
ಸದಾ ಗೇಮ್ ಪ್ಲಾನಿಂಗ್ ಮಾಡುತ್ತಾ ವಾರ ವಾರವೂ ಒಬ್ಬೊಬ್ಬರನ್ನು ಟಾರ್ಗೇಟ್ ಮಾಡುವ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಮಹಾ ಕದನ ಸೃಷ್ಟಿಯಾಗಿದೆ. ಕುಚಿಕು ಸ್ನೇಹಿತರಂತೆ ಇದ್ದವರು ಇದ್ದಕ್ಕಿದ್ದಂತೆ ಬಾಯಿಗೆ ಬಂದಹಾಗೆ ಮಾತನಾಡಿ ವರ್ತಿಸಿದ್ದು ಯಾಕೆ?
ಈ ವಾರ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳಿದ್ದರು. ಮಂಜು ಮತ್ತು ಅರವಿಂದ್. ಪ್ರಶಾಂತ್ ಮತ್ತು ಚಕ್ರವರ್ತಿ ಜೊತೆ ಮಂಜು ಸಂಬಂಧ ಅಷ್ಟಕ್ಕಷ್ಟೆ ಆಗಿರುವ ಕಾರಣ ಅರವಿಂದ್ ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೇ ಟಾಸ್ಕ್ ಮಾಡಲಿ, ಹಿಂದೆ ಕೂತು ಪ್ರೋತ್ಸಾಹ ನೀಡುತ್ತಿದ್ದ, ಚಕ್ರವರ್ತಿ ಸೋತರೆ ನಾನಾ ರೀತಿಯ ಮಾತುಗಳಿಂದ ಚುಚ್ಚಿ ಮಾತನಾಡುತ್ತಾರೆ. ಶಮಂತ್‌ನ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದ ಚಕ್ರವರ್ತಿಯ ಈ ವರ್ತನೆ ಬಗ್ಗೆ ಪ್ರಶಾಂತ್‌ಗೆ ಸಿಟ್ಟು ಬಂದು ಕಿತ್ತಾಡುತ್ತಾರೆ.
ಆ ಒಂದು ಮಾತಿನಿಂದ ಕಣ್ಣೀರಿಟ್ಟ ಅರವಿಂದ್; ನಿಧಿ ಸುಬ್ಬಯ್ಯ ಪರ ದಿವ್ಯಾ ಉರುಡುಗ!
'ಅವನಿಗೆ ವಕ್ತಾರನಾ ನೀನು? ಎಲ್ಲದಕ್ಕೂ ಅವನ ಪರವಾಗಿ ಬರ್ತಾನೆ. ನಿನಗೆ ಸ್ವಂತ ಆಟ ಆಡಲು ಬರಲ್ವಾ?' ಎಂದು ಚಕ್ರವರ್ತಿ ಪ್ರಶ್ನೆ ಮಾಡಿದ್ದಾರೆ. 'ನೀನ್ಯಾಕೆ ನನ್ನ ಬಗ್ಗೆ ಹೊಸ ಹೊಸ ಆರೋಪಗಳನ್ನು ಮಾಡುತ್ತಿದ್ದೀರಿ? ನಮ್ಮ ಕೋರ್ ಗ್ರೂಪ್ ಅಂತ ಇದ್ಯಲ್ಲ ಅದನ್ನು ತಮಾಷೆ ಮಾಡಬೇಡ,' ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಮಂಜು ಪಾವಗಡ ಜೊತೆ ಮಾತು ಬಿಟ್ಟರೆ ದಿವ್ಯಾ ಸುರೇಶ್‌ಗೆ ವೋಟ್ ಹಾಕುವುದಿಲ್ಲ; ಬಿಚ್ಚಿಟ್ಟ ಸತ್ಯ!
ಜಗಳವಾದರೂ ಪ್ರಶಾಂತ್ ಗೋಧಿ ಹಿಟ್ಟಿನ ಖಾದ್ಯವೊಂದನ್ನು ತಯಾರಿಸಿದ್ದರು. ಅದನ್ನು ತಿನ್ನಲಾಗದ ಚಕ್ರವರ್ತಿ ಬಿಸಾಡಿದರು. 'ಅದನ್ನು ಯಾಕೆ ಬಿಸಾಕಿದ್ದು, ಬದಲು ನನಗೇ ಕೊಡಬಹುದಿತ್ತಲ್ವಾ?' ಎಂದು ಪ್ರಶಾಂತ್ ಸಿಟ್ಟು ಮಾಡಿಕೊಳ್ಳುತ್ತಾರೆ. ಆ ನಂತರ ಶಮಂತ್ ವಿಚಾರವನ್ನು ಚರ್ಚಿಸಲು ಇಬ್ಬರೂ ಕುಳಿತು ಕೊಳ್ಳುತ್ತಾರೆ. 'ಯಾಕೋ ನಿನ್ನೆ ಪೂರ್ತಿ ನೀನು ಕಿಂಡಲ್ ಮಾಡಿದ್ಯಾ. ಎರಡು ದಿನಗಳಿಂದ ನೀನು ನೀನಾಗಿಲ್ಲ. ಸಪೋರ್ಟ್ ಅಂದ್ರೆ ಸಪೋರ್ಟ್ ಮಾಡಬೇಕು,' ಎಂದಿದ್ದಾರೆ. ಶಮಂತ್‌ನ ನಾಮಿನೇಟ್ ಮಾಡೋದಕ್ಕೆ ಯಾರಿಗೂ ಪಾಯಿಂಟ್ ಸಿಗುತ್ತಿಲ್ಲ. ಅದಕ್ಕೆ ನೀನೇ ದಾರಿ ಮಾಡಿಕೊಡುತ್ತಿರುವೆ, ಎಂದು ಪ್ರಶಾಂತ್ ಆಗಲೂ ಶಮಂತ್ ಪರ ನಿಲ್ಲುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.