
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 8 ಅದೇನೋ ವಿಚಿತ್ರವಾಗಿದೆ. ಒಬ್ಬೊಬ್ಬ ಸ್ಪರ್ಧಿಯೂ ಒಂದೊಂದು ರೀತಿ. ಆಟ ಆಡುವಾಗ ಜಿದ್ದಿಗೆ ಜಿದ್ದು ಬೆಳೆಸುತ್ತಾರೆ. ಆದರೆ ಟಾಸ್ಕ್ ಮುಗಿದ ನಂತರ ನೀವು ಎಂದೂ ನೋಡಿರದ ಅತ್ಮೀಯತೆ ಅವರಲ್ಲಿ ಕಾಣಿಸುತ್ತದೆ.
ಕಳಪೆ ಹಣೆಪಟ್ಟಿ ಶಂಕರ್ ಅಶ್ವತ್ಥ್‌ಗೆ, ಗೋಲ್ಡ್ ಮೆಡಲ್ ವಿಶ್ವನಾಥ್‌ಗೆ; ಬೇಕಿತ್ತಾ ಇದೆಲ್ಲಾ?
ಐದನೇ ವಾರದ ಕ್ಯಾಪ್ಟನ್ ಆಯ್ಕೆ ಮಾಡಲು ಚದುರಂಗದ ಆಟ ಶುರುವಾಗಿತ್ತು. ಎದುರಾಳಿ ಕಪ್ಪು ತಂಡಕ್ಕೆ ಚೆಕ್‌ಮೇಟ್ ನೀಡಿ, ಬಿಳಿ ತಂಡ ಗೆದ್ದು ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆದರು. ಮೂರು ವಾರಗಳಿಂದ ಬಿಬಿ ನೀಡುತ್ತಿದ್ದ ಟಾಸ್ಕ್‌ಗಿಂತ ಈ ಬಾರಿ ಕ್ಯಾಪ್ಟನ್ ಟಾಸ್ಕ್ ವಿಭಿನ್ನವಾಗಿತ್ತು. ಯಾಕಂದ್ರೆ ಇದು ಶಬ್ಧವೇಧಿ ಆಟ....
ಹೌದು! ಸುಮಾರು 6 ಪ್ರಾಣಿ-ಪಕ್ಷಿಗಳ ಶಬ್ಧ ಕೇಳಿಸುತ್ತಾರೆ. ಯಾವ ಶಬ್ಧ ಮೊದಲು ಕೇಳಿತು, ಎಂದು ಸದಸ್ಯರು ಕ್ರಮವಾಗಿ ಪ್ರಾಣಿ ಪಕ್ಷಿಗಳ ಫೋಟೋಗಳನ್ನು ಜೋಡಿಸಬೇಕಿತ್ತು. 5 ಬಾರಿ ನಡೆದ ಸುತ್ತಿನಲ್ಲಿ 2 ಸಲ ಸರಿಯಾಗಿ ಜೋಡಿಸಿ ಗೆದ್ದ ವಿಶ್ವನಾಥ್ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಕಪ್ ಮುರಿದ ಮಂಜುಗೆ ಭಾರೀ ಶಿಕ್ಷೆ; ಪದೇ ಪದೆ 'RCB ಕಪ್ ನಮ್ದೇ' ಹೇಳಿದ್ದಕ್ಕೆ ಸಂಕಷ್ಟ?
ಮೊದಲೆರಡು ವಾರ ಶಮಂತ್ ಕ್ಯಾಪ್ಟನ್ ಅಗಿದ್ದರು, ಮೂರನೇ ವಾರ ರಾಜೀವ್, ನಾಲ್ಕನೇ ವಾರ ಅರವಿಂದ್, ಐದನೇ ವಾರ ವಿಶ್ವನಾಥ್. ಕ್ಯಾಪ್ಟನ್ ಆಗಿ ಹುಡುಗರು ಮಾತ್ರ ಆಯ್ಕೆ ಆಗುತ್ತಿದ್ದಾರೆ, ಮನೆಯಿಂದ ಹೊರ ಹೋಗುತ್ತಿರುವುದು ಹೆಣ್ಣು ಮಕ್ಕಳು ಮಾತ್ರ. ಇದು ಅನ್ಯಾಯ ನಾವು ಬದಲಾಗಲೇಬೇಕು, ಎಂದು ಶುಭ ಪೂಂಜಾ, ನಿಧಿ ಸುಬ್ಬಯ್ಯ ಸೇರಿದಂತೆ ಇನ್ನಿತರೆ ಬಿಬಿ ಮನೆಯ ಹೆಣ್ಣು ಮಕ್ಕಳು ಗಂಭೀರವಾಗಿ ಚರ್ಚಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.