Bigg Boss Kannada season 9: ಮೊದಲವಾರ ಮನೆಯಿಂದ ಬೈಕರ್ ಐಶ್ವರ್ಯಾ ಔಟ್!

Published : Oct 02, 2022, 11:15 PM IST
Bigg Boss Kannada season 9: ಮೊದಲವಾರ ಮನೆಯಿಂದ ಬೈಕರ್ ಐಶ್ವರ್ಯಾ ಔಟ್!

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೊದಲ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಮೊದಲನೇ ವಾರ ಬೈಕರ್ ಐಶ್ವರ್ಯಾ ಪಿಸೆ ಅವರು ಔಟ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೊದಲ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಮೊದಲನೇ ವಾರ ಬೈಕರ್ ಐಶ್ವರ್ಯಾ ಪಿಸೆ ಅವರು ಔಟ್ ಆಗಿದ್ದಾರೆ. ಯಾರೂ ನಿರೀಕ್ಷೆ ಮಾಡದಂತೆ ಈ ಎಲಿಮಿನೇಶನ್ ನಡೆದಿದೆ.  ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ 18 ಮಂದಿ ಸ್ಪರ್ಧಿಗಳಲ್ಲಿ  ಅನುಪಮಾ ಗೌಡ, ರಾಕೇಶ್ ಅಡಿಗ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ ಅವರನ್ನು ಹೊರತುಪಡಿಸಿ, ಮಿಕ್ಕ ಎಲ್ಲಾ 12 ಮಂದಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ನಿನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಮೂವರು ಸೇವ್ ಆಗಿದ್ದರು. ಅರುಣ್ ಸಾಗರ್,  ಮನೆಯ ನಾಯಕನಾಗಿರುವ ವಿನೋದ್ ಗೊಬ್ರಗಾಲ , ದಿವ್ಯಾ ಉರುಡುಗ ಅವರು ನಾಮಿನೇಶನ್ ನಿಂದ ಪಾರಾಗಿದ್ದರು. ಮೊದಲ ವಾರ ಐಶ್ವರ್ಯಾ ಪಿಸೆ ಔಟ್ ಆಗಿದ್ದು, ಇವರು ಓರ್ವ ಮಹಿಳಾ ಬೈಕರ್  ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ, 10 ಬಾರಿವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡವರಾಗಿದ್ದು, ಹೆಮ್ಮೆಯ ಸಂಗತಿ. ಇನ್ನು ನವೀನರಲ್ಲಿ ಮೊದಲನೇ ವ್ಯಕ್ತಿ ಔಟ್ ಆಗಿದ್ದಾರೆ.

ಕಿಚ್ಚನ ಮೆಚ್ಚುಗೆ ಚಪ್ಪಾಳೆ ಪಡೆದ ಅಭ್ಯರ್ಥಿ: ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೊದಲ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮದಲ್ಲಿ ಮೊದಲವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ವಿನೋದ್ ಗೊಬ್ರಗಾಲ ಅವರು ಪಡೆದುಕೊಂಡರು. ಇವರು ನವೀನರಲ್ಲಿ ಓರ್ವ ಸ್ಪರ್ಧಿ ಅನ್ನೋದು ಕೂಡ ವಿಶೇಷ.

BBK9; ಅಣ್ಣಾವ್ರ ಶೈಲಿಯಲ್ಲಿ ಸಲಹೆ ನೀಡಿದ ಅರುಣ್ ಸಾಗರ್, ಸಕಲಕಲಾವಲ್ಲಭ ಎಂದ

ಬಿಗ್‌ಬಾಸ್9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಗಿಚ್ಚಿಗಿಲಿಗಿಲಿ), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ,  ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಪಾಲ್ಗೊಂಡಿದ್ದಾರೆ.

BBK9 ಪಿಡ್ಸ್‌ ಬಂದು ಬಿದ್ದ ರಾಕೇಶ್ ಅಡಿಗ; ಸಿಟ್ಟಲ್ಲಿ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ

ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಅದಕ್ಕೆ ಈ ಸಾರಿ ಗೆಲ್ಲೋದು ಅವರೇ ಎಂದು ಊಹಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?