ತಂತ್ರಗಾರಿಕೆ ಮಾಡಲು ಹೋಗಿ 'ಕುತಂತ್ರ' ಮಾಡಿ ಜೈಲು ಸೇರಿದ ನಿಧಿ ಸುಬ್ಬಯ್ಯ!

Suvarna News   | Asianet News
Published : Apr 20, 2021, 11:17 AM IST
ತಂತ್ರಗಾರಿಕೆ ಮಾಡಲು ಹೋಗಿ 'ಕುತಂತ್ರ' ಮಾಡಿ ಜೈಲು ಸೇರಿದ ನಿಧಿ ಸುಬ್ಬಯ್ಯ!

ಸಾರಾಂಶ

ಲೇಡಿ ವಾರ್ಡನ್‌ ನಿಧಿ ಸುಬ್ಬಯ್ಯ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಹೋಗಿ, ದಿವ್ಯಾ ಸುರೇಶ್‌ ಅವರನ್ನು ಸಿಲುಕಿಸಿದ್ದಾರೆ. ನಿಧಿ ಸುಬ್ಬಯ್ಯಗೆ ಕಳಪೆ ಹಣೆ ಪಟ್ಟಿ ನೀಡಿದ ಸದಸ್ಯರು.

'ಹಾಸ್ಟೆಲ್' ಟಾಸ್ಕ್ ಮೂಲಕ ಬಿಗ್ ಬಾಸ್‌ನಲ್ಲಿರುವ ಸದಸ್ಯರಿಗೆ ಕಾಲೇಜ್‌ ದಿನಗಳನ್ನು ಮತ್ತೊಮ್ಮೆ ಮೆಲಕು ಹಾಕುವಂತೆ ಮಾಡಿದೆ. ಹುಡುಗರ ಹಾಸ್ಟೆಲ್ ವಾರ್ಡನ್ ಆಗಿ ಪ್ರಶಾಂತ್, ಹುಡುಗಿಯರ ಹಾಸ್ಟೆಲ್ ವಾರ್ಡನ್ ಆಗಿ ನಿಧಿ ಸುಬ್ಬಯ್ಯ ಆಯ್ಕೆ ಆಗಿದ್ದರು. ಬಿಗ್ ಬಾಸ್‌ ನೀಡುವ ಟಾಸ್ಕ್‌ಗಳಲ್ಲಿ ಭಾಗಿಯಾಗಿ, ಅತಿ ಹೆಚ್ಚು ಫ್ಲ್ಯಾಗ್ ಪಡೆಯುವ ಹಾಸ್ಟೆಲ್ ಬೆಸ್ಟ್‌ ಹಾಸ್ಟೆಲ್ ಬಿರುದು ಪಡೆದುಕೊಳ್ಳುತ್ತದೆ. 

'ಎಲ್ಲೆಲ್ಲೋ ಮುಟ್ತಾರೆ'  ಹೊರ ಬರುವಾಗ ನಿಧಿಗೆ ಶಂಕರ್ ಬಹುಮಾನ! 

ಆರಂಭದಿಂದಲೂ ಎರಡೂ ಹಾಸ್ಟೆಲ್ ತಂಡಗಳು ಟಾಸ್ಕ್‌ಗಳಲ್ಲಿ ಅದ್ಭುತವಾಗಿ ಸ್ಪರ್ಧಿಸಿದ್ದವು. ಹುಡುಗರು ವಾರ್ಡನ್‌ಗಳ ತಣ್ಣು ತಪ್ಪಿಸಿ, ಹುಡುಗಿಯರಿಗೆ ಪ್ರೇಮ ಪತ್ರ ಬರೆಯಬೇಕು. ಲೇಡಿ ವಾರ್ಡನ್‌ ಕೈಗೆ ಸಿಗದಂತೆ ಎತ್ತಿಡಬೇಕು. ಕೊನೆಯಲ್ಲಿ ಅತಿ ಹೆಚ್ಚು ಪತ್ರ ಕಾಪಾಡಿಕೊಳ್ಳುವವರು ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ. ವಾರ್ಡನ್‌ ನಿಧಿ  ಅತಿ ಹೆಚ್ಚು ಪತ್ರ ಕಲೆಕ್ಟ್ ಮಾಡಲು ದಿವ್ಯಾ ಸುರೇಶ್ ಸಹಾಯ ಪಡೆಯುತ್ತಾರೆ. ದಿವ್ಯಾ ಸುರೇಶ್‌ ಪಡೆದಿರುವ ಪತ್ರಗಳನ್ನು ಹೊರತು ಪಡಿಸಿ ಇನ್ನಿತರ ಹುಡುಗಿಯರ ಅನೇಕ ಪತ್ರಗಳನ್ನು ಪತ್ತೆ ಮಾಡಿ ವಶಪಡಿಸಿ ಕೊಳ್ಳುತ್ತಾರೆ. ವಾರ್ಡನ್‌ ಪ್ರಶಾಂತ್ ಸಂಬರಗಿಗಿಂತ ಅತಿ ಹೆಚ್ಚು ಪತ್ರ ನಿಧಿ ಸಂಗ್ರಹ ಮಾಡಿರುವ ಕಾರಣ ನಿಧಿ ಕೂಡ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ. ಸುಮಾರು 30-40 ಅರ್ಥಪೂರ್ಣ ಪತ್ರಗಳನ್ನು ದಿವ್ಯಾ ಉರುಡುಗ ಅವರಿಗೆ ಬರೆದಿರುವ ಕಾರಣ ಅರವಿಂದ್‌ ಕೂಡ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಅದರು. ನಿಧಿ, ದಿವ್ಯಾ ಸುರೇಶ್ ಹಾಗೂ ಅರವಿಂದ್‌ ಸ್ಪರ್ಧಿಸಿದ್ದರು, ಈ ವಾರದ ಕ್ಯಾಪ್ಟನ್ ಆಗಿ ಅರವಿಂದ್ ಆಯ್ಕೆ ಆದರು.

ನಿಧಿ ಸುಬ್ಬಯ್ಯ ಖಾತೆಯಲ್ಲಿ ಮದುವೆ ಫೋಟೋ ಡಿಲೀಟ್; ಡಿವೋರ್ಸ್‌ ಆಗಿದ್ಯಾ? 

ಈಗ ತುಂಬಾನೇ ಡಿಫರೆಂಟ್‌ ಟಾಸ್ಕ್‌ಗಳನ್ನು ನೀಡುತ್ತಿರುವ ಕ್ರಿಯೇಟಿವ್‌ ಟೀಂ ಬಿಗ್ ಬಾಸ್‌ ವೀಕ್ಷಕರಿಗೆ ಒಂದು ಬಂಪರ್ ಅವಕಾಶ ನೀಡಿದ್ದರು. ಈ ವೇಳೆ ಒಬ್ಬ ಕಾಲರ್‌ ನಿಧಿ ಹಾಗೂ ದಿವ್ಯಾ ಮಾಡಿದ ಗೇಮ್ ಪ್ಲಾನ್ ಬಗ್ಗೆ ಬಹಿರಂಗ ಪಡಿಸಿದ್ದರು. ಕೇಳುತ್ತಿದ್ದಂತೆ ಶಾಕ್ ಆದ ಸದಸ್ಯರು, ನಿಧಿ ಹಾಗೂ ದಿವ್ಯಾ  ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ವಾರ ಕಳಪೆ ಪ್ರದರ್ಶನ ನೀಡಿದ್ದರು, ನಿಧಿ ಅಂತಲೇ ಆಯ್ಕೆ ಮಾಡಿದ್ದರು. ಇದು ಗೇಮ್ ಪ್ಲಾನ್ ಎಂದು ನಿಧಿ ವಾದ ಮಾಡಿದರು. ಕ್ಯಾಪ್ಟನ್ ನಿರ್ಧಾರ ಅಂತಿಮವಾದ ಕಾರಣ ಅರವಿಂದ್ 'ಬಿಗ್ ಬಾಸ್‌ ಕಳುಹಿಸಿರುವ ಗೇಮ್‌ ರೂಲ್ ಪ್ರಕಾರ ತಂತ್ರಗಾರಿಕೆ ಮಾಡಿ ಅಂತ ಹೇಳಿದ್ದಾರೆ. ಆದರೆ ನಿಧಿ ಕುತಂತ್ರ ಮಾಡಿದ್ದಾಳೆ. ನಾನು ಈ ವಾರ ನಿಧಿಯನ್ನು ಕಳಪೆ ಸ್ಪರ್ಧಿ ಎಂದು ಆಯ್ಕೆ ಮಾಡುತ್ತೇನೆ,' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?
BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?