ತೀವ್ರ ಕುತೂಹಲ ಕೆರಳಿಸುತ್ತಿರುವ ರಾಮಾಚಾರಿಯ ಇಂದಿನ ಪ್ರೋಮೋ ನೋಡಿದರೆ, ಸಂಚಿಕೆಯನ್ನು ಮಿಸ್ ಮಾಡಲು ಮನಸ್ಸು ಬಾರದು. ಚಾರು ಮನೆಯ ಮುದ್ದಿನ ಸೊಸೆಯಾಗಿ ಬದಲಾಗುವಳೇ? ರಾಮಾಚಾರಿ ಚಾರುವನ್ನು ಅರ್ಥ ಮಾಡಿಕೊಳ್ಳಲು ಸಫಲನಾಗುವನೇ?
ಕಲರ್ಸ್ ಕನ್ನಡದ 'ರಾಮಾಚಾರಿ' ಸೀರಿಯಲ್ ಜನಮನ ಗೆದ್ದಿದೆ. ಚಾರು ಮನೆಯ ಸದಸ್ಯರ ಮನಸ್ಸನ್ನು ಗೆಲ್ಲತೊಡಗಿದ್ದಾಳೆ. ಶ್ರುತಿಗೆ ಕೆಲಸ ಸಿಕ್ಕಿದೆ. ಸದ್ಯಕ್ಕೆ ಚಾರು ರಾಮಾಚಾರಿ ಅಮ್ಮನ ಮುದ್ದಿನ ಸೊಸೆಯಾಗಿ ಬದಲಾಗುತ್ತಿದ್ದಾಳೆ. ಅಷ್ಟೇ ಅಲ್ಲ, ಗಂಡ ರಾಮಾಚಾರಿ ಕೂಡ ಹೆಂಡತಿ ಚಾರು ಮನಸ್ಸನ್ನು ಅರ್ಥ ಮಾಡಿಕೊಳ್ಳತೊಡಗಿದ್ದಾನೆ. ಈ ಸಮಯದಲ್ಲಿ ಚಾರು ಕಣ್ಣೀರು ಹಾಕುತ್ತಿದ್ದಾಳೆ.
ಚಾರು ಕಣ್ಣೀರಿಗೆ ಕರಗಿದ ಅತ್ತೆ ಸೊಸೆಗೆ ಪ್ರೀತಿಯಿಂದ ಬುದ್ಧಿ ಹೇಳಿ ಒಳಹೋಗುವಷ್ಟರಲ್ಲಿ ಗಂಡ ರಾಮಾಚಾರಿ ಚಾರು ಮುಂದೆ ಪ್ರತ್ಯಕ್ಷನಾಗಿದ್ದಾನೆ. ಹೆಂಡತಿ ಕಣ್ಣೀರು ನೋಡಿ, ಬೇಸರದಿಂದ ಕಣ್ಣಿರು ಒರೆಸುವ ರಾಮಾಚಾರಿ, 'ಅಳಬಾರದು ನೀನು, ಯಾವತ್ತೂ ಖುಷಿ ಖುಷಿಯಾಗಿ ಇರಬೇಕು' ಎಂದು ಹೇಳುವನು. ಆದರೆ, ಚಾರು ಕಣ್ಣೀರು ನಿಲ್ಲದಿರಲು, ತನ್ನ ಕೈಯಿಂದಲೇ ಅವಳ ಕಣ್ಣೀರು ಒರೆಸುವನು. ಗಂಡ ಪಕ್ಕಾ ತನ್ನ ಪರ ಇದ್ದಾನೆ ಅಂತ ಗೊತ್ತಾದ ತಕ್ಷಣ ಚಾರು ವರಸೆ ಬದಲಾಗುವುದೇ?
ಬಿಗ್ ಬಾಸ್ ಸೀಸನ್ 10ಕ್ಕೆ ಕ್ಷಣಗಣನೆ; ಪರಮೇಶ್ವರ್ ಗುಂಡ್ಕಲ್ ಮಿಸ್ ಮಾಡಿಕೊಳ್ತಿರೋ ವೀಕ್ಷಕರು!
ತೀವ್ರ ಕುತೂಹಲ ಕೆರಳಿಸುತ್ತಿರುವ ರಾಮಾಚಾರಿಯ ಇಂದಿನ ಪ್ರೋಮೋ ನೋಡಿದರೆ, ಸಂಚಿಕೆಯನ್ನು ಮಿಸ್ ಮಾಡಲು ಮನಸ್ಸು ಬಾರದು. ಚಾರು ಮನೆಯ ಮುದ್ದಿನ ಸೊಸೆಯಾಗಿ ಬದಲಾಗುವಳೇ? ರಾಮಾಚಾರಿ ಚಾರುವನ್ನು ಅರ್ಥ ಮಾಡಿಕೊಳ್ಳಲು ಸಫಲನಾಗುವನೇ? ಈ ಎಲ್ಲ ಪ್ರಶ್ನೆಗಳಿಗೆ ಪ್ರಸಾರವಾಗಲಿರುವ ಇಂದಿನ ಸಂಚಿಕೆ ಉತ್ತರ ನೀಡಲಿದೆ, ನೋಡಿ ರಾಮಾಚಾರಿ ಸೀರಿಯಲ್, ರಾತ್ರಿ 9 ಗಂಟೆಗೆ.
ಕೂಡಿ ಬಾಳೋಣಾ ಎಂದೆಂದೂ ಸೇರಿ ದುಡಿಯೋಣ ಎಂದ ಭಾರತದ 'ದಿಗ್ಗಜರು'
ಅಂದಹಾಗೆ, ಕಲರ್ಸ್ ಕನ್ನಡದಲ್ಲಿ, 'ಸೋಮವಾರದಿಂದ ಶುಕ್ರವಾರ'ದವೆರೆಗೆ, ರಾತ್ರಿ 9ಕ್ಕೆ 'ರಾಮಾಚಾರಿ' ಸೀರಿಯಲ್ ಪ್ರಸಾರವಾಗುತ್ತಿದೆ. ಹಲವು ವೀಕ್ಷಕರು ಈ ಧಾರಾವಾಹಿ ಮೆಚ್ಚಿದ್ದು, ಸೀರಿಯಲ್ ಒಮ್ಮೆ ಟಾಪ್ ಟಿಆರ್‌ಪಿ ದಾಖಲಿಸಿ ಈಗಲೂ ಸಾಕಷ್ಟು ಕ್ರೇಜ್ ಉಳಿಸಿಕೊಂಡಿದೆ.