬಾಸ್-7. ಮನೆಯಲ್ಲಿ ನಡೆಯುವ ಚಟುವಟಿಕೆಗಳು ಗಮನ ಸೆಳೆಯುತ್ತಿದೆ. ವಾರಾಂತ್ಯದಂದು ಸ್ಪರ್ಧಿಗಳ ಜೊತೆ ಮಾತನಾಡಲು ಸುದೀಪ್ ವಾರವಿಡೀ ನಡೆದ ಚಟುವಟಿಕೆಗಳನ್ನು ರೆಡಿ ಮಾಡಿಕೊಂಡಿರುತ್ತಾರೆ.

Tap to resize

Latest Videos

BB7: ಕಿಚನ್‌ -ಆ್ಯಪಲ್‌-ಡಿಸೆನ್ಸಿ ನಡುವೆ ಇರೋ ಸಿಂಪಲ್ ಲೈನ್‌ ವಿವರಿಸಿದ ಕಿಚ್ಚ ಸುದೀಪ್!

 

ಪಟ-ಪಟ ಅಂತ ಮಾತನಾಡುತ್ತಾ ಸ್ಟ್ರೈಟ್ ಫಾರ್ವಡ್‌ ಆಗಿರುವ ಸ್ಪರ್ಧಿ ರಾಯಲ್ ಶೆಟ್ಟಿ ಅಲಿಯಾಸ್ ಭೂಮಿ ಶೆಟ್ಟಿ ಕಿಚ್ಚನಿಂದ 2ನೇ ವಾರದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಅಡುಗೆ ಮಾಡುವಾಗ ಕೈಗೆ ಪೆಟ್ಟು ಮಾಡಿಕೊಂಡರೂ ಕುಗ್ಗದೆ ಟಾಸ್ಕ್ ಮಾಡಿ ಮನೆಗೆ ಲಕ್ಷುರಿ ಪಾಯಿಂಟ್ ಗಿಟ್ಟಿಸಿ ಕೊಟ್ಟಿದ್ದಾರೆ.

BB7: ರವಿ ಬೆಳಗೆರೆಗೆ ಮನೆಯಿಂದ ಬರ್ತಾಯಿತ್ತು ಮುದ್ದೆ ಸಾರು ಊಟ!

ಮೊದಲನೇ ವಾರ ಮನೆಯ ಕ್ಯಾಪ್ಟನ್ ಆಗಿದ್ದ ಭೂಮಿ ಎರಡನೇ ವಾರ ಇನ್ನಿತರ ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಎಲ್ಲಾ ಚಟುವಟಿಯಲ್ಲೂ ಸಮವಾಗಿ ಭಾಗಿಯಾಗಿದ್ದಾರೆ. ಸೇಬು ಮಾರುವ ಟಾಸ್ಕಿನಲ್ಲಿ ಅದ್ಭುತವಾಗಿ ಸ್ಪರ್ಧಿಸಿ ಮನೆಗೆ ಪಾಯಿಂಟ್ಸ್‌ ಗಿಟ್ಟಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸೇಬಿನ ವಿಚಾರದಕ್ಕೆ ದೊಡ್ಡ ಜಗಳವಾಗುತ್ತಿದ್ದರು ಏನೂ ಮಾತನಾಡದೆ ಸುಮ್ಮನೆ ಕೇಳಿಸಿಕೊಂಡು ಆನಂತರ ನನ್ನದೊಂದು ಪಾಯಿಂಟ್ ಇದೆ ಎಂದು ಹೇಳಿ ನೇರ ಮಾತಿನಲ್ಲಿ ಆಗುತ್ತಿದ್ದ ಜಗಳಕ್ಕೆ ಬ್ರೇಕ್ ಹಾಕುತ್ತಾರೆ. ವಾರವಿಡೀ ಮನೆಯ ಸದಸ್ಯರ ನಡೆಯನ್ನು ಗಮನದಲ್ಲಿಟ್ಟುಕೊಂಡು ಭೂಮಿ ಸ್ಮಾರ್ಟ್ ನೆಸ್ ಗೆ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.

 

click me!