ನನ್ನ ಅವನ ನಡುವೆ ಕುಚ್‌ಕುಚ್‌ ಏನಿಲ್ಲ, ಸ್ನೇಹಿತರಷ್ಟೇ; ಅನುಷಾ ರೈ ಮಾತಿಗೆ ಏನಂತಿದೆ ದೊಡ್ಮನೆ?

By Shriram Bhat  |  First Published Nov 9, 2024, 8:38 PM IST

ಬಿಗ್ ಬಾಸ್ ಮನೆ ಎಂದರೆ ಅಲ್ಲಿ ಯಾರಾದರೂ ಒಂದು ಅಥವಾ ಎರಡು ಜೋಡಿಗಳು ಇರಲೇಬೇಕು ಎಂಬ ಅಲಿಖಿತ ನಿಯಮವೇನೂ ಇಲ್ಲ. ಆದರೆ, ಪ್ರತಿ ಸೀಸನ್‌ನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗೆ ಅಥವಾ ನಿಜವಾಗಿಯೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿ..


ಅನುಷಾ ರೈ (Anusha rai) ಹಾಗೂ ಧರ್ಮ ಕೀರ್ತಿರಾಜ್ (Dharma Keerthiraj) ಅವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಪರಸ್ಪರ ಕ್ಲೋಸ್ ಆಗಿದ್ದಾರೆ. ಇದು ಅಲ್ಲಿ ಹಲವರ ಕಣ್ಣು ಕುಕ್ಕುತ್ತಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಅವರಿಬ್ಬರನ್ನೂ ನಾಮಿನೇಟ್ ಮಾಡುವ ಕೆಲಸ ಕೂಡ ನಡೆದಿದೆ. ಈ ಸಂಗತಿ ಅನುಷಾ ರೈಗೆ ಬೇಸರ ಮೂಡಿಸಿದ್ದು, ಇದಕ್ಕೆ ಸ್ಪಷ್ಟನೆ ಕೊಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಆದರೆ ಕ್ಲಾರಿಟಿ ಕೊಟ್ಟಷ್ಟೂ ಕೂಡ ಬಿಗ್ ಮನೆಯಲ್ಲಿ ಉಳಿದವರಿಗೆ ಸಂಶಯ ಜಾಸ್ತಿಯೇ ಆಗುತ್ತಿದೆ. ಇದು ಅನುಷಾಗೆ ಮತ್ತಷ್ಟು ಆತಂಕ ತಂದಿದೆ. 

ಈ ಬಗ್ಗೆ ಮಾತನಾಡಿರುವ ಅನುಷಾ ರೈ 'ನಾವಿಬ್ಬರೂ ಫ್ರಂಡ್ಸ್ ಅಷ್ಟೇ. ಯಾಕೆ ಎಲ್ಲರೂ ನಮ್ಮನ್ನು ಬೇರೆ ರೀತಿಯಲ್ಲಿ ನೋಡುತ್ತೀರಿ? ಇದೇ ವಿಚಾರವನ್ನು ಅನುಷಾ ವೀಕೆಂಡ್‌ ಪಂಚಾಯಿತಿಯಲ್ಲಿ ಹೇಳಿ, ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದಾರೆ. ಈಗ ಎಲ್ಲರೂ ಇದೇ ಕಾರಣಕ್ಕೆ 'ಕಿಚ್ಚನಿಂದ ಹೇಳಿಸಿಕೊಂಡ ಪಾಠವನ್ನು ಅನುಷಾ ಕಲಿತಿಲ್ವಾ' ಅಂತ ಕಾಲೆಳೆಯುತ್ತಿದ್ದಾರೆ. 

Tap to resize

Latest Videos

undefined

ಟಾಪ್ ಸ್ಟಾರ್ ನಟಿ ಪಟ್ಟಕ್ಕೇರಿದ ಈ ಸೋಡಾಬುಡ್ಡಿ ಹುಡುಗಿ ಯಾರೆಂದು ಹೇಳಬಲ್ಲಿರಾ?

ಬಿಗ್ ಬಾಸ್ ಮನೆ ಎಂದರೆ ಅಲ್ಲಿ ಯಾರಾದರೂ ಒಂದು ಅಥವಾ ಎರಡು ಜೋಡಿಗಳು ಇರಲೇಬೇಕು ಎಂಬ ಅಲಿಖಿತ ನಿಯಮವೇನೂ ಇಲ್ಲ. ಆದರೆ, ಪ್ರತಿ ಸೀಸನ್‌ನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗೆ ಅಥವಾ ನಿಜವಾಗಿಯೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿ ಕ್ರಶ್, ಲವ್ ಆಗುತ್ತದೆ. ಅದು ಕೆಲವೊಮ್ಮೆ ಮದುವೆಯವರೆಗೂ ಹೋಗುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ನಾವು ಕಳೆದ ಕೆಲವು ಸೀಸನ್‌ಗಳನ್ನು ಉದಾಹರಿಸಬಹುದು. 

ಅದೇನೇ ಇರಲಿ, ಸದ್ಯಕ್ಕೆ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ 'ಲವ್ ಜೋಡಿ' ಎಂದು ಲಾಯರ್ ಜಗದೀಶ್ ಹಾಗೂ ಹಂಸ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ಆದರೆ, ದೊಡ್ಮನೆಯಿಂದ ಹೊರಗೆ ಬಂದಿರುವ ಲಾಯರ್ ಜಗದೀಶ್ ಅವರು 'ನನ್ನ ಹಂಸ ನಡುವೆ ಲವ್ ಗಿವ್ ಏನೂ ಇಲ್ಲ. ಅಲ್ಲಿ ನಡೆದಿದ್ದು ಜಸ್ಟ್ ಆಟಕ್ಕಾಗಿ, ಮನರಂಜನೆಗಾಗಿ. ಅವರಿಗೆ ಬೆಳೆದ ಮಗನಿದ್ದಾನೆ, ಅವರದೇ ಆದ ಒಳ್ಳೆಯ ಫ್ಯಾಮಿಲಿ ಇದೆ. ನನಗೂ ನನ್ನ ಸಂಸಾರವವಿದೆ. ಅದು ಜಸ್ಟ್‌ ಫಾರ್ ಫನ್..' ಎಂದಿದ್ದಾರೆ. 

ಯಾರಿಗೂ ಹೇಳ್ದೇ ಇರೋ ವಿಷ್ಯ ಹೇಳ್ತೀನಿ; ಶಿವಣ್ಣ ಬಗ್ಗೆ ನಟಿ ಛಾಯಾ ಸಿಂಗ್ ಹೇಳಿದ ಗುಟ್ಟು!

ಇದೀಗ, ಅನುಷಾ ರೈ ಕೂಡ ನನ್ನ ಹಾಗೂ ಧರ್ಮ ಕೀರ್ತಿರಾಜ್ ನಡುವೆ ಇರೋದು ಕೇವಲ ಫ್ರಂಡ್‌ಶಿಪ್ ಅಷ್ಟೇ. ದಯವಿಟ್ಟು ಅದನ್ನು ಬೇರೆ ಹೆಸರಿನಿಮದ ಕರೆಯಬೇಡಿ..' ಎಂದಿದ್ದಾರೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯೆಂದರೆ ಅದೊಂದು ಮನರಂಜನೆ ಕೊಡುವ ಮನೆ. ಕೇವಲ ಕೆಲವೊಮ್ಮೆ ಅಷ್ಟೇ ನಿಜವಾದ ಲವ್ ಘಟಿಸಬಹುದಷ್ಟೇ ಎನ್ನಬಹುದು!

click me!