ಎಷ್ಟು ಸುತ್ತಿನ ಕಾಲುಂಗುರ ಧರಿಸಬೇಕು?; ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕಾಲುಂಗುರದ ಮಹತ್ವ

By Vaishnavi ChandrashekarFirst Published Mar 3, 2023, 4:13 PM IST
Highlights

ಲಕ್ಷ್ಮಿ ಮದುವೆಯಲ್ಲಿ ಕಾಲುಂಗುರದ ಮಹತ್ವ ತಿಳಿಸಿದ ಭಾಗ್ಯ ಮತ್ತು ಕುಸುಮಾ. ಕಾಲುಂಗುರದಲ್ಲಿ ಎಷ್ಟು ಸುತ್ತಿದ್ದರೆ ಗಂಡ ಹೆಂಡತಿ ಸಂಬಂಧ ಗಟ್ಟಿಯಾಗಿರುತ್ತೆ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಲಕ್ಷ್ಮಿ ಮತ್ತು ವೈಷ್ಣವ್ ಹಸೆಮಣೆ ಏರುವ ಸಮಯ ಹತ್ತಿರ ಬಂದಿದೆ. ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ಕಾರ್ಯಕ್ರಮಗಳ ನಡೆಯುತ್ತಿದೆ. ಮದುವೆ ಹಿಂದಿನ ದಿನ ನಡೆಯುವ ಶಾಸ್ತ್ರದಲ್ಲಿ ಕಾಲುಂಗುರ ಶಾಸ್ತ್ರ ತುಂಬಾನೇ ಮುಖ್ಯ ಆದರೆ ಬಹುತೇಕರಿಗೆ ಯಾಕೆ ಈ ಶಾಸ್ತ್ರ ಮಾಡುತ್ತಾರೆ? ಯಾಕೆ ಸೋದರ ಮಾವನೇ ಕಾಲುಂಗುರ ತೊಡಿಸಬೇಕು ಎಂದು ತಿಳಿದಿಲ್ಲ. ಹೀಗಾಗಿ ಕಾಲುಂಗುರ ಮಹತ್ವ ಸಾರಲು ಭಾಗ್ಯ ಮತ್ತು ಕುಟುಮಾ ಒಂದಾಗಿದ್ದಾರೆ. 

'ಒಂದು ಹೆಣ್ಣಿಗೆ ಮದುವೆ ಆದ್ಮೇಲೆ ಕಾಲುಂಗುರ ಅನ್ನೋದು ಗೌರವ. ಸಂತೋಷ ಮತ್ತು ಸಮೃದ್ಧಿ ಸಂಕೇತ. ಮದುವೆ ಆದ್ಮೇಲೆ ಕತ್ತಲ್ಲಿ ತಾಳಿ ಎಷ್ಟು ಮುಖ್ಯನೋ ಕಾಲುಂಗುರ ಅಷ್ಟೇ ಮುಖ್ಯ' ಎಂದು ಭಾಗ್ಯ ಅತ್ತೆ ಹೇಳುತ್ತಾರೆ. ಮದುವೆಗೆ ಆಗಮಿಸಿದ ಪುಟ್ಟ ಹುಡುಗಿ ಇಷ್ಟೋಂದು ಸೀರಿಯಸ್ ಕಥೆಯನ್ನು ಹೇಳಿದರೆ ನನಗೆ ಅರ್ಥ ಆಗುವುದಿಲ್ಲ ಕಾಲುಂಗುರ ಯಾಕೆ ಹಾಕಬೇಕು ಅನ್ನೋದು ಹೇಳಿ ಸಾಕು ಎನ್ನುತ್ತಾಳೆ.  

Latest Videos

'ಹೆಣ್ಣುಮಕ್ಕಳು ಸಿಟ್ಟು ಬಂದಾಗ ಕಿರುಚುತ್ತಾರೆ ಅಲ್ವಾ ಕಾಲುಂಗುರ ಹಾಕಿದರೆ ಆ ಸಿಟ್ಟು ಕೋಪ ಎಲ್ಲಾ ಹದ್ದುಬಸ್ತಿಗೆ ಬರುತ್ತದೆ. ಹಾಗೆ ನನಗೆ ಮದುವೆಯಾಗಿದೆ ಎಂದು ಜವಾಬ್ದಾರಿಯನ್ನು ನೆನಪು ಮಾಡುತ್ತದೆ' ಎಂದು ಮದುವೆಗೆ ಆಗಮಿಸಿ ಅತಿಥಿಗಳಲ್ಲಿ ಒಬ್ಬರು ಹೇಳುತ್ತಾರೆ.'ಕಾಲುಂಗುರದಲ್ಲಿ ಎಷ್ಟು ಸುತ್ತು ಇರುತ್ತೋ ಗಂಡ ಹೆಂಡತಿ ನಡುವೆ ಅಷ್ಟೇ ಬೆಸುಗೆ ಇರುತ್ತೆ' ಎಂದು ಭಾಗ್ಯ ನಾಚಿಕೊಂಡು ಹೇಳುತ್ತಾಳೆ.

Toe Ring : ಪತಿಯ ಅನಾರೋಗ್ಯಕ್ಕೆ ನಿಮ್ಮ ಕಾಲುಂಗುರ ಕಾರಣವಾಗಿರಬಹುದು!

'ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಏನೂ ಗೊತ್ತಿಲ್ಲ ಸ್ಟೈಲ್ ಅಗಿ ಕಾಲಿಗೆ ಒಂದು ಉಂಗುರ ರೀತಿ ಹಾಕುತ್ತಾರೆ. ಭಾಗ್ಯ ಮದುವೆಯಲ್ಲಿ ಎರಡು ಎರಡು ಸಲ ಕಾಲುಂಗುರ ಶಾಸ್ತ್ರ ಮಾಡಿಸಲಾಗಿತ್ತು' ಎಂದು ಅತ್ತೆ ಹಾಸ್ಯ ಮಾಡಿದ್ದಾರೆ. 'ಮದುವೆ ಹಿಂದಿನ ದಿನ ಸೋದರ ಮಾವ ಕಾಲುಂಗುರ ತೊಡಿಸುತ್ತಾರೆ ಹಾಗೂ ಮದುವೆ ದಿನ ಗಂಡ ಕಾಲುಂಗುರ ಧರಿಸಿದ್ದರು ಎಂದು ಭಾಗ್ಯ ತಮ್ಮ ಮದುವೆಯನ್ನು ನೆನಪು ಮಾಡಿಕೊಂಡಿದ್ದಾಳೆ. 

ಕಾಲುಂಗುರ ಮಹತ್ವ:

ಕಾಲಿನ ಎರಡನೇ ಬೆರಳಿಗೆ ಕಾಲುಂಗುರವನ್ನು ಪ್ರತಿ ದಿನ ಧರಿಸಬೇಕು. ಅನೇಕ ಮಹಿಳೆಯರು ಎರಡು ಮೂರು ಕಾಲುಂಗುರ ಧರಿಸ್ತಾರೆ. ಅದು ಅವರಿಗೆ ಬಿಟ್ಟಿದ್ದು. ಎರಡನೇ ಬೆರಳಿಗೆ ಮಾತ್ರ ಅವಶ್ಯಕವಾಗಿ ಕಾಲುಂಗುರ ಧರಿಸಬೇಕು. ಕಾಲುಂಗುರದ ಸುತ್ತು ಕೂಡ ಮಹತ್ವ ಪಡೆಯುತ್ತದೆ. ಕಾಲುಂಗುರವನ್ನು ಕಳೆದುಕೊಳ್ಳುವುದು ಕೂಡ ಶುಭ ಸಂಕೇತವಲ್ಲ. ಅಪ್ಪಿತಪ್ಪಿಯೂ ಕಾಲುಂಗುರವನ್ನು ಕಳೆದುಕೊಳ್ಳಬಾರದು. ಕಾಲುಂಗುರವನ್ನು ಎಚ್ಚರಿಕೆಯಿಂದ ಧರಿಸಬೇಕು. ಕಾಲುಂಗುರ ಕಾಲಿನಲ್ಲಿದ್ದರೆ ಸಂತೋಷದ ಜೀವನ ಸದಾ ಮನೆ ಮಾಡಿರುತ್ತದೆ. 

ಮೆಡಿಕಲ್ ಓದ್ಬೇಕಿದ್ದ ಭಾಗ್ಯಲಕ್ಷ್ಮಿ ನಟಿ ಭೂಮಿಕಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ?

ಶಾಸ್ತ್ರದಲ್ಲಿ ಬೆಳ್ಳಿಯ ಕಾಲುಂಗುರವನ್ನು ಮಾತ್ರ ಧರಿಸಬೇಕು ಎನ್ನಲಾಗಿದೆ. ಪತಿ ಇರುವ ಮಹಿಳೆಯರು ಬಂಗಾರದ ಕಾಲುಂಗುರ ಧರಿಸಬಾರದು. ಇದು ಮುತ್ತೈದೆಯ ಸಂಕೇತವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ, ಮಹಿಳೆ ಯಾವುದೇ ಬಂಗಾರದ ಆಭರಣವನ್ನು ಸೊಂಟದ ಕೆಳ ಭಾಗದಲ್ಲಿ ಧರಿಸಬಾರದು. 

 

click me!