ಬೇಕೇ ಬೇಕು, ಕಾಫಿ ಬೇಕು ಎಂದು ಡಿಮ್ಯಾಂಡ್ ಮಾಡುತ್ತಿರುವ ಸ್ಪರ್ಧಿಗಳು, ಪ್ರಶಾಂತ್ ಸಂಬರಗಿಯನ್ನು ಜೈಲಿಗೆ ಕಳುಹಿಸಲು ರೆಡಿಯಾಗಿದ್ದಾರೆ......!
ಬಿಗ್‌ಬಾಸ್ ಮನೆಯಲ್ಲಿ ಕಾಫಿ ಹಾಗೂ ಟೀ ಅಡಿಕ್ಟ್‌ಗಳು ತುಂಬಾನೇ ಇದ್ದಾರೆ. ಬೆಳಗಾದರೆ ಕಾಫಿ, ಮಲಗುವ ಮುನ್ನ ಟೀ ಹೀಗೆ ಆಗಾಗ ಕುಡಿಯಲು ಏನಾದರೂ ಬೇಕೇ ಬೇಕು ಇವರಿಗೆ. ಕಾಫಿ ಪುಡಿ ಖಾಲಿ ಆದರೆ ಏನು ಮಾಡಬೇಕು? ಇಲ್ಲಿ ನೋಡಿ ರಾಜೀವ್ ಹಾಗೂ ನಿಧಿ ಸುಬ್ಬಯ್ಯ ಮಾಡಿದ ಉಪಾಯ.....
ಟಿಕ್‌ಟಾಕ್ ಧನುಶ್ರೀ ಸ್ನಾನಕ್ಕೂ ಮೇಕಪ್ ಮಾಡ್ಕೊಂಡೇ ಹೋಗೋದಾ?
undefined
ನಾಮಿನೇಶನ್‌ನಿಂದ ಇಮ್ಯೂನಿಟಿ ಪಡೆಯಲು ನಿಧಿ ಸುಬ್ಬಯ್ಯ ಹಾಗೂ ದಿವ್ಯಾ ಈಜು ಟಾಸ್ಕ್ ಮಾಡಬೇಕಾಗಿತ್ತು. ಈಜುಕೊಳದಲ್ಲಿ 24 ಬಾರಿ ಬಿದ್ದು ಎದ್ದ ನಂತರವೂ ನಿಧಿ ನಾಮಿನೇಶನ್‌ನಿಂದ ಇಮ್ಯೂನಿಟಿ ಪಡೆಯಲಿಲ್ಲ. ಆದರೆ ಈ ಟಾಸ್ಕ್‌ನಿಂದ ನಿಧಿ ಆರೋಗ್ಯದಲ್ಲಿ ಏರುಪೇರಾಗಿದೆ. ನಿಧಿಗೆ ಯಾಷ ಔಷಧಿಯೂ ಬೇಡ, ಕಾಫಿ ಕೊಟ್ಟರೆ ಸಾಕಂತ. ಹೀಗಂತ ಅವರೇ ಕ್ರಿಕೆಟರ್ ರಾಜೀವ್ ಜೊತೆ ಕ್ಯಾಮೆರಾ ಎದುರು ಮಾತನಾಡಿದ್ದಾರೆ.
'ಬಿಗ್ ಬಾಸ್ ದಯವಿಟ್ಟು ನಮಗೆ ಕಾಫಿ ಪುಡಿ ಕೊಡಿ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು, ಎದ್ದು ತಲೆ ನೋವು. ಆಮೇಲೆ ನೆಗಡಿಯಾಗಿದೆ. ಕಾಫಿ ಕುಡಿದರೆ ಮಾತ್ರ ನಾನು ಆರಾಂ ಆಗೋದು. ರಾಜೀವ್ ಅವರಿಗೂ ಕಾಫಿ ಬೇಕೇ ಬೇಕು. ನೀವು ಮಾತನಾಡಿ ರಾಜೀವ್,' ಎಂದು ನಿಧಿ ಹೇಳುತ್ತಾರೆ. ತಕ್ಷಣವೇ ರಾಜೀವ್ 'ಬಿಗ್ ಬಾಸ್ ನನ್ನ ಧ್ವನಿ ಹಾಳಾಗಿದೆ. ದಯವಿಟ್ಟು ಕಾಫಿ ಕೊಡಿ' ಎಂದರು. ಆದರೆ ರಾಜೀವ್ ಕೊಟ್ಟ ಕಾರಣ ಸಾಲದು ಎಂದು ನಿಧಿ ಇನ್ನೂ ಕಾರಣ ಕೊಡಿ ಎಂಬುದಾಗಿ ಒತ್ತಾಯ ಮಾಡಿದರು. ರಾಜೀವ್ 'ಧ್ವನಿ ಸರಿ ಹೋಗಿಲ್ಲ ಅಂದ್ರೆ ಟಾಸ್ಕ್ ಮಾಡುವಾಗ ನನಗೆ ಕಾಮೆಂಟ್ರಿ ಮಾಡೋಕೆ ಕಷ್ಟ ಆಗುತ್ತೆ. ಪ್ಲೀಸ್,' ಎನ್ನುತ್ತಾರೆ. ಈ ಕಾರಣಗಳನ್ನು ಬಿಗ್ ಬಾಸ್ ಕೇಳುತ್ತಾರೋ ಇಲ್ವೋ ಅಂತ ನಿಧಿ 'ಬಿಗ್‌ಬಾಸ್ ಬೇಕಿದ್ರೆ ನೀವು ಪ್ರಶಾಂತ್ ಅವರನ್ನು ಜೈಲು ಒಳಗೆ ಕಳುಹಿಸಿ. ಆಮೇಲೆ ನಮಗೆ ಕೊಡಿ. ಅವರು ಅಲ್ಲೇ ಇರಲಿ,' ಎಂದು ಹೇಳುತ್ತಾರೆ.
BBK8: ಮೊದಲ ದಿನವೇ ದಿವ್ಯಾ ಸುರೇಶ್ ಪ್ರೀತಿಯ ಬಲೆಗೆ ಬಿದ್ದ ಲ್ಯಾಗ್ ಮಂಜು!
ಹೌದು! ಬಿಬಿ ಮನೆಯಲ್ಲಿ ಅತಿ ಹೆಚ್ಚು ಕಾಫಿ ಕುಡಿಯುವುದು ಪ್ರಶಾಂತ್. ಪದೇ ಪದೇ ಅಡಿಗೆ ಮನೆಯೊಳಗೆ ಹೋಗಿ ಕಾಫಿ ಮಾಡಿಕೊಳ್ಳುತ್ತಾರೆ. ಇವರಿಂದಲೇ ಪುಡಿ ಕಡಿಮೆ ಅಗಿರುವುದು, ಕೆಲವರು ದಿನಕ್ಕೆ ಒಂದು ಸಲ ಕುಡಿಯುವುದು ಅಷ್ಟೆ. ಈಗ ಪುಡಿನೇ ಕಾಲಿ ಆಗಿದೆ ಎಂದು ಮನೆ ಮಂದಿ ಪ್ರಶಾಂತ್ ವಿರುದ್ಧ ಒಗ್ಗಟ್ಟಾಗಿ ಆರೋಪ ಮಾಡಿದ್ದಾರೆ.