ಹೆಣ್ಣು ಮಗಳು ಅಂತ ನೋಡದೆ ರಾತ್ರಿ ಮನೆಯಿಂದ ಹೊರ ಹಾಕಿದ ಭಾವ. ನೋವು ಹೇಳಿಕೊಳ್ಳುತ್ತ ಕಣ್ಣೀರಿಟ್ಟ ನಟಿ...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಮಿಂಚುತ್ತಿರುವ ಆರಾಧನ್ ಉರ್ಫ್ ತನ್ವಿ ಬಾಲರಾಜ್ ಆನ್‌ಸ್ಕ್ರೀನ್‌ನಲ್ಲಿ ಎಷ್ಟೆಲ್ಲಾ ಕಷ್ಟಗಳನ್ನು ನೋಡಿದ್ದಾರೆ ಆಫ್‌ಸ್ಕ್ರೀನ್‌ನಲ್ಲೂ ಅಷ್ಟೆ ಕಷ್ಟಗಳನ್ನು ಎದುರಿಸಿದ್ದಾರೆ. ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಾಸವಿರುವ ನಟಿ ಒಮ್ಮೆ ಮಧ್ಯರಾತ್ರಿ ಮನೆಯಿಂದ ಹೊರ ನಡೆದಿರುವ ಘಟನೆ ಹಂಚಿಕೊಂಡಿದ್ದಾರೆ.
'ಡ್ಯಾನ್ಸ್‌ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದು ನನ್ನ ತಂದೆಗೆ ಚೂರು ಇಷ್ಟವಿಲ್ಲ.ಹಾಗಂತ ಡ್ಯಾನ್ಸ್ ಬಿಡುವುದಕ್ಕೆ ನನಗೆ ಇಷ್ಟವೇ ಇರಲಿಲ್ಲ ಅವರಿಗೆ ಬೇಸರ ಮಾಡುವ ಉದ್ದೇಶ ನನಗೆ ಇರಲಿಲ್ಲ ಆದರೂ ನೈಟ್ ಡ್ಯಾನ್ಸ್ ಶೂಟ್ ಮುಗಿಸಿಕೊಂಡು ಕೆಲವ ಮಾಡುತ್ತಿದ್ದೆ. ಒಂದು ವರ್ಷದ ಕೆಳಗೆ ನಾನು ಎರಡನೇ ಅಕ್ಕ ಮನೆಯಲ್ಲಿದ್ದೆ, ನನ್ನ ಭಾವ ಮಂದೆ ಚೆನ್ನಾಗಿ ನಗುತ್ತಾ ಮಾತನಾಡುತ್ತಿದ್ದರು ಆದರೆ ಹಿಂದೆ ಒಂದು ರೀತಿ ರಿಯಾಕ್ಟ್ ಮಾಡುತ್ತಿದ್ದರು. ನಾನು ಅವರ ಮನೆಯಲ್ಲಿದ್ದೆ ಅಕ್ಕ ಮತ್ತು ಅವರ ಮಕ್ಕಳಿಗೆ ಕ್ಲೋಸ್ ಆಗಿದ್ದೆ ಅಂತ ಅವರಿಗೆ ಇಷ್ಟನೇ ಇರಲಿಲ್ಲ. ಅಕ್ಕನ ಮಕ್ಕಳು ಅಂದ್ರೆ ನನಗೆ ತುಂಬಾನೇ ಇಷ್ಟ ಆದರೆ ಭಾವ ಇಷ್ಟ ಪಡದ ಕಾರಣ ನನ್ನ ಮುಂದೆ ಅಲ್ಲದೆ ಇದ್ದರೂ ಹಿಂದೆ ಅಕ್ಕನಿಗೆ ಹೇಳುತ್ತಿದ್ದರು ಅವಳು ಇರುವುದು ಬೇಡ ಎಂದು. ಒಂದು ವರ್ಷನೂ ಆಗಿಲ್ಲ 10 ತಿಂಗಳ ಹಿಂದೆ ನನ್ನ ಭಾವ ಫುಲ್ ಕುಡಿದು ಮನೆಗೆ ಬಂದಿದ್ದಾರೆ..ಆಗ ಅಕ್ಕ ಮತ್ತು ನಾನು ಒಂದು ಮದುವೆಗೆ ಹೋಗಿ ಬಂದ್ವಿ. ಆಗ ನೀನು ಮನೆಯಲ್ಲಿ ಇರಬೇಡ ಹಾಗೆ ಹೀಗೆ...ಅವರು ಬಳಸಿರುವ ಪದಗಳನ್ನು ಹೇಳುವುದಕ್ಕೆ ಆಗಲ್ಲ ಅಷ್ಟು ಕೆಟ್ಟದಾಗಿ ಬೈದಿದ್ದಾರೆ. ಈ ಘಟನೆ ನಡೆದಾಗ ಸುಮಾರು ರಾತ್ರಿ 12.30 ಆಗಿತ್ತು. ಅಕ್ಕನ ಮನೆಯಲ್ಲಿ ವಸ್ತುಗಳನ್ನು ತೆಗೆದುಕೊಂಡು ಗೇಟ್ ಬಳಿ ಬಂದೆ ಸೀದಾ ದೊಡ್ಡಕ್ಕ ಮನೆಗೆ ಹೋಗಿರುವೆ' ಎಂದು ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ತನ್ವಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.
ಆ ತರ ಅವಕಾಶಗಳು ಬಂದಿತ್ತು ಎಲ್ಲಾ ಕಿತ್ಕೊಂಡ್ಬಿಟ್ರು: ವಡಿವೇಲು ವಿರುದ್ಧ ಪ್ರೇಮಾ ಪ್ರಿಯಾ ಗಂಭೀರ ಆರೋಪ!
ತನ್ವಿ ತಂದೆ ಮಂಡ್ಯದಲ್ಲಿ ಕಾಂಟ್ರ್ಯಾಕ್ಟ್ ಕೆಲಸ ಮಾಡುತ್ತಾರೆ, ತಾಯಿ ಹೂವ ಕಟ್ಟಿ ಮಾರುತ್ತಾರೆ. ಮೂವರು ಹೆಣ್ಣುಮಕ್ಕಳಲ್ಲಿ ತನ್ವಿ ಕೊನೆಯವರು. ಇಬ್ಬರು ಅಕ್ಕಂದಿರು ಮದುವೆಯಾಗಿ ಬೆಂಗಳೂರಿನಲ್ಲಿದ್ದಾರೆ. ತನ್ವಿ ಮೊದಲು ಕಿರಿ ಅಕ್ಕನ ಮನೆಯಲ್ಲಿದ್ದರು ಈಗ ದೊಡ್ಡಕ್ಕನ ಮನೆಯಲ್ಲಿದ್ದಾರೆ. ಶೂಟಿಂಗ್ ಬ್ರೇಕ್ ಸಿಕ್ಕಾಗ ಮಂಡ್ಯದಲ್ಲಿರುತ್ತಾರಂತೆ. ಗಿಣಿರಾಮಾ ಸೀರಿಯಲ್‌ನ ವಿಶೇಷ ಎಪಿಡೋಸ್ ಶೂಟಿಂಗ್ ಸಮಯದಲ್ಲಿ ಪ್ರಮುಖ ಪಾತ್ರಧಾರಿಗಳಿಗೆ ತನ್ವಿ ಡ್ಯಾನ್ಸ್ ಹೇಳಿಕೊಡುತ್ತಿದ್ದರು. ಆಗ ಸೀರಿಲ್ EP ಕುಳಿತುಕೊಂಡು ನೋಡುತ್ತಿದ್ದರಂತೆ. ಅಲ್ಲಿ ಅವರ ಕಣ್ಣಿಗೆ ತನ್ವಿ ಕಾಣಿಸಿಕೊಂಡು ಫೋಟೋ ಪಡೆದು ಆಡಿಷನ್ ಮಾಡಿ ಧಾರಾವಾಹಿಗೆ ಆಯ್ಕೆ ಮಾಡಿದ್ದಾರೆ.
ನೋಡ್ರೋ...ಎರಡು ಕಣ್ಣು ಸಾಲದು; ಹುಡುಗರ ನಿದ್ದೆಗೆಡಿಸಿತ್ತು ನಟಿ ನಮ್ರತಾ ಗೌಡ ಹಾಟ್ ಲುಕ್ !
ಆರಾಧನಾ ಪಾತ್ರಕ್ಕೆ ಅದೆಷ್ಟೋ ಮಿಡಲ್ ಕ್ಲಾಸ್ ಹೆಣ್ಣು ಮಕ್ಕಳು ಕನೆಕ್ಟ್ ಮಾಡಿಕೊಳ್ಳುತ್ತಾರೆ. ತೆರೆ ಮೇಲೆ ಆಕೆ ಕಷ್ಟ ಪಡುತ್ತಿದ್ದರೆ ನೋಡುತ್ತಿರುವವರು ಕಣ್ಣೀರಿಡುತ್ತಾರೆ. ಅದೆಷ್ಟೋ ಮಂದಿ ಆರಾಧನಾ ಖುಷಿಯಾಗಿ ಬೇಕು ನಮ್ಮನೆ ಮಗಳು ಎನ್ನುವ ರೀತಿ ಮಾತನಾಡುತ್ತಾರೆ.