ಆ್ಯಂಕರ್ ಅನುಶ್ರೀಗೆ ಇಷ್ಟು ದಿನ ಮದುವೆ ಯಾವಾಗ ಅಂತಿದ್ದ ಫ್ಯಾನ್ಸ್​ , ಈಗ ಸಿನಿಮಾ ಯಾವಾಗ ಕೇಳ್ತಿದ್ದಾರೆ!

Published : Aug 01, 2023, 04:03 PM IST
ಆ್ಯಂಕರ್ ಅನುಶ್ರೀಗೆ ಇಷ್ಟು ದಿನ ಮದುವೆ ಯಾವಾಗ ಅಂತಿದ್ದ ಫ್ಯಾನ್ಸ್​ , ಈಗ ಸಿನಿಮಾ ಯಾವಾಗ ಕೇಳ್ತಿದ್ದಾರೆ!

ಸಾರಾಂಶ

ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದ ಅನುಶ್ರೀ ಅವರನ್ನು ಸಿನಿಮಾಗೆ ಯಾವಾಗ ಬರ್ತೀರಾ ಮೇಡಂ ಎಂದು ಪ್ರಶ್ನಿಸುತ್ತಿದ್ದಾರೆ ಫ್ಯಾನ್ಸ್​  

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುತ್ತಾರೆ  ಅನುಶ್ರೀ. ಆಗಾಗ್ಗೆ ಇನ್​ಸ್ಟಾಗ್ರಾಮ್​  (Instagram) ಲೈವ್​ಗೆ ಬಂದು ತಮ್ಮ ಫ್ಯಾನ್ಸ್ ಜೊತೆ ನಟಿ ಆಗ್ಗಾಗ್ಗೆ  ಮಾತನಾಡುತ್ತಾ ಇರುತ್ತಾರೆ. ಇಂದು ಕೂಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದು, ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ತಂಡದ ಜೊತೆ ಮಾತನಾಡಿದ್ದಾರೆ.  ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ಹೊಗಳಿರುವ ಅವರು, ಈ ಚಿತ್ರ ಎಲ್ಲರ ಮನಸ್ಸನ್ನು ಗೆಲ್ಲುತ್ತಾ ಇದೆ. ದೀಪಾವಳಿ ಹಬ್ಬದ ರೀತಿ ಇದರ ಘಮಲು ಹರಡುತ್ತಾ ಇದೆ ಎಂದಿದ್ದಾರೆ.  ಜೊತೆಗೆ ಅದರಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರನ್ನೂ ಲೈವ್​ನಲ್ಲಿ ಮಾತನಾಡಿಸಿದ್ದಾರೆ. ತಮಗೂ ಚಿತ್ರರಂಗದಲ್ಲಿ ನಟಿಸಲು ಅವಕಾಶ ಸಿಕ್ಕಿರುವ ಬಗ್ಗೆ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಚಿತ್ರತಂಡದ ಹಲವರು ಅನುಭವ ಶೇರ್​ ಮಾಡಿಕೊಂಡಿದ್ದಾರೆ.

ಈ ವಿಡಿಯೋಗೆ ಸಕತ್​ ರೆಸ್ಪಾನ್ಸ್ ಬರುತ್ತಿದೆ. ಹಲವರು ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಬಗ್ಗೆ ಮಾತನಾಡಿದರೆ, ಇನ್ನು ಕೆಲವರು ಅನುಶ್ರೀ ಅವರ ಕುರಿತು ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಏನಾದರೂ ಕೇಳಬಹುದು ಎಂದು ಅನುಶ್ರೀ ಹೇಳುತ್ತಾರೆ. ಈ ಬಾರಿ ಸಹಸ್ರಾರು ಮಂದಿ ಪ್ರಶ್ನೆ  ಕೇಳಿದ್ದನ್ನು ತೋರಿಸಿದ ಅನುಶ್ರೀ ಇಷ್ಟೂ ಮಂದಿಯ ಪ್ರಶ್ನೆಗೆ ಉತ್ತರಿಸುತ್ತಾ ಹೋದರೆ ಒಂದು ದಿನವೂ ಸಾಕಾಗಲ್ಲ ಎಂದಿದ್ದಾರೆ. ಇದೇ ವೇಳೆ ಅನುಶ್ರೀ ಅವರು ಸಿನಿಮಾದಲ್ಲಿ ನಟಿಸುವ ಬಗ್ಗೆ ಫ್ಯಾನ್ ಒಬ್ಬರು ಪ್ರಶ್ನಿಸಿದ್ದಾರೆ. ಅನುಶ್ರೀ ಮೇಡಂ ನೀವು ಮತ್ತೇ ಯಾವಾಗ ಸಿನಿಮಾ ಮಾಡುತ್ತೀರಿ ನಿಮ್ಮ ನಟನೆ ಡಾನ್ಸ್ ನೀವು ಮಾತಾಡುವ ಶೈಲಿ ನಂಗೆ ತುಂಬಾ ಇಷ್ಟ.. ನಿಮ್ಮ ಕನಸು ನನಸಾಗಲಿ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ... ಎಂದಿದ್ದಾರೆ. ಪ್ರತಿಸಲ ಅನುಶ್ರೀ ಅವರಿಗೂ ಈ ಪ್ರಶ್ನೆ ಎದುರಾಗುತ್ತದೆ. ಅನುಶ್ರೀಯವರು ಸಿನಿಮಾದಲ್ಲಿ ನಟಿಸಿದ್ದು ಕಡಿಮೆ. ಆ್ಯಂಕರ್​ ಆಗಿಯೇ ಸಕತ್​ ಫೇಮಸ್​  ಆದವರು. ಆದ್ದರಿಂದ ಅವರ ಫ್ಯಾನ್ಸ್​ ಅವರನ್ನು ಸಿನಿಮಾದಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ.

ಪಟಪಟ ಮಾತನಾಡುವ ಸಿಕ್ರೆ ಸಾಕಾ? ಮದ್ವೆಯಾಗುವ ಹುಡುಗನ ಬಗ್ಗೆ ಅನುಶ್ರೀ ಹೇಳಿದ್ದೇನು?

ಅದೇ ರೀತಿ ಪ್ರತಿಸಲವೂ ಅನುಶ್ರೀಯವರಿಗೆ ಎದುರಾಗುವ ಪ್ರಶ್ನೆಯೆಂದರೆ ಅದು ಮದುವೆಯ ಕುರಿತು. ಮದುವೆಯ ಪ್ರಶ್ನೆ ನಂ.1 ಸ್ಥಾನ ಪಡೆದುಕೊಂಡರೆ, 2ನೇ ಪ್ರಶ್ನೆ ಇರುವುದು ಸಿನಿಮಾ ಕುರಿತು.  ಇದಾಗಲೇ ನಟಿ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ನಟಿ ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ನಿರೂಪಕಿ ಅನುಶ್ರೀ (Anchor Anushree) ಇನ್ನಾದರೂ ತಮ್ಮ ಮದುವೆಯ ಬಗ್ಗೆ ಪ್ರಶ್ನೆ ಮಾಡೋದನ್ನು ನಿಲ್ಲಿಸಿ ಎನ್ನೋ ಅರ್ಥದಲ್ಲಿ ಹೇಳಿದ್ದರು. ಮದುವೆ ಮಾಡಿಕೊಳ್ಳುವ ತುಂಬಾ ಸಮಯವಿದೆ. ಮೊದಲು ಕೆಲಸ ಮಾಡೋಣ ಎಂದಿದ್ದ ಅವರು,  ಮದುವೆ ಅನ್ನೋದು ಒಂದು ಸುಂದರ ಅನುಭವ. ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ಈ ಹಿಂದೆ ಹೇಳಿದ್ದರು. 

ಮದುವೆ ಅನ್ನೋದು ಬ್ಯೂಟಿಫುಲ್ (Beautiful) ಅನುಭವ, ಮದುವೆ ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ ,ಈ ಸಂಬಂಧದ ಒಳಗೆ ಎರಡು ಜೀವಗಳು ಹೊಕ್ಕಬೇಕು. ಇದಕ್ಕೆಲ್ಲಾ ಸ್ವಲ್ಪ ಟೈಮ್ ಬೇಕು. ಸೋ ಸದ್ಯ ಪ್ಲೀಸ್ ನನ್ನ ಮದುವೆ ಬಗ್ಗೆ ಮಾತ್ರ ಕೇಳ್ಬೇಡಿ ಎಂದೂ ಕೆಲವೊಮ್ಮೆ ಅನುಶ್ರೀ ತಮ್ಮ ಅಭಿಮಾನಿಗಳಿಗೆ ನೇರವಾಗಿಯೇ ಹೇಳಿದ್ದುಂಟು. ಇದೇ ವಿಷಯದ ಬಗ್ಗೆ ಮಾತನಾಡುವಾಗ ಹಿಂದೊಮ್ಮೆ ಭಾವುಕರಾಗಿದ್ದ ನಟಿ,  ನನ್ನನ್ನು ಯಾರಾದ್ರೂ ಬಿಟ್ಟು ಹೋಗ್ತಾರಾ ಅನ್ನೋ ಭಯವಿದೆ. ನನಗೆ ಆ ದುಃಖವನ್ನು ತಡೆಯುವ ಶಕ್ತಿ ಇಲ್ಲ ಎಂದಿದ್ದರು. ಪ್ಲೀಸ್ ಇಂತಹ ವಿಚಾರವನ್ನು ಕೇಳ್ಬೇಡಿ ನಾನು ಭಾವುಕರಾಗ್ತೀನಿ ಎಂದೂ ಹೇಳಿದ್ದರು. ಆದರೆ ಈ ಬಾರಿ ಮದುವೆಯ ಪ್ರಶ್ನೆಯನ್ನು ಫ್ಯಾನ್ಸ್​ ಯಾಕೋ ಕಡಿಮೆ ಮಾಡಿದಂತಿದೆ. ಬೇರೆ ಬೇರೆ ವಿಷಯಗಳ ಕುರಿತು ಮಾತನಾಡಿದ್ದಾರೆ.  

ಟೊಮ್ಯಾಟೋ ಮಾರೋ ಹುಡ್ಗಿ ಅಲ್ವಾ.. ಸ್ಕೂಲ್ ಫೋಟೋ ಹಂಚಿಕೊಂಡ ಅನುಶ್ರೀಗೆ ಕಾಮೆಂಟ್ಸ್‌ ಸುರಿಮಳೆ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!