
ಬಿಗ್ ಬಾಸ್ ಸೀಸನ್ 8 ಫಿನಾಲೆ ದಿನಗಳಿಗೆ ಹತ್ತಿರ ಬರುತ್ತಿದೆ. ಈ ಸೀಸನ್‌ನ ಕೊನೆಯ ಕಳಪೆ ಸ್ಪರ್ಧಿ ಆಯ್ಕೆ ಈ ವಾರ ನಡೆಯಿತು. ವಾರ ವಾರವೂ ಕಳಪೆ ಆಯ್ಕೆ ಮಾಡುತ್ತಿದ್ದ ಸ್ಪರ್ಧಿಗಳು ಈ ವಾರ ಯಾರೂ ಬೇಡ ಎಂದು ಒಮ್ಮತದಿಂದ ಒಪ್ಪಿ ಕೊಂಡರು. ಆದರೆ ಒಬ್ಬರ ಹೆಸರು ಹೇಳಲೇ ಬೇಕು ಎಂಬ ಕಾರಣದಿಂದ ಎಲ್ಲರೂ ದಿವ್ಯಾ ಸುರೇಶ್ ಹೆಸರು ತೆಗೆದುಕೊಂಡರು.
ಇಡೀ ವಾರ ಸರಳವಾದ ಟಾಸ್ಕ್‌ಗಳಿದ್ದವು. ಮುಂದಿನ ವಾರ ಕ್ಯಾಪ್ಟನ್ ಆಯ್ಕೆ ಇಲ್ಲದ ಕಾರಣ ಪ್ರತಿಯೊಬ್ಬರೂ ನಾರ್ಮಲ್ ಆಗಿ ಟಾಸ್ಕ್ ಸ್ವೀಕರಿಸಿದ್ದರು. ಆದರೆ ದಿವ್ಯಾ ಸುರೇಶ್ ನೀಡಲಾಗಿದ್ದ ಮೂರು ಟಾಸ್ಕ್‌ನಲ್ಲಿ ಸೋತ ಕಾರಣ ಕಳಪೆ ಎಂದು ಹೇಳಿ ಕೊಂಡರು, ಅರವಿಂದ್ ಕೂಡ ಮೂರು ಟಾಸ್ಕ್‌ಗಳಲ್ಲಿ ಸೋತಿದ್ದಾರೆ. ಆದರೆ ಕಳಪೆಗೆ ಹೆಸರು ತೆಗೆಯಲಿಲ್ಲ. ನಾಲ್ಕು ವೋಟ್ ದಿವ್ಯಾ ಸುರೇಶ್‌ಗೆ ಹಾಗೂ ಮೂರು ವೋಟ್ ಅರವಿಂದ್, ಎರಡು ವೋಟ್ ಶುಭಾ ಪೂಂಜಾಗೆ ಹಾಕಲಾಗಿತ್ತು. ಕ್ಯಾಪ್ಟನ್ ದಿವ್ಯಾ ಉರುಡುಗ ಬೇಕಂತಲೇ ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ ಎಂಬುವುದು ಸದಸ್ಯರ ಮಾತು.
ಕಣ್ಣೀರು ಹಾಕುತ್ತಲೇ ಜೈಲಿಗೆ ಹೋದ ದಿವ್ಯಾ ಸುರೇಶ್ 'ತಮಗೆ ಕಳಪೆ ಪಟ್ಟ ಕೊಡದಿರಲು ಇನ್ನು ಕೆಲವು ಕಾರಣಗಳಿದ್ದವು. ನಿನಗೂ ನನಗಿಂತ ಕಳಪೆ ಆಗಿ ಆಡುವವರು ಕಣ್ಣಿಗೆ ಬಿದ್ದಿರುತ್ತಾರೆ,' ಎಂದು ಹೇಳಿದ್ದರು. 'ನಾನು ಆಟ ಆಡುವುವವರನ್ನು ಮಾತ್ರ ಗಮನಕ್ಕೆ ತೆಗೆದುಕೊಂಡು, ಕಳಪೆಗೆ ನಾಮಿನೇಟ್ ಮಾಡುವೆ' ಎಂದು ಮಂಜು ಪ್ರತಿಕ್ರಿಯೆ ನೀಡುತ್ತಾರೆ.
'ದಿವ್ಯಾ ನೀನು ಯಾವುದೇ ಕಾರಣಕ್ಕೂ ಕಳಪೆಗೆ ಹೋಗಬಾರದು ಎಂದು ಇಡೀ ದಿನ ಮೌನದಿಂದ ಇದ್ದು ಪ್ರಾರ್ಥಿಸಿದೆ. ನನ್ನ ಪ್ರಕಾರ ಅರವಿಂದ್ ಕಳಪೆಗೆ ಹೋಗ ಬೇಕಿತ್ತು. ದಿವ್ಯಾ ಉರುಡುಗ ಕೂಡ ಪ್ರಾಮಾಣಿಕವಾಗಿದ್ದರೆ, ಅರವಿಂದ್ ಅವರನ್ನೇ ಆಯ್ಕೆ ಮಾಡಬೇಕಿತ್ತು. ಅವಳು ಏನು ಮಾಡುತ್ತಾಳೆ ಅಂತ ಕಾಯುತ್ತಿದ್ದೆ. ಅರವಿಂದ್ ಎಲ್ಲಿ ಜೈಲಿಗೆ ಹೋಗುತ್ತಾರೋ ಅಂತ ದಿವ್ಯಾ ಉರುಡುಗ ಮುಖ ಸಣ್ಣ ಆಗಿತ್ತು. ಮಂಜು ಪಾವಗಡ ಹೆಸರನ್ನು ಹೇಳೋಲ್ಲ ಅಂತ ನಾನು ನಂಬಿದ್ದೆ. ಆದರೆ ಅರವಿಂದ್‌ಗೆ ದಿವ್ಯಾ ಉರುಡುಗನೇ ಜಗತ್ತು. ನಾನು ಈ ವಾರ ಸುದೀಪ್ ಸರ್ ಬಳಿ ಹೇಳುವೆ,'ಎಂದು ಜೈಲಿನ ಬಳಿ ಪ್ರಶಾಂತ್ ಸಂಬರಗಿ ಕುಳಿತು ಮಾತನಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.