
ಪೂಂಜಾ, ಕಳಪೆ ಸ್ಪರ್ಧಿ ಬೋರ್ಡ್ ಪಡೆಯುತ್ತಿದ್ದಂತೆ ಪ್ರತಿಯೊಬ್ಬರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನಿಧಿ ಸುಬ್ಬಯ್ಯ ಜೊತೆ ಪದೇ ಪದೇ ಜಗಳ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣವೇ ಇಲ್ಲ ಎನ್ನುತ್ತಾರೆ ಸುದೀಪ್.
ಮಂಜು ಮತ್ತು ಅರವಿಂದ್ ಎರಡು ತಂಡದ ಕ್ಯಾಪ್ಟನ್ ಆಗಿದ್ದರು ಮುಂದಿನ ವಾರದ ಕ್ಯಾಪ್ಟನ್ ಟಾಸ್ಕ್‌ಗೆ ಸ್ಪರ್ಧಿಸುತ್ತಿದ್ದರು. ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಆಯ್ಕೆಯಾದರು. ಅತ್ತ ವಾರದ ಕಳಪೆ ಸ್ಪರ್ಧಿಯಾಗಿ ಶುಭಾ ಆಯ್ಕೆಯಾದರು. 'ಟಾಸ್ಕ್‌ನಲ್ಲಿ ಸೀರಿಯಸ್ ಆಗಿ ಆಡಲ್ಲ. ಇನ್ವಾಲ್ವ್‌ಮೆಂಟ್ ಕಡಿಮೆ, ಮನೆಗೆಲಸ ಮಾಡಲ್ಲ. ಶುಭಾರಿಂದಾಗಿ ತಂಡ ವೀಕ್ ಆಯ್ತು' ಎಂಬ ಕಾರಣ ಕೊಟ್ಟ ಸ್ಪರ್ಧಿಗಳು ಶುಭಾಗೆ ಕಳಪೆ ಬೋರ್ಡ್ ಕೊಟ್ಟರು. ಇನ್ನೂ ಅತ್ಯುತ್ತಮ ಪರ್ಫಾಮರ್ ಪಟ್ಟ ರಘು ಗೌಡ ಪಡೆದುಕೊಂಡರು.
ಕೊರೋನಾ ಮುಗಿದ ಮೇಲೆ ನನ್ನ ಮದುವೆ: ಶುಭಾ ಪೂಂಜಾ
ಪೇಂಟ್ ಮಾಡುವ ಟಾಸ್ಕ್‌ನಲ್ಲಿ ಶುಭಾ ಸರಿಯಾಗಿ ಆಟವಾಡದ ಕಾರಣ 'ನಮ್ಮದು ಚೆನ್ನಾಗಿ ಬಂದಿಲ್ಲ. ಡಬ್ಬಾ ತರಹ ಬಂದಿದೆ. ಸಗಣಿ ಸಾರಿಸಿಬಿಟ್ಟಿದ್ದಾಳೆ' ಎಂದು ನಿಧಿ ಶುಭಾ ಪೂಂಜಾರ ಕಾಲೆಳೆದರು. 'ಎಲ್ಲವೂ ಜೋಕ್ ಅಲ್ಲ'ಎಂದು ನಿಧಿ ಹೇಳಿದ್ದರು. ಇಬ್ಬರ ಮಾತು ಅಲ್ಲಿಗೆ ನಿಂತಿಲ್ಲ. 'ನನಗೆ ಪ್ರತಿ ಸಲನೂ ಉರಿಸಬಾರದು. ಏನೇ ಮಾಡಿದರೂ ಮಾಡಬೇಡ ಅನ್ನುತ್ತಾರೆ. ಸೀರಿಯಸ್ ಟಾಸ್ಕ್‌ನಲ್ಲಿ ಮಾಡಬೇಡ ಅಂದಾಗ ನಾನೇ ಒಪ್ಪಿಕೊಳ್ತೀನಿ. ಆದರೆ ಪ್ರತಿ ಬಾರಿಯೂ ಅದನ್ನೇ ಒಪ್ಪಿಕೊಳ್ಳುವುದಿಲ್ಲ. ಎಲ್ಲದಕ್ಕೂ ಒಂದು ಲಿಮಿಟ್ ಅನ್ನೋದು ಇರುತ್ತೆ. ಸೀರಿಯಸ್ ಟಾಸ್ಕ್‌ನಲ್ಲಿ ನಾನೂ ಸೀರಿಯಸ್ ಆಗಿದ್ದೀನಿ. ನಗು ನಗುತ್ತಾ ಇರ್ತೀನಿ ಅಂದ್ರೆ ಸೀರಿಯಸ್ ಆಗಿ ಆಡಲ್ಲ ಅಂತಲ್ಲ. ಸುಮ್ಮನೆ ಸಿಟ್ಟು ಮಾಡಿಕೊಂಡು ಕೂರುವುದು ನನ್ನ ಸ್ವಭಾವ ಅಲ್ಲ. ಪ್ರತಿ ಸಲನೂ ಕೊಂಕು ಮಾತನಾಡುವುದು ನನಗೆ ಇಷ್ಟ ಆಗಲ್ಲ' ಎಂದು ಶುಭಾ ಪೂಂಜಾ ಉತ್ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.