ನಿವೇದಿತಾ ಗೌಡ ಪ್ರೆಗ್ನೆಂಟ್ ಆದ್ರೆ ನಾನೇ ಮಗು ನೋಡ್ಕೋಬೇಕು, ಅದೀಗ ನನಗಂತೂ ಆಗಲ್ಲ: ಚಂದನ್ ಶೆಟ್ಟಿ ಸ್ಪಷ್ಟನೆ

By Vaishnavi ChandrashekarFirst Published Jan 24, 2023, 12:33 PM IST
Highlights

ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ಸ್ಪಷ್ಟನೆ ಕೊಟ್ಟ ಚಂದನ್ ಶೆಟ್ಟಿ. ಮಗು ಮಾಡಿಕೊಂಡ ತಕ್ಷಣವೇ ನಾನು ತಾಯಿ ಆಗುವೆ ಎಂದ ರ್ಯಾಪರ್.... 

ಕಿರುತೆರೆ ಸೆಲೆಬ್ರಿಟಿ ಕಪಲ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟ ಆರಂಭದಿಂದಲೂ ನೆಟ್ಟಿಗರು ಕೇಳುತ್ತಿರುವುದು ಒಂದೇ ಪ್ರಶ್ನೆ ಜ್ಯೂನಿಯರ್ ನಿವಿ ಅಥವಾ ಚಂದನ್ ಎಂಟ್ರಿ ಯಾವಾಗ ಎಂದು. ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಫನ್ನಿ ವಿಡಿಯೋ ಅಪ್ಲೋಡ್ ಮಾಡಿದ್ದರೂ ಪ್ರತಿಯೊಂದನ್ನು ಮಗುವಿಗೆ ಲಿಂಕ್ ಮಾಡುತ್ತಾರೆ. ಅದರಲ್ಲೂ ಕೆಲವು ದಿನಗಳ ಹಿಂದೆ ಫಾದರ್‌ ಎಂದು ಕ್ರಿಯೇಟ್ ಮಾಡಿದ ವಿಡಿಯೋ ದೊಡ್ಡ ಸಂಕಷ್ಟದಲ್ಲಿ ಸಿಲುಕಿಸಿದೆ. ಈ ವಿಚಾರದ ಬಗ್ಗೆ ಚಂದನ್ ಶೆಟ್ಟಿ ಎರಡೆರಡು ಸಲ ಸ್ಪಷ್ಟನೆ ಕೊಡುತ್ತಿದ್ದಾರೆ. 

ಚಂದನ್ ಶೆಟ್ಟಿ ಮಾತು:

'ಮನೆಯಲ್ಲಿ ಸುಮ್ಮನೆ ತಮಾಷೆಗೆಂದು ನಾವು ಕ್ರಿಯೇಟ್ ಮಾಡಿದ ವಿಡಿಯೋ ಅದು. ಉದಾಹರಣೆ ಹೇಳಬೇಕು ಅಂದ್ರೆ seeನ ನಾವು  C ಎಂದು ಹೇಳಬಹುದು. ಅದೇ ರೀತಿ Fat ಅಂದ್ರೆ ಫ್ಯಾಟ್‌ her ಅಂದ್ರೆ ಹರ್‌..ಒಟ್ಟಿಗೆ ಸೇರಿಸಿ ಬರೆದರೆ ಫಾದರ್ ಆಗುತ್ತದೆ ಫ್ಯಾಟರ್ ಅಗುವುದಿಲ್ಲ ಅನ್ನೋ ತಮಾಷೆ ವಿಡಿಯೋ ಮಾಡಿದ್ದು. ತಂದೆ ಆಗಿದ್ದೀನಿ ಅಂತ ಎಲ್ಲರೂ ಕರೆ ಮಾಡಿ ನನಗೆ ಶುಭ ಕೋರಿದ್ದರು ನಿಜ ಆ ರೀತಿ ಏನೂ ಆಗಿಲ್ಲ. ನನ್ನೊಬ್ಬ ಸ್ನೇಹಿತ ಕರೆ ಮಾಡಿ ಹೇಗಿದ್ರೂ ನ್ಯೂಸ್ ಆಗಿದೆ ಮಗು ಮಾಡ್ಕೊಂಡು ಬಿಡು ಎಂದು ಹೇಳಿದ. ನ್ಯೂಸ್ ಆಗಿದೆ ಎಂದು ನಾನು ಮಗು ಮಾಡಿಕೊಳ್ಳಲು ಆಗುವುದಿಲ್ಲ. ಮಗು ಮಾಡಿಕೊಳ್ಳುವುದಕ್ಕೆ ನಾನು ರೆಡಿಯಾಗಿಲ್ಲ. ನಿವೇದಿತಾ ಗೌಡ ಕೂಡ ಟಿವಿ ಶೋನಲ್ಲಿ ಬ್ಯುಸಿಯಾಗಿದ್ದಾರೆ ನಾನು ನನ್ನ ಮ್ಯೂಸಿಕ್ ಶೋನಲ್ಲಿ ಬ್ಯುಸಿಯಾಗಿರುವೆ. ಇನ್ನು ಸ್ವಲ್ಪ ಜೀವನದಲ್ಲಿ ಸಾಧನೆ ಮಾಡಿ ಆನಂತರ ಮಕ್ಕಳು ಮಾಡಿಕೊಳ್ಳುತ್ತೀವಿ. ಸಿಹಿ ಸುದ್ದಿಯನ್ನು ನಾನೇ ಕೊಡುವುದು ಹೇಳುವಾಗ ಏನಾದರೂ ಒಂದು ಟ್ವಿಸ್ಟ್‌ ಕೊಟ್ಟು ಡಿಫರೆಂಟ್ ಆಗಿ ಹೇಳುವೆ. ಸದ್ಯಕ್ಕೆ ಇಲ್ಲ' ಎಂದು ಚಂದನ್ ಶೆಟ್ಟಿ ಖಾಸಗಿ ವಾಹಿನಿ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. 

ಕಾಡು ಪ್ರಾಣಿ ಲದ್ದಿ ಕಾಫಿ ಕುಡಿಯಲು ಹೆದರಿಕೊಂಡ ನಿವೇದಿತಾ ಗೌಡ; ನೈಟ್‌ಲೈಫ್‌ ವಿಡಿಯೋ ವೈರಲ್

'ಸುದ್ದಿಯಾಗಿರುವುದಕ್ಕೆ ನಿವೇದಿತಾಗೆ ತುಂಬಾನೇ ಖುಷಿಯಾಗಿದೆ. ಸಣ್ಣದಾಗಿ ನಾವು ವಿಡಿಯೋ ಮಾಡಿದಾಗ ಇಷ್ಟು ದೊಡ್ಡ ಸುದ್ದಿಯಾಗುತ್ತದೆ ಅಂದುಕೊಂಡಿರಲಿಲ್ಲ. ಖುಷಿ ಯಾಕೆ ಆಗುತ್ತಿದೆ ಅಂದ್ರೆ ನಾವು ಇನ್ನೂ ಲೈಮ್‌ಲೈಟ್‌ನಲ್ಲಿರುವೆ ಜನರಿಗೆ ಆ ಒಂದು ಕ್ರೇಜ್ ಇದೆ. ವೈರಲ್ ಆಗುತ್ತಿದ್ದಂತೆ ನಿವಿ ಒಂದು ಸಲ ನನಗೆ ಶಾಕ್ ಕೊಟ್ಟರು ಫಾದರ್ ಫಾದರ್ ಅಂತಿದ್ದಾರೆ ನಾನು ಈಗ ಮದರ್ ಆಗಬೇಕು ಅಂದಳು. ನೀನು ಮದರ್ ಆದರೆ ನಾನು ಓರಿಜಿನಲ್ ಮದರ್ ಆಗಬೇಕು ಎಂದು ಹೇಳಿದೆ. 24 ಗಂಟೆ ಕೈಯಲ್ಲಿ ನಾನು ಮಗು ಹಿಡಿದುಕೊಂಡಿರಬೇಕು ಅದಿಕ್ಕೆ ಸದ್ಯಕ್ಕೆ ಬೇಡಮ್ಮ ನೀನು ಆರಾಮ್ ಆಗಿ ಕೆಲಸದಲ್ಲಿ ಬ್ಯುಸಿಯಾಗಿರು. ಮೊದಲ ಸಾಧನೆ ಕಡೆ ಮಗನ ಕೊಡು' ಎಂದಿದ್ದಾರೆ ಚಂದನ್.

ಟ್ರೋಲ್‌ಗಳ ಬಗ್ಗೆ:

'ನಮ್ಮ ಕ್ಷೇತ್ರದಲ್ಲಿ ಯಾರೇ ಸೆಲೆಬ್ರಿಟಿ ಆದರೂ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು...ಇದು ಎಲ್ಲರಿಗೂ ಕಿವಿ ಮಾತು ಅಂತ ತಿಳಿದುಕೊಳ್ಳಿ..ಕ್ರಿಟಿಸಿಸಮ್ ತೆಗೆದುಕೊಳ್ಳುವುದಕ್ಕೆ, ಅವಮಾನ ಎದುರಿಸುವುದಕ್ಕೆ, ಪಬ್ಲಿಕ್‌ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಬ್ಯೂಸ್ ಮಾಡಿಸಿಕೊಳ್ಳುವುದಕ್ಕೆ, ಕೆಟ್ಟದಾಗಿ ಒಬ್ಬರು ನಮ್ಮನ್ನು ಬೈದಾಗ ಅದನ್ನು ಪಕ್ಕಕ್ಕಿಟ್ಟು ನೆಮ್ಮದಿಯಾಗಿ ಜೀವನ ನಡೆಸುವುದಕ್ಕೆ ಅದಕ್ಕೆ ರಿಯಾಕ್ಟ್‌ ಮಾಡದೆ ನೆಮ್ಮದಿಯಾಗಿ ಜೀವನದ ನಡೆಸಲು ಬಂದ್ರೆ ಮಾತ್ರ ಈ ಫೀಲ್ಡ್‌ನಲ್ಲಿ ಜೀವನ ನಡೆಸಲು ಸಾಧ್ಯ. ಇಲ್ಲ ಅಂದ್ರೆ ತುಂಬಾ ಡಿಸ್ಟರ್ಬ್‌ ಆಗುತ್ತಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾದ ಎದುರಿಗೆ ಬಂದ ವ್ಯಕ್ತಿ ಬೈದ್ರೆ ಅದನ್ನು ನಾಲ್ಕು ಜನರು ನೋಡಿದರೆ ಅವಮಾನ ಅನಿಸುತ್ತದೆ. ಅದೇ ಪಬ್ಲಿಕ್‌ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕೆಟ್ಟ ಕಾಮೆಂಟ್ ಮಾಡಿದಾಗ ಮಾನಸಿಕವಾಗಿ ತುಂಬಾ ನೋವಾಗುತ್ತದೆ. ಆರಂಭದಲ್ಲಿ ಬೇಸರವಾಗುತ್ತಿತ್ತು ಆದರೆ ಈಗ ಆ ಸ್ಥಾನವನ್ನು ಮೀರಿ ಮುಂದೆ ಬಂದಿರುವೆ. ನೆಗೆಟಿಬ್ ಬಿಡಿ ಸಪೋರ್ಟ್ ಮಾಡುವವರು ತುಂಬಾ ಜನರಿದ್ದಾಗರೆ ಅದೇ ಸಾಕು' ಎಂದಿದ್ದಾರೆ ಚಂದನ್.  

click me!