BB7: ಕಿಚನ್‌ -ಆ್ಯಪಲ್‌-ಡಿಸೆನ್ಸಿ ನಡುವೆ ಇರೋ ಸಿಂಪಲ್ ಲೈನ್‌ ವಿವರಿಸಿದ ಕಿಚ್ಚ ಸುದೀಪ್!

Published : Oct 27, 2019, 11:06 AM IST
BB7: ಕಿಚನ್‌ -ಆ್ಯಪಲ್‌-ಡಿಸೆನ್ಸಿ ನಡುವೆ ಇರೋ  ಸಿಂಪಲ್ ಲೈನ್‌ ವಿವರಿಸಿದ ಕಿಚ್ಚ ಸುದೀಪ್!

ಸಾರಾಂಶ

  'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ವಾರವಿಡೀ ನಡೆದ ಘಟನೆಗಳ ಬಗ್ಗೆ ಚರ್ಚಿಸುವ ಸುದೀಪ್ ಸೇಬಿಗಾಗಿ ನಡೆದ ಯುದ್ಧಕ್ಕೆ ಬ್ರೇಕ್ ಹಾಕಿದ್ದಾರೆ.

 

ಬಿಗ್ ಬಾಸ್‌ ಸೀಸನ್-7 ರನ್ನು ವೀಕ್ಷಕರು ಅರಿತುಕೊಳ್ಳಲು ವಿಫಲರಾಗುತ್ತಿದ್ದಾರೆ. ಒಬ್ಬೊಬ್ಬರದು ಒಂದೊಂದು ವಿಭಿನ್ನ ವ್ಯಕ್ತಿತ್ವ. ಯಾರು ಮಾತನಾಡುತ್ತಾರೆ, ಯಾರು ಕೂಗಾಡುತ್ತಾರೆ, ಯಾರು ಸೈಲೆಂಟ್‌ ಆಗಿ ದ್ವೇಷಿಸುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.

 

ಮನೆಯಲ್ಲಿ ಏನೇ ಸಮಸ್ಯೆ ಆದರೂ ಅದನ್ನು ಸರಿಯಾದ ರೀತಿಯಲ್ಲಿ ಕಿಚ್ಚ ಸುದೀಪ್ ಬಗೆಹರಿಸುತ್ತಾರೆ. ಒಂದು ಸೇಬು ಹಣ್ಣಿಗಾಗಿ ಇಡೀ ಮನೆಯಲ್ಲಿ ವಾರ್ ನಡೆದಿತ್ತು. ಚೈತ್ರಾ ಕೊಟ್ಟೂರು- ಸುಜಾತಾ ನಡುವಿನ ಬಾಲಿಶ ಜಗಳ ತೀರಾ ಅಸಹ್ಯ ಹುಟ್ಟಿಸುವಂತಿತ್ತು.

BB7: ರವಿ ಬೆಳಗೆರೆಗೆ ಮನೆಯಿಂದ ಬರ್ತಾಯಿತ್ತು ಮುದ್ದೆ ಸಾರು ಊಟ!

 

'ವಾರದ ಜೊತೆ ಕಿಚ್ಚನ ಜೊತೆ' ಗೆ ಬಂದ ಕಿಚ್ಚ ಸುದೀಪ್ ಸೇಬಿನ ಜಗಳವನ್ನು ಬಗೆಹರಿಸಿದ ರೀತಿ ತುಂಬಾ ಚೆನ್ನಾಗಿತ್ತು. ಅಷ್ಟೊಂದು ಮನಸ್ತಾಪ ಉಂಟು ಮಾಡಿದ ಸೇಬಿನ ಬಗ್ಗೆ ಕಿಚ್ಚ ಸುದೀಪ್ ಚರ್ಚಿಸುತ್ತಾರೆ. ಸುಜಾತ, ಚಂದನ್ ಹಾಗೂ ಚೈತ್ರಾ ಕೊಟ್ಟೂರ್‌ರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ.

 

ಮಾತಿಗೆ ಮುಂಚೆ ನಾನ್‌ಸೆನ್ಸ್‌-ಕಾಮನ್‌ಸೆನ್ಸ್‌ ಎಂದು ಬಳಸುವ ಸಿತಾರಾ ದೇವಿ ಅಲಿಯಸ್ ಸುಜಾತ್ ಹಾಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ. ಸೇಬನ್ನು ಚೈತ್ರಾ ಹೊರತುಪಡಿಸಿ ಇನ್ಯಾರಾದರೂ ತಿಂದರೆ ನೀವು ಹೀಗೆ ವರ್ತಿಸುತ್ತೀರಾ? ಎಂದು ಕೇಳುತ್ತಾರೆ . ತಮ್ಮ ತಪ್ಪನ್ನು ಅರಿತುಕೊಂಡ ಸುಜಾತ ತಕ್ಷಣವೇ ಸಾರಿ ಕೇಳುತ್ತಾರೆ.

ಚೈತ್ರಾ ಲಕ್ ಬದಲಾಯಿಸ್ತು ಆ್ಯಪಲ್; BB7 ಮನೆಯಲ್ಲಿ ಎಲ್ಲವೂ ತಲೆಕೆಳಗಾಯ್ತು!

 

ಚೃತ್ರಾಳಿಗೆ ನೀವು ನನ್ನೊಂದಿಗೆ ಯಾರೂ ಇಲ್ಲ. ಎಲ್ಲರೂ ನನ್ನನು ಟಾರ್ಗೇಟ್ ಮಾಡುತ್ತಿದ್ದಾರೆ ಎಂದು ಕ್ಯಾಮೆರಾ ಮುಂದೆ ಮಾತನಾಡಿರುವ ವಿಚಾರದ ಬಗ್ಗೆ ಚರ್ಚಿಸುತ್ತಾರೆ. ಸೇಬು ತಿಂದಾಗ ಅಳುತ್ತಾ ಕೂತಾಗ ಸಮಾಧಾನ ಮಾಡಲು ಮನೆಯವರೆಲ್ಲಾ ಬರುತ್ತಾರೆ. ಆಗ ನಿಮಗೆ ನಿಮ್ಮೊಂದಿಗೆ ಎಷ್ಟೊಂದು ಜನ ಇದ್ದಾರೆ ಎಂದು ಹೇಳುವ ಮೂಲಕ ಚೃತ್ರಾ ಮನಸ್ಸಿನಲ್ಲಿ ಇರುವ ನೋವಿಗೆ ಬ್ರೇಕ್ ಹಾಕುತ್ತಾರೆ.

 

ಇನ್ನು ಡಿಸೆನ್ಸಿ ಬಗ್ಗೆ ಪದೇ ಪದೆ ಹೇಳುತ್ತಾ, ಆಗಿದ ಜಗಳಕ್ಕೆ ತುಪ್ಪ ಸುರಿಯುತ್ತಿದ್ದ ಚಂದನ್ ಆಚಾರ್‌ಗೆ ಕಿಚ್ಚ ಒಂದು ಉದಾಹರಣೆ ನೀಡುವ ಮೂಲಕ ತಾವೆಷ್ಟು ಡಿಸೆಂಟ್ ಎಂದು ತೋರಿಸಿದ್ದಾರೆ. ತಪ್ಪನ್ನು ಅರಿತುಕೊಂಡ ಚಂದನ್ ತಕ್ಷಣವೇ ಕ್ಷಮೆ ಕೇಳುತ್ತಾರೆ.

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

 

ಈ ವಾರ ಮನೆಯಿಂದ ಹೊರಗೆ ಹೋಗಲು ಚೈತ್ರಾ ಕೊಟ್ಟೂರ್, ಚೈತ್ರಾ ವಾಸುದೇವನ್, ಚಂದನ್ ಆಚಾರ್, ಪ್ರಿಯಾಂಕಾ, ಸುಜಾತ ಹಾಗೂ ದೀಪಿಕಾ ದಾಸ್‌ ನಾಮಿನೇಟ್ ಆಗಿದ್ದರು. ಸೇಫ್‌ ಗೇಮ್‌ಯಿಂದ ಹಾಗೂ ವೀಕ್ಷಕರ ವೋಟ್‌ಯಿಂದ ದೀಪಿಕಾ ದಾಸ್, ಪ್ರಿಯಾಂಕಾ, ಸುಜಾತ, ಕೊಟ್ಟೂರ್ ಸೇಫ್‌ ಆಗುತ್ತಾರೆ. ಚಂದನ್ ಹಾಗೂ ಚೈತ್ರಾ ಇಬ್ಬರೇ ಉಳಿದುಕೊಂಡಿದ್ದು ಯಾರು ಹೊರಗೆ ಹೋಗುತ್ತಾರೆಂದು ಕಾದು ನೋಡಬೇಕಿದೆ.

ಮೊದಲ ಹೆಂಡತಿ ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್, 'ವಿಷ್ಣು ಮನೆಯಲ್ಲೇ ಇದ್ದೆ'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
Lakshmi Nivasa:​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ