ಬಿಗ್‌ಬಾಸ್ ಮನೆಯಲ್ಲಿ ಯಾರೆಲ್ಲಾ ಮೇಕಪ್ ಧರಿಸುತ್ತಾರೆ? ಧನುಶ್ರೀ ಮೇಕಪ್ ಲುಕ್ ನೋಡಿ ಶಾಕ್ ಆದ ಲ್ಯಾಗ್ ಮಂಜು ಹೇಳಿದ್ದೇನು ಗೊತ್ತಾ?
ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ಹೇಗೆ ಎಂದು ಅರ್ಥ ಮಾಡಿಕೊಳ್ಳುವುದರಲ್ಲಿ ಪ್ರತಿಸ್ಪರ್ಧಿಗಳು ಮೊದಲ ವಾರ ಕಳೆಯುತ್ತಾರೆ ಎಂದೆನಿಸುತ್ತದೆ. ವಾರದ ನಾಮಿನೇಷನ್‌ನಿಂದ ಎಸ್ಕೇಪ್ ಆಗಬೇಕಾ ಅಥವಾ ತಮ್ಮ ಅಂದ ಚಂದದ ಬಗ್ಗೆ ಗಮನ ಕೊಡಬೇಕಾ ಎಂದು ತಿಳಿಯದೇ ಸ್ಪರ್ಧಿಗಳು ಗೊಂದಲದಲ್ಲಿದ್ದಾರೆ.
ಬಿಬಿ ಮನೆಯಲ್ಲಿ ಕೆಲವರು Early Birds, ಇನ್ನೂ ಕೆಲವರು Night Owls, ಯಾಕಂದ್ರೆ ಗುಡ್ ಮಾರ್ನಿಂಗ್ ರಾಗ ಬರುವ ಮುನ್ನ ಕೆಲವರು ವ್ಯಾಯಾಮ , ಅಡುಗೆ ಅಂತ ದಿನ ಆರಂಭಿಸುತ್ತಾರೆ. ಆದರೆ ಕೆಲವರು ಸಾಂಗ್ ಪ್ಲೇ ಆದ ಮೇಲೆ ಓ... ಬೆಳಗಾಯಿತು ಎಂದು ಎದ್ದೇಳುತ್ತಾರೆ. ಆದರೆ ಸ್ನಾನ ಮಾಡುವ ಮುನ್ನವೇ ಮೇಕಪ್ ಇದ್ದರೆ ಹೇಗೆ? ಲ್ಯಾಗ್ ಮಂಜು ಕೇಳಿದ ಪ್ರಶ್ನೆ ಇದು...
undefined
ದಿನದ ಟಾಸ್ಕ್ ಆರಂಭವಾಗುವ ಮುನ್ನ ಸ್ಪರ್ಧಿಗಳು ಜಳಕ ಮಾಡಿ ರೆಡಿಯಾಗುತ್ತಾರೆ. ಧನುಶ್ರೀ ನಂತರ ಯಾರು ಬಾತ್‌ರೂಮ್ ಬಳಸಬೇಕು ಎಂದು ಚಿಂತಿಸುತ್ತಾ ನಿಂತಿದ್ದ ಲ್ಯಾಗ್ ಮಂಜು, ಆಕೆಯ ಮೇಕಪ್ ನೋಡಿ ಶಾಕ್ ಆಗುತ್ತಾರೆ. 'ಬಾತ್‌ರೂಮ್ ಒಳಗೆ ಸ್ನಾನ ಮಾತ್ರ ಮಾಡೋಕೆ ಆಗೋದು, ನೀವು ಮೇಕಪ್ ಕೂಡ ಹಾಕೊಂಡ್ರಾ, ಹೇಗೆ?' ಎಂದು ಪ್ರಶ್ನೆ ಮಾಡುತ್ತಾರೆ. 'ನಾನು ಮೇಕಪ್ ಧರಿಸಿ, ಆಮೇಲೆ ಸ್ನಾನ ಮಾಡಿದ್ದು' ಎಂದು ಧನುಶ್ರೀ ಉತ್ತರಿಸುತ್ತಾರೆ. ಅದು ಹೇಗೆ ಎಂದು ಅರ್ಥವಾಗದೇ ನಿಂತಿದ್ದ ಮಂಜು ಮುಖ ನೋಡಿ, 'ಮುಖಕ್ಕೆ ಮೇಕಪ್ ಹಾಕಿದೆ, ಆಮೇಲೆ ಬಂದು ಸ್ನಾನ ಮಾಡಿದೆ ಅಷ್ಟೇ' ಎಂದು ಮತ್ತೊಮ್ಮೆ ಧನುಶ್ರೀ ಉತ್ತರಿಸುತ್ತಾರೆ.
'ಜನರು ಹೀಗೂ ಮಾಡುತ್ತಾರಾ? ಇಷ್ಟೊಂದು ಮೇಕಪ್ ಹಾಕಲೇ ಬೇಕಾ' ಎಂದ ಮಂಜು ಫುಲ್ ಕನ್ಫ್ಯೂಸ್ ಆಗಿ ನಿಲ್ಲುತ್ತಾರೆ.
ಈ ಹಿಂದಿನ ಬಿಗ್‌ಬಾಸ್‌ನಲ್ಲಿ ನಿವೇದಿತಾ ಮೇಕಪ್ ಬಗ್ಗೆಯೂ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಅವರ ತುಟಿಗೆ ಹಚ್ಚೋ ಲಿಪ್‌ಸ್ಟಿಕ್ ಬಗ್ಗೆಯೂ ಸಹ ಸ್ಪರ್ಧಿಗಳು ಯಾವಾಗಲೂ ಕಾಲೆಳೆಯುತ್ತಿದ್ದರು. ಒಮ್ಮೆ ಚಂದನ್ ಶೆಟ್ಟಿಯೇ ಗಂಡ ದುಡಿದ ದುಡ್ಡು ಪೂರ್ತಿ ಈಕೆಯ ಲಿಪ್‌ಸ್ಟಿಕ್‌ಗೇ ಬೇಕು ಎಂದೂ ಹೇಳಿದ್ದರು.