
ಕನ್ನಡತಿ ಧಾರವಾಹಿಯಲ್ಲಿ ಭುವಿ ಮಾಡೋ ಕನ್ನಡ ಪಾಠಕ್ಕೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಕನ್ನಡ ಟೀಚರ್ ಹೇಳ್ಕೊಡೋ ಸರಳ ಪದಗಳೂ, ಅವುಗಳ ಅರ್ಥಗಳನ್ನೂ ಕೇಳೋಕೆ ಎಲ್ಲರಿಗೂ ಇಷ್ಟ.
ನಟಿಯ ಕನ್ನಡ ಪಾಠದ ಅಭಿಮಾನಿಗಳು ಹೆಚ್ಚಿದ್ದು, ಇದೀಗ ನಟಿ ಏನ್ ಪೋಸ್ಟ್ ಮಾಡಿದರೂ ಅಭಿಮಾನಿಗಳು ಕಮೆಂಟ್‌ನಲ್ಲಿ ಕನ್ನಡ ಪಾಠವನ್ನೇ ಮಾಡುತ್ತಿದ್ದಾರೆ.
ಹರ್ಷನ ಎದೆಯ ಮೇಲೆ ಭುವಿ ಹೆಸರಿನ ಹಚ್ಚೆ..! ಫುಲ್ ಫೀಲ್‌ನಲ್ಲಿ ಹೀರೋ
ಇತ್ತೀಚೆಗೆ ಭುವಿ ಪಾತ್ರ ಮಾಡುವ ರಂಜನಿ ರಾಘವನ್ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಇದಕ್ಕೆ ಕಮೆಂಟ್ ಮಾಡಿದ ಅಭಿಮಾನಿ ಏನು ಬರೆದಿದ್ದಾರೆ ನೋಡಿ.
ಎಟೆಂಡೆನ್ಸ್ ಶಾರ್ಟೇಜ್ ಇದ್ರೂ ಮಹಿಳಾ ಉಪನ್ಯಾಸಕಿಯೊಬ್ಬರು ಹಾಲ್ ಟಿಕೆಟ್ ಕೊಟ್ರೆ ವಿದ್ಯಾರ್ಥಿಗಳು ಏನ್ಮಾಡ್ತಾರೆ ಎನ್ನುವುದನ್ನು ಹಾಡಿ ತೋರಿಸಿದ್ದಾರೆ ನಟಿ ರಂಜನಿ.
ವರೂಧಿನಿ ಜೈಲಿಂದ ಹೊರಗ್ಬಂದಿದ್ದು ಖುಷಿ ಅಂದ್ರು ಭುವಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಇದಕ್ಕೆ ಕಮೆಂಟ್ ಮಾಡಿದ ಅಭಿಮಾನಿ, praveenshanbag ಎನ್ನುವವರು ಓಬೀರಾಯ ಅನ್ನೋದರ ಪೂರ್ಣ ರೂಪ: Old British Royal (O.B.Roy) ಹಿಂದೆ ಯಾವುದಾದರೂ ಕಾನೂನು ಕ್ರಮ ಜರುಗಿಸುವುದಕ್ಕೆ ಮುಂಚೆ ಈ old British Royal ಕಾನೂನು ಏನು ಹೇಳುತ್ತೆ ಅಂತ ನೋಡುತ್ತಿದ್ದರಂತೆ. ಮುಂದೆ ಅದೇ ಅಭ್ಯಾಸ ಆಗಿ ಈ ಫೈಲು ಯಾವ ಕಾಲದ್ದಪ್ಪ ಅಂದ್ರೆ ಓಬೀರಾಯನ ಕಾಲದ್ದು ಅನ್ನೋ ಪದ ರೂಢಿಗೆ ಬಂತು. #ಹಳೆಪದಅರಿಯೋಣ ಎಂದು ಕಮೆಂಟ್ ಮಾಡಿದ್ದಾರೆ.
ಅಂತೂ ಕನ್ನಡತಿಯ ಕನ್ನಡ ಪಾಠ ಕೇಳಿ ಪ್ರೇರೇಪಿತರಾಗಿ ಎಲ್ಲರೂ ಕನ್ನಡ ಕಲಿಯುವ ಕಲಿಸುವ ಉತ್ಸಾಹಕ್ಕೆ ಬಂದು ನಿಂತಿರುವುದು ನಿಜಕ್ಕೂ ಖುಷಿಯ ವಿಚಾರ ಅಲ್ವಾ..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.