
'ನಾ ನಿನ್ನ ಬಿಡಲಾರೆ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದ ನಟ ದೀಪಕ್ ಮಹಾದೇವ್ ಮತ್ತು 'ಸೀತಾ ವಲ್ಲಭ' ಅಂಕಿತಾ ಆಗಿ ಪರಿಚಯವಾದ ನಟಿ ಚಂದನಾ ಜುಲೈ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ನಿಶ್ಚಿತಾರ್ಥವಾದ ವಿಚಾರವನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
'1/7/21 ನಿಶ್ಚಿತಾರ್ಥ ಮಾಡಿಕೊಂಡೆವು. ಶೀಘ್ರದಲ್ಲೇ ಮಿಸ್ಟರ್ ಆ್ಯಂಡ್ ಮಿಸಸ್ ಆಗಲಿದ್ದೇವೆ. ಶುಭಾಶಯ ತಿಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಕೊರೋನಾ ಪ್ಯಾಂಡಮಿಕ್‌ನಿಂದ ಎಲ್ಲರಿಗೂ ಆಹ್ವಾನ ನೀಡಲು ಆಗಲಿಲ್ಲ. ಆಪ್ತರು ಮಾತ್ರ ಭಾಗಿಯಾಗಿದ್ದರು. ಅದಷ್ಟು ಬೇಗ ಈ ಪರಿಸ್ಥಿತಿ ಸುಧಾರಿಸಿಕೊಳ್ಳಲಿ, ನೀವು ನಮ್ಮ ಮದುವೆಗೆ ಬಂದು ಆಶೀರ್ವಾದ ಮಾಡುವಂತಾಗಲಿ,'ಎಂದು ದೀಪಕ್ ಮಹಾದೇವ್ ಬರೆದುಕೊಂಡಿದ್ದಾರೆ. 'ಎಂಗೇಜ್ಡ್' ಎಂದು ಬರೆದುಕೊಂಡ ಚಂದನಾ ಉಂಗುರಗಳನ್ನು ಕ್ಯಾಮೆರಾಗೆ ತೋರಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ನಿಶ್ಚಿತಾರ್ಥ ಮಾಡಿಕೊಂಡ 'ಯಾರಿವಳು' ನಟ ಆರವ್, ಹುಡುಗಿ ಯಾರು ಗೊತ್ತಾ.?
ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಈ ಜೋಡಿ ಸೋಷಿಯಲ್ ಮಿಡಿಯಾದಲ್ಲೂ ಕೂಡ ಸಖತ್ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿವೊಂದರಲ್ಲಿ ದೀಪಕ್ ಅಭಿನಯಿಸುತ್ತಿದ್ದಾರೆ. 'ಸೀತಾವಲ್ಲಭ' ನಂತರ ಚಂದನಾ ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ, ಬದಲಿಗೆ ಪರಭಾಷೆ ವೀಕ್ಷಕರನ್ನು ಮನೋರಂಜಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.