ಬಿಗ್‌ಬಾಸ್‌ ಸ್ಪರ್ಧಿಗಳ ಭಾವುಕ ಪತ್ರ, ರುಚಿಕರ ಅಡುಗೆ ಬಗ್ಗೆ ಕಿಚ್ಚನ ಪತ್ನಿ ಟ್ಟೀಟ್!

Suvarna News   | Asianet News
Published : Apr 19, 2021, 11:33 AM ISTUpdated : Apr 19, 2021, 11:47 AM IST
ಬಿಗ್‌ಬಾಸ್‌ ಸ್ಪರ್ಧಿಗಳ ಭಾವುಕ ಪತ್ರ, ರುಚಿಕರ ಅಡುಗೆ ಬಗ್ಗೆ ಕಿಚ್ಚನ ಪತ್ನಿ ಟ್ಟೀಟ್!

ಸಾರಾಂಶ

ಸುದೀಪ್ ಆರೋಗ್ಯದ ವಿಚಾರ ತಿಳಿದು ಗೊಂದಲಕ್ಕೆ ಒಳಗಾದ ಬಿಗ್‌ಬಾಸ್‌ ಸ್ಪರ್ಧಿಗಳು. ಕಿಚ್ಚನ ಮನೆಗೆ ಅಡುಗೆ ಪಾರ್ಸಲ್‌. ಭಾವುಕ ಪತ್ರ ಓದಿ ಪ್ರಿಯಾ ಸುದೀಪ್ ಟ್ಟೀಟ್....  

ಬಿಗ್‌ಬಾಸ್‌ ಸೀಸನ್‌ 8, 50ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಬಿಬಿ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸುದೀಪ್ ಈ ವಾರ ನಿಮ್ಮ ಜೊತೆ ಮಾತನಾಡುವುದಿಲ್ಲ. ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ, ಎಂದು ಕೇಳುತ್ತಿದ್ದಂತೆ ಆತಂಕ ಮುಗಿಲು ಮುಟ್ಟಿತ್ತು, ಭಾವುಕರಾದರು. ದೀಪಣ್ಣನಿಗೆ ಏನಾಯ್ತು ಹೇಳಿ ಪ್ಲೀಸ್ ಎಂದು ಸ್ಪರ್ಧಿಗಳು ಮನವಿ ಮಾಡಿಕೊಂಡರು. 

ಥಿಯೇಟರ್‌ಗಳಲ್ಲಿ ಶೇ.50ರಷ್ಟು ಸೀಟಿಗೆ ಮಾತ್ರ ಅವಕಾಶಕ್ಕೆ ಕಿಚ್ಚ ಸುದೀಪ್ ಬೇಸರ!

ಹೊರ ಪ್ರಪಂಚದ ಅರಿವಿಲ್ಲ. ವಾಸ ಮಾಡುತ್ತಿರುವ ಸ್ಪರ್ಧಿಗಳನ್ನು ತಿದ್ದಿ ತೀಡೀ ಪ್ರೋತ್ಸಾಹ ನೀಡಲು ವಾರ ವಾರ ಟಿವಿಯಲ್ಲಿ ಬರುತ್ತಿದ್ದ ವ್ಯಕ್ತಿ ಸುದೀಪ್. ಮನೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಕುಟುಂಬದವರಂತೆ ಎಂದು ಭಾವಿಸುತ್ತಿದ್ದ ಸುದೀಪ್‌ ಅವರಿಗೆ ಹೀಗಾಗಿದೆ ಎಂದು ತಿಳಿಯುತ್ತಿದ್ದಂತೆ ಪ್ರತಿಯೊಬ್ಬ ಸ್ಪರ್ಧಿಯೂ ವಿಚಲಿತರಾದರು. ಎಲ್ಲರೂ ಒಟ್ಟಾಗಿ ಪತ್ರ ಬರೆದು, ಅಡುಗೆ ಮಾಡಿ ಕಳುಹಿಸೋಣ ಎಂದು ನಿರ್ಧರಿಸಿದ್ದರು. ಮೂರು ಬಗೆಯ ಅಡುಗೆ ಹಾಗೂ ಪತ್ರ ಬರೆದು ಸ್ಟೋರ್‌ ರೂಮ್‌ನಲ್ಲಿ ಇಡಲಾಗಿತ್ತು. 

ಪತ್ರ ಹಾಗೂ ಆಹಾರ ಸ್ವೀಕರಿಸಿದ ಸುದೀಪ್‌, ವಾಯ್ಸ್‌ ಮೆಸೇಜ್‌ ಕಳುಹಿಸುವ ಮೂಲಕ ಸ್ಪರ್ಧಿಗಳ ಜೊತೆ ಮಾತನಾಡಿದ್ದರು. 'ನಿಮ್ಮ ಪ್ರೀತಿಗೆ ನಾನು ಆಬಾರಿ. ಪದಗಳಲ್ಲಿ ವರ್ಣಿಸಲು ಅಸಾಧ್ಯ. ಎರಡು ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಶೀಘ್ರವೇ ನಿಮ್ಮ ಜೊತೆ ಮತ್ತೆ ಮಾತನಾಡುವೆ,' ಎಂದು ಸುದೀಪ್ ಹೇಳಿದ್ದಾರೆ. ಸುದೀಪ್‌ಗೆ ಸ್ಪರ್ಧಿಗಳು ತೋರಿಸಿರುವ ಪ್ರೀತಿ ಬಗ್ಗೆ ಪ್ರಿಯಾ ಟ್ಟೀಟ್ ಮಾಡಿದ್ದಾರೆ. 'ಭಾವುಕ ಪತ್ರ ಹಾಗೂ ರುಚಿಕರ ಅಡುಗೆ ಕಳುಹಿಸಿದ ಕಲರ್ಸ್‌ ಕನ್ನಡ ಹಾಗೂ ಪ್ರತಿಯೊಬ್ಬ ಬಿಗ್‌ ಬಾಸ್‌ ಸ್ಪರ್ಧಿಗೂ ಧನ್ಯವಾದಗಳು. ಸುದೀಪ್ ಚೇತರಿಸಿಕೊಳ್ಳುತ್ತಿದ್ದಾರೆ, ಗುಣಮುಖರಾಗಿ ಶೀಘ್ರದಲ್ಲಿಯೇ ನಿಮ್ಮ ಜೊತೆ ಮಾತನಾಡಲಿದ್ದಾರೆ,' ಎಂದು ಸುದೀಪ್ ಪತ್ನಿ ಪ್ರಿಯಾ ಕೂಡ ಟ್ಟೀಟ್ ಮಾಡಿದ್ದಾರೆ.

ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ; ಸುದೀಪ್ ಸಂಸ್ಥೆ ಮಹತ್ವದ ಕೆಲಸ! 

ಅನಾರೋಗ್ಯದಿಂದ ಬಳಲುತ್ತಿರುವ ಕಿಚ್ಚ ಸುದೀಪ್ ಅವರಿಗೆ ವೈದ್ಯರು ಎರಡು ವಾರಗಳ ರೆಸ್ಟ್ ಹೇಳಿದ್ದಾರೆ. ಈ ಕಾರಣದಿಂದ ಬಿಗ್‌ಬಾಸ್‌ನ ವೀಕೆಂಡ್ ವಿಥ್ ಕಿಚ್ಚದಲ್ಲಿ ಈ ವಾರ ಸುದೀಪ್ ಕಾಣಿಸಿಕೊಳ್ಳಲಿಲ್ಲ. ಎಲಿಮನೇಷನ್ ರೌಂಡನ್ನು ಕಲರ್ಸ್ ಕನ್ನಡದ ಕ್ರಿಯೇಟಿವ್ ತಂಡವೇ ಮಾಡಿ ಮುಗಿಸಿದೆ. ಈ ವಾರ ಗಾಯಕ ವಿಶ್ವನಾಥ್ ಮನೆಯಿಂದ ಹೊರ ಬಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!