ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಗು ಮಾಡ್ಕೊಳ್ಳೋ ವಿಷಯದಲ್ಲಿ ಕಾಗೆ ಹಾರಿಸಿದ್ದಾಯ್ತು. ಆದರೆ ಅವರ ಫ್ರೆಂಡ್ಸ್ ಅವರ ಕಾಲೆಳೆಯೋದು ಬಿಟ್ಟಿಲ್ಲ. ಹೇಗೂ ಸುದ್ದಿ ಆಗಿದ್ಯಲ್ಲಾ, ಈಗ್ಲೇ ಮಗು ಮಾಡ್ಕೊಂಬಿಡು ಗುರೂ ಅಂತ ರೇಗಿಸ್ತಿದ್ದಾರಂತೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಿರುತೆರೆಯ ಮೋಸ್ಟ್ ಹ್ಯಾಪನಿಂಗ್ ಕಪಲ್. ಸದಾ ಸುದ್ದಿಯಲ್ಲಿ ಇರೋ ಈ ಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ, ಗಾಸಿಪ್ ಆಗ್ತನೇ ಇರುತ್ತೆ. ಅದನ್ನು ಹೆಚ್ಚೇನೂ ಮನಸ್ಸಿಗೆ ಹಚ್ಚಿಕೊಳ್ಳದೇ ತಮ್ಮ ಪಾಡಿಗೆ ತಾವು ಎನ್‌ಜಾಯ್ ಮಾಡ್ತಾ ಲೈಫ್ ಲೀಡ್ ಮಾಡ್ತಿರೋ ಜೋಡಿ ಇವ್ರು. ಅಂದ ಹಾಗೆ ಇವರಿಬ್ಬರನ್ನೂ ಒಂದು ಸೇರಿಸಿದ್ದು ಬಿಗ್ ಬಾಸ್ ಕನ್ನಡ ಸೀಸನ್ 5. ಅಲ್ಲಿ ಪರಿಚಯವಾದ ಈ ಇಬ್ಬರು ಶೀಘ್ರ ಸ್ನೇಹಿತರಾಗುತ್ತಾರೆ. ನಿಧಾನಕ್ಕೆ ಇವರಿಬ್ಬರ ನಡುವೆ ಸ್ನೇಹವನ್ನೂ ಮೀರಿದ ಭಾವ ಬೆಳೆಯುತ್ತದೆ. ಇಬ್ಬರೂ ಹತ್ತಿರವಾಗುತ್ತಾರೆ. ಅದು ಪ್ರೇಮವಾಗಿ ಮದುವೆಯೂ ಆಗುತ್ತೆ. ಹೀಗೆ ಈ ಜೋಡಿ ಮದುವೆ ಆಗಿ ಮೂರು ವರ್ಷ ಕಳೆದಿದೆ. ಮದುವೆಯಾದಾಗಿಂದಲೂ ಮಕ್ಕಳ ಬಗ್ಗೆ ಈ ಜೋಡಿಗೆ ಪ್ರಶ್ನೆಗಳ ಬಾಣ ಹರಿದುಬರ್ತಲೇ ಇವೆ. ಇತ್ತೀಚೆಗೆಗಂತೂ ಆ ಸುದ್ದಿ ಸಖತ್ ಹೈಪ್(Hype) ಕ್ರಿಯೇಟ್ ಮಾಡಿತ್ತು.
ಹೌದು. ಚಂದನ್ ಶೆಟ್ಟಿ ಅವರು ತಂದೆ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕೆ ಕಾರಣವಾಗಿದ್ದು ಅವರು ಮಾಡಿದ ರೀಲ್ಸ್. ಈಗ ಈ ವಿಚಾರದ ಬಗ್ಗೆ ಚಂದನ್ ಶೆಟ್ಟಿ ಆಮೇಲೆ ಸ್ಪಷ್ಟನೆಯನ್ನೂ ನೀಡಬೇಕಾಗಿ ಬಂತು. ಆದರೂ ಆನ್‌ಲೈನ್‌ನಲ್ಲಿ ಈ ಜೋಡಿಯನ್ನು
ನೆಟಿಜನ್ಸ್, ಆಫ್‌ಲೈನ್‌ನಲ್ಲಿ ಫ್ರೆಂಡ್ಸ್ ಛೇಡಿಸುತ್ತಲೇ ಇದ್ದಾರೆ. ಇದಕ್ಕೆ ಇವರಿಬ್ಬರೂ ಮಾಡೋ ರೀಲ್ಸ್ ಕೂಡ ಒಂದು ಕಾರಣ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸಮಯ ಸಿಕ್ಕಾಗೆಲ್ಲ ರೀಲ್ಸ್(Reels) ಮಾಡುತ್ತಿರುತ್ತಾರೆ. ಇತ್ತೀಚೆಗೆ ಚಂದನ್ ಅವರು ರೀಲ್ಸ್ ಹಂಚಿಕೊಂಡಿದ್ದರು. ಈ ರೀಲ್ಸ್ನಲ್ಲಿ Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಕೇಳಿದ್ದರು. ಅದಕ್ಕೆ ಉತ್ತರ ‘ಫಾದರ್’! ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದರು. ಅದೇ ಸತ್ಯ ಎಂದು ನಂಬಿದ್ದರು. ಆದ್ರೆ ನೀವಂದುಕೊಂಡಿದ್ದು ಸತ್ಯ(Truth) ಅಲ್ಲ ಅಂತ ಈ ತರಲೆ ಜೋಡಿ ಸ್ಪಷ್ಟನೆ ನೀಡಿದ್ರು.
ಬೆಳ್ಳಂಬೆಳಗ್ಗೆ ಡೇಟ್ ಎಂದು ಚಂದನ್ ಕೈಗೆ ಕೇಕ್ ಕೊಟ್ಟ ನಿವೇದಿತಾ ಗೌಡ; ಏನ್ ಕರ್ಮ ಗುರು ಎಂದ ನೆಟ್ಟಿಗರು
'ಸುಮ್ನೆ ಫನ್‌ಗೆ ಅಂತ ಮಾಡಿರೋ ವಿಡಿಯೋ ಅದು. ಇಂಗ್ಲಿಷ್ನಲ್ಲಿ ಹಲವು ಶಬ್ದಗಳಿವೆ. ಅದನ್ನು ಫನ್ ಮಾಡಲು ಹೋಗಿದ್ದೆವು. ಆದರೆ ಯಾಕೋ ಜನ ಬೇರೆ ಥರನೇ ಅರ್ಥ ಮಾಡಿಕೊಂಡರು. ಎಲ್ಲರೂ ಶುಭಾಶಯ ಕೋರಿದ್ರು. ನಾವು ಅಲ್ಲಿಂದ ಏನೋ ಮಾತು ಹೇಳಿ ತಪ್ಪಿಸಿಕೊಂಡ್ವಿ. ಆದ್ರೆ ಫ್ರೆಂಡ್ಸ್ ಬಿಡಬೇಕಲ್ವಾ? ಅವರು ಇನ್ನೂ ಬಿಟ್ಟಿ ಸಲಹೆ ಕೊಡ್ತಾನೆ ಇದ್ದಾರೆ. ಕಾಲೆಳೀತಾನೇ ಬರ್ತಿದ್ದಾರೆ. ಹೇಗಿದ್ರೂ ಸುದ್ದಿ ಆಗಿದೆ, ಆಯ್ತಲ್ಲಾ ಮದುವೆ ಆಗಿ ಮೂರು ವರ್ಷ, ಮಗು ಮಾಡ್ಕೊಂಡು ಬಿಡು ಗುರು ಅಂತ ಎಂದು ಗೆಳೆಯನೋರ್ವ ಸಲಹೆ ಕೊಟ್ಟಿದ್ದ' ಅಂತ ಚಂದನ್ ಶೆಟ್ಟಿ ಹೇಳಿದ್ದಾರೆ.
ಹಾಗಂತ ಗೆಳೆಯರ ಸಲಹೆಯನ್ನು ಈ ಜೋಡಿ ಪಾಲಿಸುತ್ತಾ ಅಂದ್ರೆ ಅದಕ್ಕೆ ಚಂದನ್ ಸ್ಟ್ರಿಕ್ಸ್ ಆಗಿ 'ನೋ..' ಅಂತಾರೆ. 'ಯಾರೋ ಹೇಳ್ತಾರೆ, ಸುದ್ದಿ ಆಗಿದೆ ಅಂತೆಲ್ಲ ಮಗುನ ಮಾಡಿಕೊಳ್ಳೋಕೆ ಆಗುತ್ತಾ.. ನಾವು ಅದಕ್ಕೆ ಇನ್ನೂ ರೆಡಿ ಇಲ್ಲ. ನಾನು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದೇನೆ. ನಿವೇದಿತಾ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇದ್ದಾಳೆ. ಸಿಹಿ ಸುದ್ದಿ ಕೊಡಬೇಕು ಅನಿಸಿದಾಗ ಖಂಡಿತಾ ಅದನ್ನು ನಿಮಗೆ ತಿಳಿಸಿಯೇ ತಿಳಿಸ್ತೀನಿ’ ಅಂತ ಚಂದನ್ ಶೆಟ್ಟಿ ಹೇಳಿದ್ದಾರೆ.
ಕಿರುತೆರೆಯ ಸ್ಟಾರ್ ನಟರ ಸುಂದರಿ ಹೆಂಡ್ತೀರು…ಹೀಗಿದ್ದಾರೆ ನೋಡಿ…
ಇನ್ನು ಹೇಗೆಲ್ಲ ಸುದ್ದಿ ವೈರಲ್ ಆಗಿರೋದು ನೋಡಿ ನಿವೇದಿತಾಗೆ ಬೇಸರ ಆಗಿದೆಯಾ ಅಂದರೆ, 'ಇಲ್ಲ ಅವಳು ಬೇಸರ ಮಾಡಿಕೊಂಡಿಲ್ಲ. ಅವಳಿಗೆ ಖುಷಿ ಆಗಿದೆ. ನಮ್ಮ ಬಗ್ಗೆ ಜನರಿಗೆ ಇನ್ನೂ ಕ್ರೇಜ್ ಇದೆ ಎಂಬುದು ನಮಗೆ ಆಗಾಗ ಗೊತ್ತಾಗುತ್ತಿದೆ ಅಂತ ಅವಳು ಹೇಳ್ತಾಳೆ’ ಅಂದಿದ್ದಾರೆ ಅವರು. ಹೀಗೆ ಮಾಡ್ತಾ ಇರಿ, ನಿಮ್ದು ತೋಳ ಬಂತು ತೋಳ ಕಥೆ ಆಗುತ್ತೆ ಮತ್ತೆ ಅಂತ ಜನ ಹೇಳ್ತಿದ್ದಾರೆ.