
ಬಿಗ್‌ಬಾಸ್ ಪ್ರತಿ ಸೀಸನ್‌ನಲ್ಲೂ ಒಬ್ಬ ಸ್ಪರ್ಧಿಗೆ ಗೋಲ್ಡನ್ ಪಾಸ್ ನೀಡುವುದಾಗಿ ಘೋಷಿಸುತ್ತಾರೆ. ಟಾಸ್ಕ್‌ನಲ್ಲಿ ಜಯಶಾಲಿ ಆದವರು ಗೋಲ್ಡನ್ ಪಾಸ್ ಪಡೆದು, ನಾಮಿನೇಟ್ ಆದ ವಾರ ಸೇಫ್ ಆಗಲು ಗೋಲ್ಡನ್ ಪಾಸ್ ಬಳಸುತ್ತಾರೆ. ರಾಜೀವ್ ಗೋಲ್ಡನ್ ಪಾಸ್ ಬಳಸದೇ ಮನೆಯಿಂದ ಹೊರ ಹೋದ ಕಾರಣ ಆ ಪಾಸನ್ನು ಶುಭಾ ಪೂಂಜಾಗೆ ನೀಡಿದ್ದಾರೆ.
ಬ್ಯಾಂಕಲ್ಲಿ ಒಂದು ರೂಪಾಯಿ ಇರಲಿಲ್ಲ, ಚೌಡೇಶ್ವರಿ ದೇವಿ ಕಾಪಾಡಿದಳು: ಶುಭಾ ಪೂಂಜಾ
ಈ ವಾರ ಮನೆಯಿಂದ ಹೊರ ಹೋಗಲು ಮಂಜು ಪಾವಗಡ, ಅರವಿಂದ್, ಪ್ರಶಾಂತ್ ಸಂಬರಗಿ, ಚಕ್ರವರ್ತಿ , ಪ್ರಿಯಾಂಕಾ ಹಾಗೂ ದಿವ್ಯಾ ಸುರೇಶ್ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ಗೌಡ ಶುಭಾ ಪೂಂಜಾ ಅವರನ್ನು ಮನೆಯಿಂದ ಹೊರ ಹೋಗಲು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಶುಭಾ ಬಳಿ ಗೋಲ್ಡನ್ ಪಾಸ್ ಇರುವ ಕಾರಣ ಬಿಬಿ ಬಳಸಿಕೊಳ್ಳುತ್ತೀರಾ ಎಂದು ಕೇಳಿದ್ದಾರೆ. ಕೆಲವು ನಿಮಿಷಗಳ ಕಾಲ ಶುಭಾ ಚಿಂತಿಸಿ, ಯಸ್ ಎಂದಿದ್ದಾರೆ. ಈ ವಾರದ ಎಲಿಮಿನೇಷನ್‌ನಿಂದ ಶುಭಾ ಪಾರಾಗಿದ್ದಾರೆ.
ಒಂದು ವೇಳೆ ಶುಭಾ ಪೂಂಜಾ ಈ ಪಾಸ್ ಬಳಸದಿದ್ದರೆ ಪ್ರಶಾಂತ್ ಸಂಬರಗಿ ಕಳ್ಳತನ ಮಾಡುವ ಪ್ಲಾನ್ ಮಾಡಿದ್ದರು. ಶುಭಾ ಪಾಸ್ ಬಳಸುವ ವಿಚಾರ ಕೇಳಿ ಪ್ರಶಾಂತ್ ಸಪ್ಪಗಾದರು. ಆರಂಭದಲ್ಲಿ ಪ್ರತಿ ವಾರ ನಾಮಿನೇಷನ್‌ನಲ್ಲಿಯೂ ವೀಕ್ ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಿದ್ದರು. ಇಲ್ಲವಾದರೆ ಒಬ್ಬರನ್ನೇ ಟಾರ್ಗೇಟ್ ಮಾಡಿ ನಾಮಿನೇಟ್ ಮಾಡುತ್ತಿದ್ದರು. ಆದರೀಗ ಎಲ್ಲವೂ ಬದಲಾಗಿದೆ. ಸ್ಟ್ರಾಂಗ್ ಸ್ಪರ್ಧಿಗಳು ಪದೆ ಪದೇ ನಾಮಿನೇಟ್ ಆಗುತ್ತಿದ್ದಾರೆ. ರಾಜೀವ್ ನಾಮಿನೇಟ್ ಆಗಿ ಹೊರ ಹೋದ ನಂತರ ಇನ್ನಿತರೆ ಸ್ಟ್ರಾಂಗ್ ಸ್ಪರ್ಧಿಗಳಿಗೆ ಭಯ ಶುರುವಾಗಿದೆ. ಹಾಗಾಗಿ ಎಲ್ಲರೂ ಸೇಫ್ ಗೇಮ್ ಆಟವಾಡುತ್ತಿದ್ದಾರೆ. ಶಮಂತ್ ಹಾಗೂ ರಘು ಗೌಡ ನಾಮಿನೇಟ್ ಆಗದೆ ಸೇಫ್ ಆಗುತ್ತಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.