ಭಾಗ್ಯಲಕ್ಷ್ಮೀ ಸೀರಿಯಲ್ ಟಿಆರ್‌ಪಿಯಲ್ಲೂ ವೀಕ್ಷಕರ ಮನ ಗೆಲ್ಲವಲ್ಲೂ ಯಶಸ್ವಿ ಆಗುತ್ತಿದೆ. ಇದರಲ್ಲಿ ಕುಸುಮ ಪಾತ್ರ ನಿರ್ವಹಿಸಿರೋ ಪದ್ಮಜಾ ರಾವ್ ನಟನೆಯ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಇದಕ್ಕೆ ಪದ್ಮಜಾ ರಾವ್ ಫುಲ್ ಖುಷ್ ಆಗಿದ್ದಾರೆ.
ಕಲರ್ಸ್ ಕನ್ನಡ ಚಾನಲ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಇದರ ಮುಂದುವರಿದ ಕವಲಿನ ಹಾಗೆ ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಮೊದಲ ಭಾಗದಲ್ಲಿ ಬರುವ ಭಾಗ್ಯ ಕಥೆಯಲ್ಲಿ ಅತ್ತೆ ಕುಸುಮಾಳದ್ದೂ ಗಟ್ಟಿ ಪಾತ್ರ. ಈ ಪಾತ್ರವನ್ನು ನಿರ್ವಹಿಸುತ್ತಿರುವವರು ಹಿರಿಯ ಕಲಾವಿದೆ ಪದ್ಮಜಾ ರಾವ್. ಈ ಪಾತ್ರದಲ್ಲಿ ಅವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಪಾತ್ರಕ್ಕೆ ಬಹಳ ಯೋಗ್ಯ ಕಲಾವಿದೆಯನ್ನೇ ಆರಿಸಿದ್ದೀರಿ ಅನ್ನೋ ಮಾತುಗಳನ್ನು ಜನ ಆಡಿಕೊಳ್ಳುತ್ತಿದ್ದಾರೆ.
ಇತ್ತ ಸೀರಿಯಲ್‌ನಲ್ಲಿ ತಾಂಡವ್ ಪತ್ನಿಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಅದಕ್ಕು ಮೊದಲು ಭಾಗ್ಯಳ ಮಾವ ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಮಾವನ ಪ್ರಾಣ ಉಳಿಸಲು ಭಾಗ್ಯ 50 ಸಾವಿರ ಹಣ ತೆಗೆದುಕೊಂಡಿರುತ್ತಾಳೆ. ಆ ದುಡ್ಡಿನ ಕಾರಣಕ್ಕೆ ತಾಂಡವ್ ಪೊಲೀಸ್ ಸ್ಟೇಶನ್‍ನಲ್ಲಿ ಇದ್ದ. ಭಾಗ್ಯ ರೌಡಿ ಬಳಿ ಹೋಗಿ ಬೇಡಿಕೊಂಡು ಗಂಡನನ್ನು ಬಿಡಿಸಿದ್ದಾಳೆ.
ಇತ್ತ ತಾಂಡವ್ ಪೊಲೀಸ್ ಸ್ಟೇಶನ್‌ನಿಂದ ಬಿಡುಗಡೆಯಾಗಿ ಆಚೆ ಬಂದಿದ್ದಾನೆ. ನನ್ನ ಹೆಂಡ್ತಿ ಜೊತೆ ಮಾತನಾಡಬೇಕು. ಆಚೆ ಹೋಗ್ತೀವಿ ಎಂದು ಹೇಳಿ ಆಕೆಯನ್ನು ಕರೆದುಕೊಂಡು ಹೊರಬಂದಿದ್ದಾನೆ ಅಲ್ಲೇ ಇದ್ದ ಶ್ರೇಷ್ಠಾ ಎಲ್ಲಿಗೆ ತಾಂಡವ್ ಎಂದು ಕೇಳ್ತಾಳೆ. ಅದಕ್ಕೆ ನನ್ನ ಇಷ್ಟವಾದ ಜಾಗಕ್ಕೆ ನನ್ನ ಹೆಂಡ್ತಿಯನ್ನು ಕರೆದುಕೊಂಡು ಹೋಗ್ತೇನೆ ಎಂದು ಹೇಳಿದ್ದಾನೆ. ಭಾಗ್ಯಾಳ ಕೈ ಹಿಡಿದು ಕರೆದುಕೊಂಡು ಹೋಗಿದ್ದಾನೆ. ಇದು ಶ್ರೇಷ್ಠಾ ಬೇಸರ ತಂದಿದೆ. ಇನ್ನೊಂದೆಡೆ ತಾಂಡವ್ ಭಾಗ್ಯ ಜೊತೆ ಮನಬಿಚ್ಚಿ ಮಾತನಾಡೋ ಹಾಗೆ ನಟಿಸ್ತಾನೆ. ಅದನ್ನು ನೋಡಿ ಭಾಗ್ಯಳಿಗೂ ಖುಷಿ ಆಗಿದೆ. ಆದರೆ ಸ್ವಲ್ಪದರಲ್ಲೇ ಆತನ ನಿಜ ಮುಖ ತಿಳಿದಿದೆ.
ಬರ್ತ್ ಡೇ ಕೇಕ್ ಮೂಲಕ ರಾಮಚಾರಿ -ಚಾರು ಮದುವೆ ಗುಟ್ಟು ರಟ್ಟಾಗುತ್ತಾ?
ತಾಂಡವ್ ತಾಯಿ, ಭಾಗ್ಯ ಅತ್ತೆ ಕುಸುಮಾ ಗಟ್ಟಿಗಿತ್ತಿ. ಜೋರು ಮಾತಿನ ಕಟುವಾದ ಹೆಂಗಸಾದರೂ ತನ್ನ ಸೊಸೆಯ ಒಳ್ಳೆತನಕ್ಕೆ ಬೆಂಗಾವಲಾಗಿ ನಿಲ್ಲುವವಳು. ಈ ಹಿಂದೆ ಮಗ ಹಾದಿ ತಪ್ಪಿದಾಗ ಆತನನ್ನು ಪ್ರಶ್ನೆ ಮಾಡಿದ್ದಾಳೆಯೆ ಹೊರತು ತನ್ನ ಸೊಸೆ ಭಾಗ್ಯಳ ಮೇಲೆ ಏನನ್ನೂ ಗೂಬೆ ಕೂರಿಸಿಲ್ಲ. ಬದಲಾಗಿ ಆಕೆಯ ಒಳ್ಳೆತನವನ್ನು, ಮುಗ್ಧತೆಯನ್ನು ಎತ್ತಿ ಹಿಡಿದಿದ್ದಾಳೆ. ತನ್ನ ಮಗನ ಸುಳ್ಳು, ಕಪಟಗಳನ್ನು ಕಟುವಾಗಿ ಪ್ರಶ್ನೆ ಮಾಡಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಇತ್ತ ತಾಂಡವ್ ಭಾಗ್ಯಳನ್ನು ತೊರೆಯುತ್ತಿದ್ದಾನೆ. ಅಮ್ಮನ ಅಂದರೆ ಕುಸುಮಾ ಬಲವಂತಕ್ಕೆ ಆಕೆಯನ್ನು ಮದುವೆ ಆಗಿರೋದಾಗಿ ಹೇಳಿ, ನಿನ್ನ ಜೊತೆ ಸಂಸಾರ ಮಾಡಲು ಇಷ್ಟ ಇಲ್ಲ, ಈನು ನನ್ನ ಬಿಟ್ಟು ಹೋಗು ಅಂದಿದ್ದಾನೆ. ನಡು ದಾರಿಯಲ್ಲೇ ಸುರಿವ ಮಳೆಯಲ್ಲಿ ಭಾಗ್ಯಾಳನ್ನು ಬಿಟ್ಟು ಹೋಗಿದ್ದಾನೆ. ದಿಕ್ಕೇ ತೋಚದೆ ನಿಂತಿರೋ ಭಾಗ್ಯ, ಇನ್ನೊಂದೆಡೆ ಭಾಗ್ಯನ ಬಗ್ಗೆ ವಿಚಾರಿಸಿಕೊಂಡು ಬರೋ ಅತ್ತೆ. ಇವರಿಬ್ಬರ ಪಾತ್ರವನ್ನು ಸೀರಿಯಲ್ಲಿನಲ್ಲಿ ಸೊಗಸಾಗಿ ತಂದಿದ್ದಾರೆ.
ಪದ್ಮಜಾ ರಾವ್ ತಾಂಡವನ ಅಮ್ಮನಾದ ಕುಸುಮಾ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸುತ್ತಿದ್ದಾರೆ. ಅವರು ಈ ಥರದ ಪಾತ್ರ ಮಾಡಿಲ್ಲವಂತೆ. ಇದೀಗ ಮಾದರಿ ತಾಯಿಯಾಗಿ ಪದ್ಮಜಾ ಅಭಿಮಾನಿಗಳ ಹೃದಯವನ್ನು(Heart) ಗೆದ್ದಿದ್ದಾರೆ. ಹಾಗೆ ನೋಡಿದರೆ ಅವರಿಗೆ ಆರಂಭದಲ್ಲಿ, ಈ ಪಾತ್ರದ ಮೇಲೆ ಯಾವುದೇ ರೀತಿಯ ಉತ್ಸಾಹ ಇರಲಿಲ್ಲವಂತೆ. ಯಾವಾಗ ಚಿತ್ರೀಕರಣದಲ್ಲಿ ಪಾಲ್ಗೊಂಡರೋ ಆವಾಗ ಎಲ್ಲ ಬದಲಾಯಿತು. ಈ ಪಾತ್ರದ ಸಂಕೀರ್ಣತೆಯನ್ನು, ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳೋಹಾಗಾಯ್ತು ಎಂದು ಹೆಮ್ಮೆಯಿಂದ ಹೇಳುತ್ತಾರೆ ಪದ್ಮಜಾ ರಾವ್. 'ಕುಸುಮಾಳದ್ದು ಗಟ್ಟಿತನ ಮತ್ತು ಕಾಮ್‌ನೆಸ್(Calmness) ಬೆರೆತ ಪಾತ್ರ. ಈ ಪಾತ್ರ ಆಸಕ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುವುದರೊಂದಿಗೆ ನಟನೆಯ ಕೌಶಲವನ್ನು ಪ್ರದರ್ಶಿಸಲು ಒಂದು ಉತ್ತಮ ಅವಕಾಶ ದೊರೆತಂತಾಗಿದೆ ಎಂದು ಖುಷಿಯನ್ನು ವ್ಯಕ್ತಪಡಿಸುತ್ತಾರೆ ಪದ್ಮಜಾ. ಅವರು ಇಲ್ಲಿಯವರೆಗೆ ನಿರ್ವಹಿಸಿದ ಎಲ್ಲಾ ಪಾತ್ರಗಳಿಗಿಂತ ಇದೊಂದು ವಿಭಿನ್ನ(Different) ಪಾತ್ರವಾಗಿದೆ ಅನ್ನೋದು ಅವರ ಮನದಾಳದ ಮಾತು.
ಅಂತರಪಟದ ರವಿ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರದ ನಾಯಕ ಗೊತ್ತಾ?