ಬಿಗ್ ಬಾಸ್ ನಿಯಮ ಉಲ್ಲಂಘಿಸಿದ ಚೈತ್ರಾ; ಕಿಚ್ಚನ ಘರ್ಜನೆಗೆ ಹೆದರಿ ಮನೆಗೋಗ್ತೀನಿ ಬಿಟ್ಬಿಡಿ ಎಂದು ಕಣ್ಣೀರು!

By Sathish Kumar KH  |  First Published Nov 16, 2024, 6:44 PM IST

ಚೈತ್ರಾ ಕುಂದಾಪುರ ಅವರು ಆಸ್ಪತ್ರೆಯಲ್ಲಿ ಹೊರಗಿನವರ ಅಭಿಪ್ರಾಯಗಳನ್ನು ತಿಳಿದು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದ್ದು, ಕಿಚ್ಚ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ . ಇದರಿಂದ ಮನನೊಂದ ಚೈತ್ರಾ ಮನೆಯಿಂದ ಹೊರಹೋಗುವುದಾಗಿ ಕಣ್ಣೀರು ಹಾಕಿದ್ದಾರೆ.


ಬೆಂಗಳೂರು (ನ.16): ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿಬಿದ್ದ ಚೈತ್ರಾ ಕುಂದಾಪುರ ಚಿಕಿತ್ಸೆಗೆಂದು ಹೋದಾಗ ಅಲ್ಲಿನ ಡಾಕ್ಟರ್ ಹಾಗೂ ನರ್ಸ್‌ಗಳ ಬಾಯಲ್ಲಿ ಕಂಟೆಸ್ಟೆಂಟ್‌ಗಳ ಬಗ್ಗೆ ತಿರುವ ಒಪೀನಿಯನ್ ಬಗ್ಗೆ ತಿಳಿದುಕೊಂಡು ಮನೆಯಲ್ಲಿ ಹೇಳುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ ಅವರು ಚೈತ್ರಾಗೆ ಗ್ರಹಚಾರ ಬಿಡಿಸಿದ್ದಾರೆ. ಇದರಿಂದ ಮನನೊಂದ ಚೈತ್ರಾ ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಪ್ಲ್ಯಾನ್ ಮಾಡಿ ಆಟವಾಡುತ್ತಿರುವ ಚೈತ್ರಾ ಕುಂದಾಪುರ ಅವರು ನಿನ್ನೆ ಉತ್ತಮ, ಕಳಪೆ ಆಯ್ಕೆ ಮಾಡುವಾಗ ಬಾತ್ ರೂಮ್ ಏರಿಯಾದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಅಲ್ಲಿನ ಕಂಟೆಸ್ಟೆಂಟ್‌ಗಳು ಕರೆದುಕೊಂಡು ಕನ್ಫೆಷನ್‌ ಕೋಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ, ಚೈತ್ರಾ ಕುಂದಾಪುರ ಅವರು ರಾತ್ರಿಯನ್ನು ಆಸ್ಪತ್ರೆಯಲ್ಲೇ ಕಳೆದು ಬಂದಿದ್ದಾರೆ. ಆದರೆ, ಅಲ್ಲಿ ಡಾಕ್ಟರ್ ಹಾಗೂ ನರ್ಸ್ ಬಳಿ ಬಿಗ್ ಬಾಸ್ ಮನೆಯಲ್ಲಿರುವ ಎಲ್ಲ ಕಂಟೆಸ್ಟೆಂಟ್‌ಗಳ ಬಗ್ಗೆ ಜನರಿಗೆ ಏನೇನು ಅಭಿಪ್ರಾಯವಿದೆ ಎಂದು ತಿಳಿದುಕೊಂಡು ಬಂದಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: 'ಕಳಪೆ' ಪಟ್ಟಕ್ಕೆ ಹೆದರಿ ಬಾತ್‌ರೂಮ್‌ನಲ್ಲಿ ಪ್ರಜ್ಞೆ ತಪ್ಪಿದ್ದು ನಾಟಕ; ಚೈತ್ರಾ ಕುಂದಾಪುರ ವಿರುದ್ಧ ನೆಟ್ಟಿಗರ ಆಕ್ರೋಶ

ಆಸ್ಪತ್ರೆಯಲ್ಲಿ ಸುಮ್ಮನೆ ಚಿಕಿತ್ಸೆ ಪಡೆದು ಬಾರದೇ ಹೊರಗಿನ ಜನರಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಯಾವ್ಯಾವ ಅಭಿಪ್ರಾಯ ಇದೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ಬಿಗ್ ಬಾಸ್ ಸ್ಪರ್ಧೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದಾದ ನಂತರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಿಗ್ ಬಾಸ್ ಮನೆಗೆ ವಾಪಸ್ ಬಂದಿದ್ದಾರೆ. ಇಲ್ಲಿಯೂ ಆಸ್ಪತ್ರೆಯಲ್ಲಿ ಜನರ ಅಭಿಪ್ರಾಯ ಯಾವ್ಯಾವ ಸ್ಪರ್ಧಿಗಳ ಬಗ್ಗೆ ಏನೇನಿದೆ ಎಂಬುದನ್ನು ಎಲ್ಲ ಕಂಟೆಸ್ಟೆಂಟ್‌ಗಳಿಗೆ ಹೇಳುವ ಮೂಲಕ ಮತ್ತೊಮ್ಮೆ ನಿಯಮ ಉಲ್ಲಂಘಿಸಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟವಾಡುತ್ತಿರುವ ತ್ರಿವಿಕ್ರಮ್ ಬಗ್ಗೆ ಹೊರಗಿನವರ ಅಭಿಪ್ರಾಯವೇನಿದೆ ಎಂದು ಹೇಳುತ್ತಾ, 'ನಿಮಗೆ ಎಲ್ಲಿಯೂ ಬೆಲೆ ಇಲ್ಲ ಬಿಡಿ' ಎಂದು ಹೇಳಿದ್ದಾರೆ.

ಇರಲಾರದೇ ಇರುವೆ ಬಿಟ್ಟುಕೊಂಡ್ರಾ ಚೈತ್ರಾ?

ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 pic.twitter.com/KWCxI4jXC3

— Colors Kannada (@ColorsKannada)

ಕಿಚ್ಚ ಸುದೀಪ ಹೇಳಿದ್ದೇನು? ಚೈತ್ರಾ ಹೇಳಿದ್ದೇನು?
ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ ಅವರು ಚೈತ್ರಾ ಬಗ್ಗೆ ಮಾತನಾಡುತ್ತಾ, ನೀವು ಅನಾರೋಗ್ಯದ ಕಾರಣ ಮನೆ ಬಿಟ್ಟು ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ. ಬೆಳಗ್ಗೆ ವಾಪಸ್ ಬಿಗ್ ಬಾಸ್ ಮನೆಗೆ ಬಂದು ಯಾರಾರ ಬಗ್ಗೆ ಏನೇನು ಒಪೀನಿಯನ್ ಇದೆ ಎಂದು ಸ್ಪರ್ಧಿಗಳಿಗೆ ಹೇಳುವುದರ ಉದ್ದೇಶ ಏನು? ಎಂದು ಕೇಳಿದ್ದಾರೆ.
ಆಗ ಇದಕ್ಕೆ ತಪ್ಪೊಪ್ಪಿಕೊಳ್ಳದೇ ಪುನಃ ವಾದವನ್ನು ಮಾಡಿದ ಚೈತ್ರಾ ಕುಂದಾಪುರ, ನಾನೇ ಡಾಕ್ಟರ್ ಹತ್ತಿರ ಸ್ವಲ್ಪ ಕೇಳಿದ್ದೆ. ಅಲ್ಲಿದ್ದ ನರ್ಸ್ ಹೀಗೆ ವಿಚಾರಿಸಿದಾಗ ಅಲ್ಲಿ ಹೊರಗಿರುವವರ ಅಭಿಪ್ರಾಯ ಏನಿದೆ ಎಂದು ಹೇಳಿದ್ದಾರೆ. ಅದನ್ನೇ ಮನೆಯಲ್ಲಿ ಹೇಳಿದ್ದು, ಇದರಲ್ಲಿ ಯಾವುದೇ ನನ್ನ ಒಪೀನಿಯನ್ ಮಿಶ್ರಣ ಮಾಡಿ ಹೇಳಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಮುಗ್ಧ ಮನಸ್ಸಿನ ಮನುಷ್ಯ..' ಬಿಎಸ್‌ ಯಡಿಯೂರಪ್ಪ ಜೊತೆ ವಿಮಾನದಲ್ಲಿ ಸೋನು ಗೌಡ ಪ್ರಯಾಣ!

ಇದರಿಂದ ತೀವ್ರ ಕೋಪಗೊಂಡ ಕಿಚ್ಚ ಸುದೀಪ್ ಅವರು ಅಲ್ಲಿ ನಿಮಗೆ ಕಥೆ ಹೇಳಿದ್ರಾ ಡಾಕ್ಟರ್ ಎಂದು ಸಿನಿಮಾ ಸ್ಟೈಲ್‌ನಲ್ಲಿ ಶ್‌...., ಎಂದು ಕಣ್ಣು ಬಿಟ್ಟು ನೋಡುತ್ತಾರೆ.
ಇದಕ್ಕೆ ಬೆಚ್ಚಿದ ಚೈತ್ರಾ ಅವರು ಬಿಗ್ ಬಾಸ್ ಮನೆಯ ಕ್ಯಾಮರಾದ ಮುಂದೆ ಹೋಗಿ ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣ ಇಲ್ಲಿ ಇರುವುದರಿಂದ ಮನೆಗೆ ಹೋಗಬೇಕಂತ ನಾನು ನಿರ್ಧಾರ ಮಾಡಿದ್ದೀನಿ ಬಿಗ್ ಬಾಸ್ ಎಂದು ಕಣ್ಣೀರು ಹಾಕಿದ್ದಾರೆ.

click me!