ವಿಮಾನದ ಬ್ಯುಸಿನೆಸ್‌​ ಕ್ಲಾಸ್​ ಐಷಾರಾಮಿ ಸೌಲಭ್ಯ ಹೇಗಿರತ್ತೆ ಗೊತ್ತಾ? ಬಿಗ್​ಬಾಸ್​ ಚೈತ್ರಾ ವಾಸುದೇವನ್ ತೋರಿಸಿದ್ದಾರೆ ನೋಡಿ!

Published : Sep 28, 2023, 03:02 PM ISTUpdated : Sep 28, 2023, 03:12 PM IST
ವಿಮಾನದ ಬ್ಯುಸಿನೆಸ್‌​ ಕ್ಲಾಸ್​ ಐಷಾರಾಮಿ ಸೌಲಭ್ಯ ಹೇಗಿರತ್ತೆ ಗೊತ್ತಾ? ಬಿಗ್​ಬಾಸ್​ ಚೈತ್ರಾ ವಾಸುದೇವನ್ ತೋರಿಸಿದ್ದಾರೆ ನೋಡಿ!

ಸಾರಾಂಶ

ಬಿಗ್​ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಅವರು ಎಮಿರೇಟ್ಸ್​ ವಿಮಾನದ ಬಿಜಿನೆಸ್​ ಕ್ಲಾಸ್​ನ ಐಷಾರಾಮಿ ಸೌಲಭ್ಯದ ಮಾಹಿತಿ ನೀಡಿದ್ದಾರೆ.   

ವಿಮಾನದಲ್ಲಿ ಪ್ರಯಾಣ ಮಾಡಬೇಕು ಎನ್ನುವ ಆಸೆ ಬಹುತೇಕ ಎಲ್ಲರಿಗೂ ಇರುತ್ತೆ. ಆದರೆ ಅದರ ದುಬಾರಿ ರೇಟ್​ ಕೇಳಿ ಅದರ ಉಸಾಬರಿ ಬೇಡ ಎಂದುಕೊಳ್ಳುವವರು ಹಲವರಾದರೆ, ಇನ್ನು ಕೆಲವರು ಎಕಾನಾಮಿ ಕ್ಲಾಸ್​ನಲ್ಲಿಯೇ ಪ್ರಯಾಣ ಬೆಳೆಸಿ ತಮ್ಮ ಆಸೆ ಈಡೇರಿಸಿಕೊಳ್ಳುವುದು ಉಂಟು. ಆದರೆ ಬಿಜಿನೆಸ್​ ಕ್ಲಾಸ್​ ಹಾಗೂ ಫಸ್ಟ್​ ಕ್ಲಾಸ್​ನಲ್ಲಿ ಪ್ರಯಾಣ ಮಾಡುವುದು ಮಧ್ಯಮ ವರ್ಗದವರಿಗೆ ಕನಸಿನ ಮಾತೇ ಸರಿ. ಎಷ್ಟೋ ಮಂದಿ ವಿಮಾನದ ಒಳಗೆ ಹೇಗಿರುತ್ತದೆ ಎಂದು ನೋಡಿರುವುದಿಲ್ಲ. ವಿಮಾನದಲ್ಲಿ ಪ್ರಯಾಣಿಸಿದವರೂ ಬಿಜಿನೆಸ್​ ಹಾಗೂ ಫಸ್ಟ್​ ಕ್ಲಾಸ್​ನ ಐಷಾರಾಮಿ ನೋಡಿ ನೋಡಿರಲು ಸಾಧ್ಯವೇ ಇಲ್ಲ. ಅಂಥವರಿಗಾಗಿಯೇ ಇದೀಗ ಆ್ಯಂಕರ್, ‘ಬಿಗ್ ಬಾಸ್ ಕನ್ನಡ ಸೀಸನ್ 7’ರ ಸ್ಪರ್ಧಿ ಚೈತ್ರಾ ವಾಸುದೇವನ್ ಬಿಜಿನೆಸ್​ ಕ್ಲಾಸ್​ನ ಪ್ರಯಾಣದ ಅನುಭವದ ಜೊತೆಗೆ ಅದರ ಐಷಾರಾಮಿ ನೋಟವನ್ನು ವೀಕ್ಷಕರಿಗಾಗಿ ತೆರೆದಿಟ್ಟಿದ್ದಾರೆ.

Emirates ಫ್ಲೈಟ್​ನ ಬೋಯಿಂಗ್​ ಕ್ಲಾಸ್​-2 ನ ಬಿಜಿನೆಸ್​ ಕ್ಲಾಸ್​ನಲ್ಲಿ ದುಬೈ ಪ್ರಯಾಣಿಸಿದ ಚೈತ್ರಾ (Chaitra Vasudevan) ಅವರು ಇಲ್ಲಿಯ ಲುಕ್​ ಹೇಗಿದೆ ಎಂದು ವಿವರಿಸಿದ್ದಾರೆ. ಈ ವಿಮಾನದಲ್ಲಿ  ಬಿಜಿನೆಸ್​ ಮತ್ತು ಎಕಾನಾಮಿ ಇದ್ದು, ತಾವು ಐಷಾರಾಮಿ ಬಿಜಿನೆಸ್​ ಕ್ಲಾಸ್​ನಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ ಚೈತ್ರಾ, ಮೂರ್ನಾಲ್ಕು ಗಂಟೆಗಳ ಪ್ರಯಾಣದಲ್ಲಿ ಬೋರ್​ ಆಗಬಾರದು ಎಂದು ವಿಡಿಯೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ಎಕಾನಾಮಿ ಕ್ಲಾಸ್​ನಲ್ಲಿ ಅಕ್ಕಪಕ್ಕ ಜನರಿದ್ದು ಪ್ರಯಾಣ ಖುಷಿ ತಂದರೆ, ಬಿಜಿನೆಸ್ ಕ್ಲಾಸ್​ನಲ್ಲಿ ಅಕ್ಕಪಕ್ಕ ಜನ ಇರುವುದಿಲ್ಲ. ಆದ್ದರಿಂದ ಕಡಿಮೆ ದುಡ್ಡು ಕೊಟ್ಟರೆ ಹೆಚ್ಚು ಸಂತೋಷ, ಹೆಚ್ಚು ದುಡ್ಡಿದ್ದರೆ ಕಡಿಮೆ ಸಂತೋಷ ಎನ್ನುತ್ತಲೇ ತಮ್ಮ ಬಳಿ ಹೆಚ್ಚು ದುಡ್ಡು ಇಲ್ಲ ಎಂದು ಹೇಳಿಕೊಂಡಿರುವ ಚೈತ್ರಾ, ವಿಮಾನದ ಸಂಪೂರ್ಣ ಐಷಾರಾಮಿಯ ಚಿತ್ರಣವನ್ನು ನೀಡಿದ್ದಾರೆ. 

ಲೆಕ್ಕವಿಲ್ಲದಷ್ಟು ದಿನ ಅತ್ತಿರುವೆ; ಡಿಪ್ರೆಶನ್- ಸಾವು ಬಗ್ಗೆ ಚೈತ್ರಾ ವಾಸುದೇವನ್ ಹೇಳಿಕೆ ವೈರಲ್

ಆರಂಭದಲ್ಲಿ, ಬಿಸಿನೆಸ್​ ಕ್ಲಾಸ್​ ತುಂಬಾ ಲಕ್ಸುರಿ ಇದೆ ಎಂದಿರುವ ಚೈತ್ರಾ, ಹೊರಗಿನ ವ್ಯೂವ್ಸ್​ ತೋರಿಸಿದ್ದಾರೆ.  ಹಲವರು ಬಿಜಿನೆಸ್​ ಕ್ಲಾಸ್​ನಲ್ಲಿ ಪ್ರಯಾಣಿಸಿರಬಹುದು, ಆದರೆ ತಮಗೆ ಇದು ಪ್ರಥಮ ಪ್ರಯಾಣ, ಆದ್ದರಿಂದ ತುಂಬಾ ಎಕ್ಸೈಟ್​ ಆಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಇಲ್ಲಿರುವ ಐಷಾರಾಮಿ ಸೌಲಭ್ಯದ ಕುರಿತು ವಿವರಣೆ ನೀಡಿದ್ದಾರೆ ಚೈತ್ರಾ. ಎಕಾನಾಮಿ ಕ್ಲಾಸ್​ಗೆ ಹೋಲಿಸಿದರೆ ಸೀಟ್​ ತುಂಬಾ ಕಂಫರ್ಟ್​ ಆಗಿದ್ದು, ತುಂಬಾ ಸಾಫ್ಟ್​ ಇರುವುದನ್ನು ತೋರಿಸಿದ್ದಾರೆ.  ಪ್ರತಿಯೊಬ್ಬರಿಗೂ ಒಂದು ಚಿಕ್ಕ ಫ್ರಿಜ್​ ವ್ಯವಸ್ಥೆಗೆ ಇದೆ, ಊಟಕ್ಕೆ ಐಷಾರಾಮಿಯಾದ ರೀತಿಯಲ್ಲಿ ಪ್ರತ್ಯೇಕ ಟೇಬಲ್ ಇದೆ,  ಗಗನಸಖಿಯರು, ಫ್ಲೈಟ್​ ಅಟೆಂಡೆಂಟ್​ ಅವರನ್ನು ಕರೆಯಲು ಪ್ರತ್ಯೇಕ ಕಂಟ್ರೋಲ್​ ರಿಮೋಟ್​ ಇದೆ ಎಂದು ಹೇಳುವ ಮೂಲಕ ಅವುಗಳ ದರ್ಶನ ಮಾಡಿಸಿದ್ದಾರೆ. ಫ್ಲೈಟ್​ ಹೇಗೆ ಹೋಗುತ್ತಿದೆ ಎಂದು ಕುಳಿತಲ್ಲಿಯೇ ನೋಡಬಹುದಾದ ಮೊಬೈಲ್​ ವ್ಯವಸ್ಥೆಯೂ ವಿಮಾನದಲ್ಲಿ ಇದೆ, ಜೊತೆಗೆ ಐಪ್ಯಾಡ್​ ಕೂಡ ಇದೆ. ಈ ಕ್ಲಾಸ್​ನಲ್ಲಿ ಕುಳಿತು ಪ್ರಯಾಣಿಸುವುದು ಸಕತ್​ ಎಂಟರ್​ಟೇನ್​ಮೆಂಟ್​ ಕೊಡುತ್ತದೆ ಎಂದಿರುವ ಚೈತ್ರಾ, ಅಲ್ಲಿರುವ ವೈಫೈ ಸೌಲಭ್ಯ, ಕಾಲಿಡಲು ಇರುವ ಐಷಾರಾಮಿ ಸೌಲಭ್ಯದ ಕುರಿತು ತೋರಿಸಿದ್ದಾರೆ. ಸಮುದ್ರದ ಒಳಗಿರುವ ಸಸ್ಯದಿಂದ ಮಾಡಿರುವ ಊಟವನ್ನು ನೀಡಿರುವ ಡೆಲೀಷಿಯಲ್​ ಫುಡ್​ ತೋರಿಸಿರುವ ಚೈತ್ರಾ, ಇದು ಸಕತ್​ ಟೇಸ್ಟಿಯಾಗಿದೆ ಎಂದಿದ್ದಾರೆ.
  
ಅಂದಹಾಗೆ  ಚೈತ್ರಾ ವಾಸುದೇವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ದಿನಚರಿ, ಜೀವನದ ಆಗುಹೋಗುಗಳ ಬಗ್ಗೆ ಅವರು ಅಪ್​ಡೇಟ್ ನೀಡುತ್ತಾರೆ. ಇತ್ತೀಚೆಗೆ ಅವರು, ಪತಿ ಸತ್ಯ ನಾಯ್ಡು ಅವರಿಂದ ವಿಚ್ಛೇದನ ಪಡೆದಿರುವುದಾಗಿ ಮಾಹಿತಿ ನೀಡಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದರು.  ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಅವರು ತಿಳಿಸಿರಲಿಲ್ಲ.  ಸಾರ್ವಜನಿಕವಾಗಿ ಒಬ್ಬರನ್ನೊಬ್ಬರು ದೂರಿಕೊಳ್ಳದೇ  ಯಾವುದೇ ವಿವಾದ ಸೃಷ್ಟಿಸಿಕೊಳ್ಳದೇ  ಸೈಲೆಂಟ್ ಆಗಿ ವಿಚ್ಛೇದನ ಘೋಷಿಸಿದ್ದರು. ಅದರ ಬಗ್ಗೆ  ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು.  ‘ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ.  ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ.  ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದರು. ಅಂದಹಾಗೆ, ಚೈತ್ರಾ ತಮ್ಮದೇ ಉದ್ಯಮ ಹೊಂದಿದ್ದಾರೆ. ಅವರು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ಅವರಿಗೆ ಸಿನಿಮಾ ಆಫರ್​ಗಳನ್ನು ಅವರು ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.

ಸ್ವಂತ ಬಟ್ಟೆಯನ್ನು ಅರ್ಧ ಬೆಲೆಗೆ ಮಾರಿದ ಬಿಗ್ ಬಾಸ್ ಚೈತ್ರಾ ವಾಸುದೇವನ್; ಲಾಭವೆಷ್ಟು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?