Niveditha Gowda ನಿವೇದಿತಾ ಚಂದನ್ ಶೆಟ್ಟಿ ಲಿಪ್‌ಲಾಕ್‌ ವಿಡಿಯೋ ವೈರಲ್!

Published : Oct 03, 2022, 11:45 AM IST
Niveditha Gowda ನಿವೇದಿತಾ ಚಂದನ್ ಶೆಟ್ಟಿ ಲಿಪ್‌ಲಾಕ್‌ ವಿಡಿಯೋ ವೈರಲ್!

ಸಾರಾಂಶ

ವೈರಲ್ ಆಗುತ್ತಿದೆ ನಿವಿ- ಚಂದು ಲಿಪ್‌ಲಾಕ್ ವಿಡಿಯೋ. ಸೋಷಿಯಲ್ ಮೀಡಿಯಾದಲ್ಲಿ ಇದೆಲ್ಲಾ ಬೇಕಾ ಎಂದು ಕಾಲೆಳೆದ ನೆಟ್ಟಿಗರು...

ಕನ್ನಡ ಚಿತ್ರರಂಗದ ದಿ ಬೆಸ್ಟ್‌ Rapper ಚಂದನ್ ಶೆಟ್ಟಿ ಮತ್ತು ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸಣ್ಣ ಪುಟ್ಟ ಫನ್ನಿ ವಿಡಿಯೋ ಮತ್ತು ರೀಲ್ಸ್‌ ಮಾಡಿಕೊಂಡು ತಮ್ಮ ಫಾಲೋವರ್ಸ್‌ನ ಎಂಗೇಜ್‌ ಆಗಿಡುತ್ತಾರೆ. ಕಮರ್ಷಿಯಲ್ ಸಿನಿಮಾಗಳಿಗೆ ಮಾಸ್ ಹಾಡುಗಳನ್ನು ಬರೆಯುವುದರಲ್ಲಿ ಚಂದನ್ ಶೆಟ್ಟಿ ಎತ್ತಿದ ಕೈ. ಶ್ರೇಯಸ್ ಕೆ ಮಂಜು ಮತ್ತು ರೇಶ್ಮೆ ನಾನಯ್ಯ ನಟಿಸಿರುವ ರಾಣಾ ಚಿತ್ರಕ್ಕೆ ಗಲ್ಲಿ ಬಾಯ್ ಎಂದು ಶೆಟ್ರು ಹಾಡು ಬರೆದಿದ್ದಾರೆ. ಈ ಹಾಡಿಗೆ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. 

ಗ್ರೀನ್ ಬಣ್ಣದ ಫ್ರಾಕ್‌ನಲ್ಲಿ ನಿವೇದಿತಾ, ಗೋಲ್ಡ್‌ ಬಣ್ಣ ಟೀ-ಶರ್ಟ್‌ನಲ್ಲಿ ಚಂದನ್ ಶೆಟ್ಟಿ ಸೂಪರ್ ಕ್ಯೂಸ್ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ' No ಎನ್ನದೆ Yes ಅಂದರೆ ಅಫೀಶಿಯಲ್ ಅಗಿ ಪಪ್ಪಿ ಕೊಡುವೆ' ಎನ್ನುವ ಸಾಲಿಗೆ ಡ್ಯಾನ್ಸ್‌ ಮಾಡಿದ್ದು ಪಪ್ಪಿ ಪದ ಬರುತ್ತಿದ್ದಂತೆ ಇಬ್ಬರೂ ಲಿಪ್‌ಕಾಪ್ ಮಾಡಿದ್ದಾರೆ. ಒಂದು ಕ್ಷಣಕ್ಕೆ ನಿವಿನೇ ಶಾಕ್ ಆಗುತ್ತಾಳೆ ಆದರೆ ಡ್ಯಾನ್ಸ್‌ ಮುಂದುವರೆಸಿಕೊಂಡು ಹೋಗುತ್ತಾರೆ. ಈ ವಿಡಿಯೋ ಲಕ್ಷಾಂತರ ಕಾಮೆಂಟ್‌ಗಳು ಬಂದಿದೆ.

'ಬನ್ನಿ ಕಮೆಂಟ್‌ ಸೆಕ್ಷನ್‌ನಲ್ಲಿ ತಜ್ಞರ ಅಭಿಪ್ರಾಯ ತಿಳಿದುಕೊಳ್ಳೋಣ',' ನಿವೇದಿತಾಗೆ ಡ್ಯಾನ್ಸ್‌ ಮಾಡುವುದಕ್ಕೆ ಬರೋಲ್ಲ ಆದರೂ ರೀಲ್ಸ್‌ನಲ್ಲಿ ತುಂಬಾ ಫೇಮ್ಸ್‌ ಹೇಗೆ?','ಈ ಬ್ಲೇಡ್‌ ಕಪಲ್‌ನ ಚಿತ್ರರಂಗದಿಂದ ಮೊದಲು ಬಾಯ್ಕಾಟ್ ಮಾಡಬೇಕು','ಬೆಂಕಿ ಬಿರುಗಾಳಿ ಮೇಡಂ ನೀವು ಕರ್ನಾಟಕದ ಬಸ್ಟ್‌ ಜೋಡಿ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಗಲ್ಲಿ ಬಾಯ್:

ಶ್ರೇಯಸ್‌ ಕೆ ಮಂಜು ಅಭಿನಯದ ‘ರಾಣಾ’ ಚಿತ್ರದ ‘ಗಲ್ಲಿ ಬಾಯ್‌’ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಚಂದನ್‌ ಶೆಟ್ಟಿಸಂಗೀತ, ಸಾಹಿತ್ಯ ನೀಡಿದರೆ, ಯುವ ಪ್ರತಿಭೆ ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ.ಈ ವಿಶೇಷ ಹಾಡನ್ನು ನಿರ್ದೇಶಕ ಜೋಗಿ ಪ್ರೇಮ್‌ ಬಿಡುಗಡೆ ಮಾಡಿದರು. ಪುರುಷೋತ್ತಮ್‌ ಗುಜ್ಜಾಲ್‌ ನಿರ್ಮಾಣದ ಈ ಚಿತ್ರವನ್ನು ನಂದಕಿಶೋರ್‌ ನಿರ್ದೇಶಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಖಳನಾಯಕನ ಪಾತ್ರದಲ್ಲಿ ಫಿಟ್‌ನೆಸ್‌ ಟ್ರೈನರ್‌ ರಘು ಕಾಣಿಸಿಕೊಂಡಿದ್ದಾರೆ. ‘ಇದು ನಮ್ಮ ಕೆ ಮಂಜು ಮಗನ ಸಿನಿಮಾ. ಶ್ರೇಯಸ್‌ ಅವರಿಗೆ ಸಿನಿಮಾ ಮೇಲಿನ ಪ್ರೀತಿ ಜಾಸ್ತಿ. ಇವರಿಗಾಗಿ ನಾನು ಈ ಚಿತ್ರದ ಹಾಡು ಬಿಡುಗಡೆಗೆ ಬಂದೆ. ಹಾಡು ನೋಡಿದಾಗ ಖುಷಿ ಆಯಿತು. ಮೇಕಿಂಗ್‌, ಸಾಹಿತ್ಯ ತುಂಬಾ ಚೆನ್ನಾಗಿದೆ. ನಾಯಕ, ನಾಯಕಿ ಇಬ್ಬರು ಅದ್ಭುತವಾಗಿ ಕುಣಿದಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿ’ ಎಂದು ಪ್ರೇಮ್‌ ಶುಭ ಕೋರಿದರು.

ಉದ್ದ ಉಗುರಿದೆ ಅಕ್ಕಿ ರೊಟ್ಟಿ ಗತಿ ಗೋವಿಂದ; Niveditha Gowda ಅಡುಗೆ ನೋಡಿ ಕಣ್ಣೀರಿಟ್ಟ ಕನ್ನಡಿಗರು

ಟ್ರೋಲಿಗರಿಗೆ ಉತ್ತರ ಕೊಟ್ಟ Niveditha Gowda:

ನಿವೇದಿತಾ ಗೌಡ ಮೊದಲ ಬಾರಿಗೆ ನೆಟ್ಟಿಗರು ಪದೇ ಪದೇ ಕೇಳುವ ಪ್ರಶ್ನೆಗಳಿ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಪತಿ ಚಂದನ್‌ಗೂ ತಿಳಿಯದ ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ.

ನಿಮ್ಮ ಏಜ್‌ ಅಂಡ್‌ ಹೈಟ್ ಎಷ್ಟು?
ಹುಡ್ಗೀರು ಯಾವತ್ತಾದ್ರೂ ಏಜ್ ಹೇಳ್ತಾರಾ?ನಾನು ರಿವೀಲ್ ಮಾಡೋಲ್ಲ ಆದರೆ 18 ಕ್ಕೂ ಹೆಚ್ಚು ವಯಸ್ಸು ಆಗಿದೆ. ಟಿವಿಯಲ್ಲಿ ನಾನು ತುಂಬಾ ಹೈಟ್ ಕಾಣಿಸುತ್ತೀನಿ ಆದರೆ ನಾನು ಇರೋದು 5'3'' ಅಷ್ಟೆ. ಹೀಲ್ಸ್‌ ಹಾಕೊಂದು 5'6'' ಕಾಣಿಸುತ್ತೀನಿ.

ತುಂಡುಡುಗೆ ತೊಟ್ಟು ಐಸ್ ತಿಂದು ಹೊಗೆ ಬಿಟ್ಟ Niveditha Gowda; ಹಸು ನೋಡಿ ರನ್!

ನೀವು ಪ್ರಗ್ನೆಂಟ್ ಅಂತ ರೂಮರ್ಸ್‌ ಇದೆ. ಇದಕ್ಕೆ ನಿಮ್ಮ ರೆಸ್ಪಾನ್ಸ್‌ ಏನು?
ನನಗೆ ಎಷ್ಟೊಂದು ಸಲ ಕಾಲ್ ಮಾಡಿ ಕೇಳುತ್ತಾರೆ. ಸದ್ಯಕ್ಕೆ ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್ ಇಲ್ಲ. ಲೈಫ್‌ನ ಎಂಜಾಯ್ ಮಾಡಬೇಕು ಮಕ್ಕಳಿಗೆಂದು ಟೈಮ್ ಕೊಡಬೇಕು ತುಂಬಾ ಕೇರ್ ಮಾಡಬೇಕು. ಈಗ ಅದೆಲ್ಲಾ ಮಾಡಲು ಆಗುದಿಲ್ಲ. ಏನಾದರೂ ಇದ್ದರೆ ನಾನೇ ಅನೌನ್ಸ್ ಮಾಡ್ತೀನಿ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ ಬಿಗ್​ಬಾಸ್​ ವಿನ್ನರ್ ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!
Bigg Boss ನೆಚ್ಚಿನ ಸ್ಪರ್ಧಿಗೆ ವೋಟ್​ ಹಾಕಲು ಕೊನೆ ಅವಕಾಶ: ಯಾವಾಗ, ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​