ದಿವ್ಯಾ ಸುರೇಶ್‌ರನ್ನು ಕಳಪೆ ಪಟ್ಟಿಗೆ ಸೇರಿಸಿದ ಮಂಜು.. ಅರವಿಂದ್ ಬಚಾವ್!

Published : Jul 30, 2021, 11:16 PM IST
ದಿವ್ಯಾ ಸುರೇಶ್‌ರನ್ನು ಕಳಪೆ ಪಟ್ಟಿಗೆ ಸೇರಿಸಿದ ಮಂಜು.. ಅರವಿಂದ್ ಬಚಾವ್!

ಸಾರಾಂಶ

* ಬಿಗ್ ಬಾಸ್ ಫಿನಾಲೆಗೆ ಹತ್ತೇ ದಿನ * ಕಳಪೆ ಬೋರ್ಡ್ ಹಾಕಿಸಿಕೊಂಡ ದಿವ್ಯಾ ಸುರೇಶ್ * ಅವರಿಂದ್ ಸಹ ಕಳಪೆ ರೇಸ್ ನಲ್ಲಿದ್ದರು * ಬಿಗ್ ಬಾಸ್ ಅಂತಿಮ ಘಟ್ಟಕ್ಕೆ

ಬೆಂಗಳೂರು(ಜು.  30)  ಬಿಗ್ ಬಾಸ್ ಮನೆ ಫಿನಾಲೆ ಹಂತಕ್ಕೆ ಬಂದಿದೆ. ಕಳಪೆಯಾಗಿ ದಿವ್ಯಾ ಸುರೇಶ್ ಮನೆಯವರಿಂದ ಆಯ್ಕೆಯಾದರೆ ಅತ್ಯುತ್ತಮರಾಗಿ ಪ್ರಶಾಂತ್ ಸಂಬರಗಿ ಹೊರಹೊಮ್ಮಿದ್ದಾರೆ.

ಪೇನ್ ನಲ್ಲಿ ಸಿಕ್ಕ ಅತ್ಯುತ್ತಮ ಖುಷಿಕೊಟ್ಟಿದೆ ಎಂದು ಪ್ರಶಾಂತ್ ಹೇಳಿದ್ದಾರೆ. ಈ ವಾರ ಮನೆಯಲ್ಲಿ ಯಾರೂ ಕಳಪೆ ಇಲ್ಲ.. ಯಾರೂ ಉತ್ತಮ ಇಲ್ಲ ಎಂದು ಮನೆಯವರೇ ತೀರ್ಮಾನ ಮಾಡಿ ಬಿಗ್ ಬಾಸ್ ಗೆ ಹೇಳಲು  ಮುಂದಾದರು. ಆದರೆ ಬಿಗ್ ಬಾಸ್ ಮನೆ ನಿಯಮವನ್ನು ಮುರಿಯಲು ಸಾಧ್ಯವಿಲ್ಲ ಎಂದು ಬಿಗ್ ಬಾಸ್ ಆದೇಶ ನೀಡಿದರು.

ಈ ಬಾರಿ ವಿಶೇಷ ಎಂದರೆ ಇಲ್ಲಿಯವರೆಗೂ ಅತ್ಯುತ್ತಮ ಆಗಿ ಹೊರ ಹೊಮ್ಮುತ್ತಿದ್ದ ಅರವಿಂದ್ ಕೆಪಿ ಮತ್ತು ದಿವ್ಯಾ ಸುರೇಶ್ ನಡುವೆ ಕಳಪೆ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಅರವಿಂದ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ದಿವ್ಯಾ ಸುರೇಶ್ ಹೇಳಿದರು. ಮಂಜು ಸಹ ದಿವ್ಯಾ ಸುರೇಶ್ ಅವರನ್ನು ಕಳಪೆಯಾಗಿ ಆಯ್ಕೆಮಾಡಿದ್ದು ಮತ್ತೊಂದು ವಿಶೇಷ.

ಮಿಡಲ್ ಫಿಂಗರ್ ತೋರಿಸಿದ ಅರವಿಂದ್ ಕೆಪಿ ಹೈಲೈಟ್ ಆಗಲೇ ಇಲ್ಲ

ಮೊದಲಿಗೆ ನಾನೇ ಕಳಪೆ ಎಂದು  ಹೇಳಿದ್ದ ದಿವ್ಯಾ ಸುರೇಶ್ ನಂತರ ಕಳಪೆಯಾಗಿ ಜೈಲು ಸೇರಿದಾಗ ಮಂಜು ಬಳಿ ವಾದಕ್ಕೆ ಇಳಿದರು.  ಮಂಜಾ ನೀನು ನನಗೆ ಕಳಪೆ ಹಾಕಿದ್ದೀಯಲ್ಲ ಎಂದು ಅಸಮಾಧಾನದಿಂಲೇ ಹೇಳಿದರು. ಜೈಲಿಗೆ ಹೋಗುವ ಮುನ್ನ ದಿವ್ಯಾ ಸುರೇಶ್  ತುಂಬಾ ಬೇಸರದಿಂದ ಇದ್ದರು.

ಬಿಗ್ ಬಾಸ್ ಈ ವಾರ ಯಾವುದೇ ಗಂಭೀರ ಟಾಸ್ಕ್ ನೀಡಲಿಲ್ಲ.  ಮನೆ ಮಂದಿಗೆ ಸಣ್ಣ ಸಣ್ಣ ಟಾಸ್ಕ್ ನೀಡಿ ಎಲ್ಲರ ಶ್ರಮವನ್ನು ಪರೀಕ್ಷಿಸಿದರು.  ಅರವಿಂದ್ ದಿವ್ಯಾ ಸುರೇಶ್ ಜಾಗದಲ್ಲಿ ಕಳಪೆಯಾಗಿ ಇರಬೇಕಿತ್ತು. ಮಂಜು ಪಾವಗಡ ದಿವ್ಯಾ ಎಸ್ ಹೆಸರನ್ನು  ಹೇಳಿ ಎಡವಟ್ಟು ಮಾಡಿದ ಎಂದು ಪ್ರಶಾಂತ್ ಆರೋಪಿಸಿದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?
Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​